Advertisement
ಇನ್ನೂ ಮೂರು ದಿನಗಳ ಆಟ ಬಾಕಿ ಉಳಿದಿದ್ದು ದಕ್ಷಿಣ ಆಫ್ರಿಕಾವು ದೊಡ್ಡ ಮೊತ್ತ ಪೇರಿಸುವ ಸಾಧ್ಯತೆಯಿದೆ. 140 ರನ್ ಗಳಿಸಿರುವ ಎಲ್ಗರ್ ಔಟಾಗದೆ ಉಳಿದಿದ್ದು ಮೂರನೇ ದಿನ ಆಟ ಮುಂದುವರಿಸಲಿದ್ದಾರೆ. ಅವರು ಭಾರತೀಯ ದಾಳಿಯನ್ನು ದಿಟ್ಟವಾಗಿ ಎದುರಿಸಿದರೆ ಭಾರತಕ್ಕೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಎಲ್ಗರ್ ಸಹಿತ ದಕ್ಷಿಣ ಆಫ್ರಿಕಾವನ್ನು ಬೇಗನೇ ಆಲೌಟ್ ಮಾಡಿಸಿದರೆ ಭಾರತ ಗೆಲ್ಲುವ ಕಡೆ ಗಮನ ಹರಿಸಬಹುದು.ಈ ಮೊದಲು ಕೆಎಲ್ ರಾಹುಲ್ ಅವರ ಆಕರ್ಷಕ ಶತಕದಿಂದಾಗಿ ಭಾರತ ತಂಡವು 245 ರನ್ ಗಳಿಸಿ ಆಲೌಟಾಯಿತು.
ದಕ್ಷಿಣ ಆಫ್ರಿಕಾದ ಆರಂಭ ಉತ್ತಮ ವಾಗಿರಲಿಲ್ಲ. ಆರಂಭಿಕ ಐಡೆನ್ ಮಾರ್ಕ್‌ರಮ್ ಹೆಚ್ಚು ಹೊತ್ತು ನಿಲ್ಲಲು ವಿಫಲರಾದರು. ಅವರು 5 ರನ್ ಗಳಿಸಿದ ವೇಳೆ ಸಿರಾಜ್‌ಗೆ ವಿಕೆಟ್ ಒಪ್ಪಿಸಿದರು. ಆದರೆ ಡೀನ್ ಎಲ್ಗರ್ ಮತ್ತು ಈ ಹಿಂದಿನ ಪಂದ್ಯಗಳಲ್ಲಿ ಉತ್ತಮ ನಿರ್ವಹಣೆ ನೀಡಿದ್ದ ಟೋನಿ ಡಿ ಝೋರ್ಜಿ ಅವರು ಭಾರತೀಯ ದಾಳಿಯನ್ನು ದಿಟ್ಟವಾಗಿ ಎದುರಿಸಿ ತಂಡವನ್ನು ಸುಸ್ಥಿತಿಗೆ ತಲುಪಿಸಲು ಪ್ರಯತ್ನಿಸಿದರು. ಅವರಿಬ್ಬರು ದ್ವಿತೀಯ ವಿಕೆಟಿಗೆ 93 ರನ್ ಪೇರಿಸಿ ಬೇರ್ಪಟ್ಟರು. ಎಲ್ಗರ್ ಮತ್ತು ಈ ಪಂದ್ಯದ ಮೂಲಕ ಟೆಸ್ಟ್‌ಗೆ ಪದಾರ್ಪಣೆಗೈದ ಡೇವಿಡ್ ಬೆಡಿಂಗಂ ಅವರು ಭರ್ಜರಿ ಆಟದ ಪ್ರದರ್ಶನ ನೀಡಿದರಲ್ಲದೇ ನಾಲ್ಕನೇ ವಿಕೆಟಿಗೆ 131 ರನ್ನುಗಳ ಜತೆಯಾಟ ನಡೆಸಿ ತಂಡ ಮುನ್ನಡೆ ಸಾಧಿಸುವುದನ್ನು ಖಚಿತಪಡಿಸಿ ದರು. ಮುನ್ನಡೆ ಸಾಧಿಸಲು ಒಂದು ರನ್ ಇರುವಾಗ ಈ ಜೋಡಿ ಮುರಿಯಿತು. 56 ರನ್ ಗಳಿಸಿದ ಬೆಡಿಂಗಂ ಅವರು ಸಿರಾಜ್ ಎಸೆತದಲ್ಲಿ ಕ್ಲೀನ್‌ಬೌಲ್ಡ್ ಆದರು.
Related Articles
Advertisement
ಸಂಕ್ಷಿಪ್ತ ಸ್ಕೋರು: ಭಾರತ 245 (ವಿರಾಟ್ ಕೊಹ್ಲಿ 38, ಅಯ್ಯರ್ 31, ರಾಹುಲ್ 101, ಶಾದೂìಲ್ ಠಾಕುರ್ 24, ರಬಾಡ 59ಕ್ಕೆ 5, ನಾಂಡ್ರೆ ಬರ್ಗರ್ 50ಕ್ಕೆ 3); ದಕ್ಷಿಣ ಆಫ್ರಿಕಾ 5 ವಿಕೆಟಿಗೆ 256 (ಡೀನ್ ಎಲ್ಗರ್ 140 ಔಟಾಗದೆ, ಟೋನಿ ಝೋರ್ಜಿ 28, ಬೆಡಿಂಗಂ 56, ಬುಮ್ರಾ 48ಕ್ಕೆ 2, ಸಿರಾಜ್ 63ಕ್ಕೆ 2).