Advertisement

Ind vs SA 1st Test: ಟೀಮ್ ಇಂಡಿಯಾ 245 ಕ್ಕೆ ಆಲೌಟ್, ಹರಿಣಗಳ 1 ವಿಕೆಟ್ ಪತನ

04:14 PM Dec 27, 2023 | Team Udayavani |

ಸೆಂಚುರಿಯನ್‌: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಎರಡನೇ ದಿನದಾಟದ ಆರಂಭದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ 245 ಕ್ಕೆ ಆಲೌಟ್ ಆಗಿದೆ.

Advertisement

70 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ಕೆ.ಎಲ್‌. ರಾಹುಲ್‌ ಅಮೋಘ ಶತಕವನ್ನು ಸಿಡಿಸಿದರು. 101 ರನ್ ಗಳಿಸಿ ಔಟಾದರು. 137ಎಸೆತಗಳಲ್ಲಿ 14 ಬೌಂಡರಿ ಮತ್ತು 4 ಸಿಕ್ಸರ್ ಸಿಡಿಸಿದರು. ಭಾರತ ತಂಡದಲ್ಲಿ ಏಕೈಕ ಅರ್ಧ ಶತಕ ಬಾರಿಸಿ ಆಪತ್ಬಾಂಧವನ ಪಾತ್ರ ವಹಿಸಿದ್ದ ರಾಹುಲ್ ಶತಕವನ್ನೂ ಸಿಡಿಸುವಲ್ಲಿ ಯಶಸ್ವಿಯಾದರು.

ದಕ್ಷಿಣ ಆಫ್ರಿಕಾ 11 ರನ್ ಗಳಿಸುವಷ್ಟರಲ್ಲಿ ಮೊದಲ ಶಾಕ್ ಅನುಭವಿಸಿತು. ಐಡೆನ್ ಮಾರ್ಕ್ರಾಮ್ ಅವರನ್ನು ಸಿರಾಜ್ ಔಟ್ ಮಾಡಿದರು. ಸಿರಾಜ್ ಎಸೆದ ಚೆಂಡು ಮಾರ್ಕ್ರಾಮ್ ಬ್ಯಾಟ್ ಗೆ ತಗುಲಿ ವಿಕೆಟ್ ಕೀಪರ್ ರಾಹುಲ್ ಕೈ ಸೇರಿತು. ಭೋಜನ ವಿರಾಮದ ವೇಳೆ 16 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 49 ರನ್ ಗಳಿಸಿದೆ. ಡೀನ್ ಎಲ್ಗರ್ 29 ರನ್ ಮತ್ತು ಟೋನಿ ಡಿ ಜೋರ್ಜಿ 12 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next