Advertisement

India vs Pakistan: ಇಂಡೋ – ಪಾಕ್‌ ಸೂಪರ್‌ -4; ಟಾಸ್‌ ಗೆದ್ದ ಬಾಬರ್ ಪಡೆ; ಮರಳಿದ ರಾಹುಲ್

02:34 PM Sep 10, 2023 | Team Udayavani |

ಕೊಲಂಬೊ: ಭಾರತ- ಪಾಕಿಸ್ಥಾನ ನಡುವಿನ ಮತ್ತೂಂದು ಸುತ್ತಿನ ಏಷ್ಯಾ ಕಪ್‌ ಕ್ರಿಕೆಟ್‌ ಕದನವನ್ನು ನೋಡಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದು, ಸೂಪರ್‌ -4 ಹಣಾಹಣೆಯಲ್ಲಿ ಪಾಕ್‌ ಟಾಸ್‌ ಗೆದ್ದು ಬೌಲಿಂಗ್  ಆಯ್ದುಕೊಂಡಿದೆ.

Advertisement

ಇಂಡೋ – ಪಾಕ್‌ ಏಷ್ಯಾಕಪ್‌ ನ ಲೀಗ್ ಪಂದ್ಯ ಮಳೆಯಿಂದ ರದ್ದಾಗಿತ್ತು. ಸೂಪರ್‌ -4 ಪಂದ್ಯ ಮಹತ್ವದಾಗಿರುವುದರಿಂದ ಈ ಪಂದ್ಯಕ್ಕೆ ಒಂದು ವೇಳೆ ಮಳೆ ಬಂದರೆ ಮೀಸಲು ದಿನವನ್ನು ಇರಿಸಲಾಗಿದೆ.

ಪಾಕಿಸ್ಥಾನ ಎದುರಿನ ಲೀಗ್‌ ಮುಖಾಮುಖಿಯ ವೇಳೆ ಭಾರತಕ್ಕೆ ಮಾತ್ರ ಬ್ಯಾಟಿಂಗ್‌ ಸಾಧ್ಯವಾಗಿತ್ತು. ಅಗ್ರ ಕ್ರಮಾಂಕದಲ್ಲಿ ಕುಸಿತ ಅನುಭವಿಸಿದಾಗ ಇಶಾನ್‌ ಕಿಶನ್‌ ಮತ್ತು ಹಾರ್ದಿಕ್‌ ಪಾಂಡ್ಯ ಸೇರಿಕೊಂಡು ಮೊತ್ತವನ್ನು 266ರ ತನಕ ಏರಿಸುವಲ್ಲಿ ಯಶಸ್ವಿಯಾಗಿದ್ದರು.

ಭಾರತಕ್ಕೆ ಕ್ರಮಾಂಕದ ಬ್ಯಾಟಿಂಗ್‌ ಚಿಂತೆ: ಗಿಲ್‌, ಅಯ್ಯರ್‌, ಕೊಹ್ಲಿ ಅವರೆಲ್ಲ ಪಾಕಿಸ್ಥಾನ ವಿರುದ್ಧ ಸಾಲು ಸಾಲಾಗಿ ವೈಫ‌ಲ್ಯ ಅನುಭವಿಸಿದ್ದಾರೆ. ಇವರೆಲ್ಲರೂ ಬ್ಯಾಟಿಂಗ್‌ ಲಯಕ್ಕೆ ಮರಳಬೇಕಿದೆ. ಮುಖ್ಯವಾಗಿ ಸೀನಿಯರ್‌ ಬ್ಯಾಟರ್‌ ಕೊಹ್ಲಿ ಹಳೆಯ ಫಾರ್ಮ್ ಕಾಣುವುದು ಮುಖ್ಯ. ಕೊಲಂಬೊದಲ್ಲಿ ಆಡಿದ ಕಳೆದ 3 ಏಕದಿನ ಪಂದ್ಯಗಳಲ್ಲಿ ಕೊಹ್ಲಿ ಶತಕ ಬಾರಿಸಿದ್ದಾರೆ ಎಂಬುದಿಲ್ಲಿ ಉಲ್ಲೇಖನೀಯ (ಅಜೇಯ 128, 131 ಮತ್ತು ಅಜೇಯ 110 ರನ್‌). ಇದು 4ಕ್ಕೆ ವಿಸ್ತರಿಸಿದರೆ ಭಾರತಕ್ಕೆ ಲಾಭ ಖಚಿತ. ಅಂದಹಾಗೆ, ನೇಪಾಲ ವಿರುದ್ಧ ಸಾಧಿಸಿದ 10 ವಿಕೆಟ್‌ ಜಯವನ್ನು ಲೆಕ್ಕಕ್ಕೆ ತೆಗೆದುಕೊಳ್ಳದಿರುವುದು ಒಳ್ಳೆಯದು!‌

ಈ ಪಂದ್ಯದಲ್ಲಿ ಶ್ರೇಯಸ್‌ ಅಯ್ಯರ್‌ ಅವರನ್ನು ಡ್ರಾಪ್‌ ಮಾಡಲಾಗಿದ್ದು, ಕೆ.ಎಲ್.ರಾಹುಲ್‌ ಕಂಬ್ಯಾಕ್‌ ಮಾಡಿದ್ದಾರೆ. ಬೆನ್ನು ನೋವಿನ ಕಾರಣದಿಂದ ಅಯ್ಯರ್‌ ಅವರನ್ನು ಪಂದ್ಯದಿಂದ ಹೊರಗಿಡಲಾಗಿದೆ.

Advertisement

ಪಾಕಿಸ್ಥಾನವೇ ಬಲಿಷ್ಠ:

ಯಾವ ಕೋನದಿಂದ ನೋಡಿದರೂ ಭಾರತಕ್ಕಿಂತ ಪಾಕಿಸ್ಥಾನವೇ ಬಲಿಷ್ಠವಾಗಿ ಗೋಚರಿಸುತ್ತದೆ. ಫ‌ಖಾರ್‌, ಬಾಬರ್‌, ಇಮಾಮ್‌, ಇಫ್ತಿಕಾರ್‌, ರಿಜ್ವಾನ್‌, ಆಲ್‌ರೌಂಡರ್‌ ಶದಾಬ್‌ ಅವರನ್ನೊಳಗೊಂಡ ಬ್ಯಾಟಿಂಗ್‌ ಲೈನ್‌ಅಪ್‌ ಅತ್ಯಂತ ವೈವಿಧ್ಯ ಮಯ. ಎಲ್ಲರೂ ಫಾರ್ಮ್ ನಲ್ಲಿರುವುದರಿಂದ ಚಿಂತಿಸಬೇಕಾದ ಅಗತ್ಯವಿಲ್ಲ.

ಪಾಕ್‌ ಬೌಲಿಂಗ್‌ ಕೂಡ ಅಪಾಯಕಾರಿ. ಪಲ್ಲೆಕೆಲೆಯಲ್ಲಿ ತ್ರಿವಳಿ ವೇಗಿಗಳಾದ ಅಫ್ರಿದಿ, ನಸೀಮ್‌ ಶಾ ಮತ್ತು ರವೂಫ್ ಸೇರಿಕೊಂಡು ಭಾರತದ ಅಷ್ಟೂ ವಿಕೆಟ್‌ಗಳನ್ನು ಉಡಾಯಿಸಿದ್ದರು. ಇವರನ್ನು ಎದುರಿಸಿ ನಿಂತು ರನ್‌ ಪೇರಿಸಿದರಷ್ಟೇ ಭಾರತದ ಮೇಲುಗೈ ನಿರೀಕ್ಷಿಸಬಹುದು.

ತಂಡಗಳು:

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆ.ಎಲ್.‌ ರಾಹುಲ್, ಇಶಾನ್ ಕಿಶನ್ (ವಿ.ಕೀ), ಹಾರ್ದಿಕ್ ಪಾಂಡ್ಯ (ಉ.ನಾ), ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ಪಾಕಿಸ್ತಾನ: ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ನಾ), ಮೊಹಮ್ಮದ್ ರಿಜ್ವಾನ್ (ವಿ.ಕೀ), ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್

Advertisement

Udayavani is now on Telegram. Click here to join our channel and stay updated with the latest news.

Next