Advertisement
ಇತ್ತೀಚಿನ ದಿನಗಳಲ್ಲಿ ವೆಸ್ಟ್ ಕೋಟ್ ಧಿರಿಸುವುದು ಟ್ರೆಂಡ್ ಆಗಿ ಬಿಟ್ಟಿದೆ. ಮದುವೆ ಸಮಾರಂಭಗಳಲ್ಲಂತೂ ಶರ್ಟ್ ಮೇಲೊಂದು ವೈಸ್ಟ್ ಕೋಟ್ ಧರಿಸುವ ಮಂದಿ ಹೆಚ್ಚು. ಅದಕ್ಕೆ ತಕ್ಕಂತೆಯೇ ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸಗಳ ವೈಸ್ಟ್ ಕೋಟ್ ಇದೆ. ಅಂದಹಾಗೆ ವೈಸ್ಟ್ ಕೋಟ್‌ಗಳು ಮಾಮೂಲಿ ಕೋಟಿಗಿಂತ ಭಿನ್ನವಾದುದು. ಒಂದು ಕಾಲದಲ್ಲಿ ಶ್ರೀಮಂತ ಧಿರಿಸಾಗಿದ್ದ ಈ ಕೋಟ್ ಇಂದು ಸಾಮಾನ್ಯ ಮಂದಿಯೂ ಬಳಕೆ ಮಾಡುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಮಕ್ಕಳು ಬಳಸುವಂತಹ ವೆಸ್ಟ್ ಕೋಟ್ ಗಳಿಗೂ ಬೇಡಿಕೆ ಹೆಚ್ಚಿದೆ. ಕೆಲವೊಂದು ಶಾಲಾ- ಕಾಲೇಜುಗಳಲ್ಲಿ ಸಮವಸ್ತ್ರದ ಜತೆಗೆ ಕೋಟ್ ಧರಿಸುವ ಕ್ರಮವಿದೆ. ಇದೇ ಕಾರಣಕ್ಕೆ ವಿದ್ಯಾರ್ಥಿಗಳ ಫೆವರೇಟ್ ಆಗಿದೆ. ವೆಸ್ಟ್ ಕೋಟ್‌ನಲ್ಲಿ ಅನೇಕ ವಿಧಗಳಿದ್ದು ಅದರಲ್ಲಿ ಸಾಮಾನ್ಯವಾಗಿ ಬಳಸುವಂತಹದ್ದು ‘ದಿ ಕ್ಲಾಸಿಕ್ ವೆಸ್ಟ್ ಕೋಟ್’ ಈ ವೆಸ್ಟ್ ಕೋಟ್‌ನಲ್ಲಿ 6 ರಿಂದ 8 ಬಟನ್‌ಗಳಿರುತ್ತದೆ. ಈ ಕೋಟ್‌ನ ಹಿಂದಿನ ಬದಿಯಲ್ಲಿ ಪಟ್ಟಿ ಇದ್ದು, ಇದರಿಂದಾಗಿ ಫಿಟ್ ಆಗಿ ಕಾಣುತ್ತದೆ. ಇದು ಸಾಂಪ್ರದಾಯಿಕ ಉಡುಗೆಯಾಗಿದೆ. ‘ಡೊನೆಗಲ್ ಟ್ವೀಡ್’ ಮಾದರಿಯ ವೆಸ್ಟ್ ಕೋಟ್ ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಈ ಕೋಟ್ ಧರಿಸಲು ತುಂಬಾ ಹಗುರವಾಗಿದೆ. ಕೋಟ್ ಪೂರ್ತಿ ಒಂದೇ ಬಣ್ಣದಿಂದ ಹರಡಿದ್ದು ಉತ್ತಮ ಲುಕ್ ಕೊಡುತ್ತದೆ. ಸಾಮಾನ್ಯವಾಗಿ ಬೇಸಗೆ ಸಮಯದಲ್ಲಿ ಈ ಕೋಟ್ ಗಳನ್ನು ಹೆಚ್ಚಾಗಿ ಬಳಸಬಹುದು. ಡಿನ್ನರ್, ಔತಣ ಕೂಟ ಸೇರಿದಂತೆ ರಾತ್ರಿ ನಡೆಯಲು ಶುಭ ಸಮಾರಂಭಕ್ಕೆ ಈ ಕೋಟ್ ಕಳೆ ನೀಡುತ್ತದೆ.
Related Articles
Advertisement
ಆನ್‌ಲೈನ್‌ನಲ್ಲಿ ಹೆಚ್ಚಿನ ಕಲೆಕ್ಷನ್ಸಾಮಾನ್ಯ ಮಾರುಕಟ್ಟೆಗಳಿಗಿಂತ ಆನ್‌ಲೈನ್ ಮಾರುಕಟ್ಟೆಯಲ್ಲಿ ಹೆಚ್ಚಿನ ಕಲೆಕ್ಷನ್‌ಗಳ ವೈಸ್ಟ್ ಕೋಟ್‌ಗಳು ಲಭ್ಯವಿದೆ. ಅಲ್ಲದೆ ಸಾಮಾನ್ಯವಾಗಿ 1,000 ರೂ.ನಿಂದ 20,000ಕ್ಕಿಂತ ಹೆಚ್ಚು ಬೆಲೆಯ ಕೋಟ್‌ಗಳು ಕೂಡ ಲಭ್ಯವಿವೆ. ಇದೇ ಕಾರಣಕ್ಕೆ ಹೆಚ್ಚಿನ ಮಂದಿ ವೆಸ್ಟ್ ಕೋಟ್ ಖರೀದಿಗೆ ಆನ್‌ಲೈನ್ ತಾಣವನ್ನು ಆಯ್ಕೆ ಮಾಡುತ್ತಾರೆ. 1866ರ ದಿರಿಸು
ವೈಸ್ಟ್ ಕೋಟ್ ದಿರಿಸಿಗೆ ಅನೇಕ ವರ್ಷಗಳ ಇತಿಹಾಸವಿದೆ. ಅಮೆರಿಕ ಭಾಷೆಯ ವೈಸ್ಟ್ ಎಂಬ ಪದದಿಂದ ಬಂದಿದೆ. ಇಂಗ್ಲಂಡ್, ಸ್ಕಾಟ್ಲೆಂಡ್ ಮತ್ತು ಐರೆಲಂಡ್ ದೇಶಗಳಲ್ಲಿ 1866ರಲ್ಲಿ ಬ್ರಿಟಿಷ್ ರಾಜಪ್ರಭುತ್ವದ ಸಮಯದಲ್ಲಿ ಅಲ್ಲಿನ ದಿರಿಸಾಗಿ ವೈಸ್ಟ್ ಕೋಟ್ ಉಪಯೋಗಕ್ಕೆ ಬಂತು. ಬಳಿಕ ಭಾರತ ಸೇರಿದಂತೆ ಇನ್ನಿತರ ದೇಶಗಳಿಗೆ ಬಂತು. ಬೇಡಿಕೆ ಇದೆ
ಇತ್ತೀಚಿನ ದಿನಗಳಲ್ಲಿ ವೆಸ್ಟ್ ಕೋಟ್‌ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಆದರೂ, ಹೆಚ್ಚಿನ ಮಂದಿ ಆನ್‌ಲೈನ್‌ನಲ್ಲಿ ಖರೀದಿ ಮಾಡುತ್ತಾರೆ. ಸಾಮಾನ್ಯವಾಗಿ ಕ್ಯಾಶುವಲ್ ಪ್ಯಾಂಟ್, ಶರ್ಟ್, ಟೈ ದಿರಿಸಿಗೆ ವೈಸ್ಟ್ ಕೋಟ್ ಹೊಂದುತ್ತದೆ. ಅಲ್ಲದೆ ಒಳ್ಳೆಯ ಲುಕ್ ನೀಡುತ್ತದೆ.
– ಪ್ರವೀಣ್ ಚೌಧರಿ,
ಅಂಗಡಿ ಮಾಲಕ ನವೀನ್ ಭಟ್ ಇಳಂತಿಲ