ಅಜೆಕಾರು: ಮರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ರೆಂಜ, ಕುರ್ಪಾಡಿ, ಬಂಡಸಾಲೆ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು ಅಸಮರ್ಪಕ ಟ್ಯಾಂಕರ್ ನೀರು ಪೂರೈಕೆ ಬಗ್ಗೆ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀರು ಬರುತ್ತಿಲ್ಲ
ಪಂಚಾಯತ್ 2 ದಿನಗಳಿ ಗೊಮ್ಮೆ 200 ಲೀ.ನೀರು ಪೂರೈಕೆ ಮಾಡುತ್ತಿದೆ ಎಂದು ಹೇಳುತ್ತಿದೆ ಯಾದರೂ ಕೆಲ ಭಾಗ ಗಳಿಗೆ ವಾರಕ್ಕೆ ಒಂದು ಬಾರಿ ಮಾತ್ರ ನೀರು ಪೂರೈಕೆ ಆಗುತ್ತಿದೆ ಎನ್ನ ಲಾಗಿದೆ. ಟ್ಯಾಂಕರ್ ನೀರು ಪೂರೈಕೆಯೂ ಅಸಮರ್ಪಕವಾಗಿದ್ದು, ಕೆಲ ಮನೆಗಳಿಗೆ ನೀರು ಬರುತ್ತಿಲ್ಲ ಎಂದು ನಿವಾಸಿಗಳು ದೂರಿದ್ದಾರೆ.
ಇಲ್ಲದ ನಳ್ಳಿ ನೀರಿನ ವ್ಯವಸ್ಥೆ
ಈ ಭಾಗದ ಜನತೆ ಕಳೆದ ಹಲವು ವರ್ಷಗಳಿಂದ ನಳ್ಳಿ ನೀರಿನ ಸಂಪರ್ಕ ನೀಡುವಂತೆ ಮನವಿ ಮಾಡಿದ್ದರೂ ಪಂಚಾಯತ್ ಆಡಳಿತ ನಳ್ಳಿ ನೀರಿನ ಸಂಪರ್ಕ ನೀಡುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತೀ ವರ್ಷ ಕುಡಿಯುವ ನೀರಿನ ಸಮಸ್ಯೆ ಬರುತ್ತಿದ್ದು ಇದಕ್ಕೆ ಪರಿಹಾರ ಯೋಜನೆಗಳನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜಾರಿಗೆ ತರುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮಾರ್ಚ್ ತಿಂಗಳಿನಲ್ಲಿಯೇ ತೆರೆದ ಬಾವಿಗಳ ಜಲಮಟ್ಟ ಕುಸಿದು ಬಟ್ಟೆ ಒಗೆಯಲು ಶಾಂತಿನಗರ ಪರಿಸರದ ಸುಮಾರು ಒಂದೆರಡು ಕಿ.ಮೀ. ದೂರದ ಕಕ್ಕೆಗುಂಡಿ ಹಳ್ಳಕ್ಕೆ ತೆರಳಬೇಕಾಗಿದೆ ಎಂದು ಸುಜಾತಾ ಹೇಳುತ್ತಾರೆ.
ಅಸಮರ್ಪಕ ಕೊಳವೆ ಬಾವಿ ನಿರ್ಮಾಣ
ಪಂಚಾಯತ್ ವ್ಯಾಪ್ತಿಯಲ್ಲಿ ಲೆಕ್ಕವಿಲ್ಲದಷ್ಟು ಖಾಸಗಿ ಕೊಳವೆ ಬಾವಿಗಳ ನಿರ್ಮಾಣಕ್ಕೆ ಅನುಮತಿ ನೀಡಿದ ಪರಿಣಾಮವಾಗಿ ತೆರೆದ ಬಾವಿಗಳಲ್ಲಿ ನೀರೇ ಇಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.