Advertisement

ಪ್ರಯಾಣಿಕರ ಸಂಖ್ಯೆ ವೃದ್ಧಿ : ವಿಮಾನಯಾನ ಏರಿಕೆ

12:25 AM Sep 03, 2021 | Team Udayavani |

ಮಂಗಳೂರು: ಕೊರೊನಾ ಸಂಕಟದ ಮಧ್ಯೆಯೇ ದೇಶ-ವಿದೇಶಗಳಿಗೆ ಮಂಗಳೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನಯಾನ ಸೇವೆ ಏರಿಕೆಯಾ ಗಿದ್ದು ಪ್ರಯಾಣಿಕರ ಸಂಖ್ಯೆಯೂ ಹೆಚ್ಚಳವಾಗಿದೆ.

Advertisement

ದೇಶದ ವಿವಿಧ ರಾಜ್ಯಗಳಿಗೆ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಆಗಸ್ಟ್‌ನಲ್ಲಿ 26,067 ಪ್ರಯಾಣಿಕರು ತೆರಳಿದ್ದಾರೆ. ಜುಲೈ ಯಲ್ಲಿ ಈ ಸಂಖ್ಯೆ 18,557 ಆಗಿತ್ತು. ಈ ಮೂಲಕ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ. 40ರಷ್ಟು ಏರಿಕೆ ದಾಖಲಿ ಸಿದಂತಾಗಿದೆ. ಈ ಮಧ್ಯೆ ಆಗಸ್ಟ್‌ನಲ್ಲಿ ವಿವಿಧ ರಾಜ್ಯಗಳಿಂದ ಮಂಗಳೂರಿಗೆ 26,732 ಪ್ರಯಾಣಿಕರು ಬಂದಿಳಿದಿ ದ್ದರೆ, ಜುಲೈಯಲ್ಲಿ ಈ ಸಂಖ್ಯೆ 19,744 ಆಗಿತ್ತು.

ಭಾರತದೊಳಗೆ ಮತ್ತು ವಿದೇಶ ಗಳು ಪ್ರಯಾಣ ನಿರ್ಬಂಧಗಳನ್ನು ಸಡಿಲಗೊಳಿಸಿರುವುದರಿಂದ ವಿವಿಧ  ವಿಮಾನ ಯಾನ ಸಂಸ್ಥೆಗಳು ಮಂಗಳೂರಿನಿಂದ ವಿವಿಧ ಸ್ಥಳಗಳಿಗೆ ವಿಮಾನಯಾನವನ್ನು ಪುನರಾರಂಭಿಸಿರುವುದರಿಂದ ಪ್ರಯಾಣಿಕರ ಸಂಖ್ಯೆ ಏರಿಕೆ ಕಂಡಿದೆ.

ಕೊರೊನಾ ಬಳಿಕ ಇಂಡಿಗೋ ಸಂಸ್ಥೆಯು ಶಾರ್ಜಾಕ್ಕೆ ತನ್ನ ವಿಮಾನ ಯಾನ ಪುನರಾರಂಭಿಸಿದೆ. ಹೈದಾರಾ ಬಾದ್‌ಗೂ ಹೆಚ್ಚುವರಿ ಹಾರಾಟ ಆರಂಭಿಸಿದೆ. ಏರ್‌ ಇಂಡಿಯಾ ಎಕ್ಸ್‌ ಪ್ರಸ್‌ ಅಬುಧಾಬಿ ಸಂಚಾರವನ್ನು ಪುನರಾರಂಭಿಸಿದೆ. ಆಗಸ್ಟ್‌ನಲ್ಲಿ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಅಬುಧಾಬಿ, ದುಬಾೖ, ತಿರುವನಂತಪುರಕ್ಕೆ ಯಾನ ನಡೆಸಿದ್ದರೆ, ಇಂಡಿಗೋ ಹೈದರಾ ಬಾದ್‌ ಮತ್ತು ಶಾರ್ಜಾಕ್ಕೆ, ಏರ್‌ ಇಂಡಿಯಾವು ಮುಂಬಯಿ ಮತ್ತು ಕೊಯಮತ್ತೂರಿಗೆ ಪ್ರತಿನಿತ್ಯದ ಯಾನ ಆರಂಭಿಸಿದೆ ಎಂದು ನಿಲ್ದಾಣದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next