ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 12 ಕೇಂದ್ರಗಳಲ್ಲಿ ಬುಧವಾರ 1,097 ಮಂದಿಗೆ ಕೋವಿಡ್ ಲಸಿಕೆ ಗುರಿ ಹೊಂದಿದ್ದು, 681 ಮಂದಿಗೆ ಹಾಕಲಾಗಿದೆ. ಈ ಮೂಲಕ ಶೇ. 62.08 ಗುರಿ ಸಾಧನೆಯಾಗಿದೆ.
ಜಿಲ್ಲೆಯಲ್ಲಿ ಲಸಿಕೆ ಅಭಿಯಾನ ಆರಂಭಗೊಂಡು ನಾಲ್ಕು ದಿನಗಳಾಗಿದ್ದು, ದಿನದಿಂದ ದಿನಕ್ಕೆ ಲಸಿಕೆ ಪಡೆದುಕೊಳ್ಳುವವರ ಸಂಖ್ಯೆ ಏರುತ್ತಿದೆ.
ಜ. 25: ಎರಡನೇ ಹಂತದ ಪಟ್ಟಿ :
ಲಸಿಕೆ ನೀಡುವ ಮೊದಲ ಹಂತದ ಅಭಿಯಾನ ಸದ್ಯ ನಡೆಯುತ್ತಿದ್ದು, ಸದ್ಯದಲ್ಲಿಯೇ 2ನೇ ಹಂತದ ಅಭಿಯಾನ ನಡೆಯಲಿದೆ. ಸಿದ್ಧತೆಗಳು ಈಗಾಗಲೇ ನಡೆಯುತ್ತಿವೆ. ಎರಡನೇ ಹಂತದಲ್ಲಿ ಪೊಲೀಸ್ ಇಲಾಖೆ, ಗ್ರಾಮೀಣ ಅಭಿವೃದ್ಧಿ ಇಲಾಖೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಲಸಿಕೆ ನೀಡಲಾಗುತ್ತದೆ. ಇಲಾಖೆಯಿಂದ ಹೆಸರಿನ ಪಟ್ಟಿ ಸಲ್ಲಿಕೆಗೆ ಜ. 25ರಂದು ಕೊನೆಯ ದಿನವಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉಡುಪಿ ಜಿಲ್ಲೆ: ಶೇ. 64.5 ಪ್ರಗತಿ :
ಉಡುಪಿ: ಜಿಲ್ಲೆಯಲ್ಲಿ ಬುಧವಾರ 829 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. 1,256 ಮಂದಿಗೆ ಮಂದಿಗೆ ಲಸಿಕೆ ನೀಡಲು ಉದ್ದೇಶಿಸಲಾಗಿತ್ತು. ಇದುವರೆಗೆ ಜಿಲ್ಲೆಯಲ್ಲಿ 2,230 ಗುರಿ ನೀಡಲಾಗಿತ್ತು. 1,439 ಮಂದಿಗೆ ಲಸಿಕೆ ಹಾಕಲಾಗಿದೆ. ಒಟ್ಟು ಶೇ. 64.5 ಪ್ರಗತಿ ಸಾಧಿಸಿದೆ. ಜ. 21ಕ್ಕೆ 1,300 ಲಸಿಕೆ ವಿತರಣೆ ಗುರಿ ನಿಗದಿ ಪಡಿಸಲಾಗಿದೆ.