Advertisement

ಗೋವಾ: ಬೀಚ್ ಗಳಲ್ಲಿ ಹೆಚ್ಚಾಗುತ್ತಿದೆ ಪ್ರವಾಸಿಗರ ಸಂಖ್ಯೆ; ಕೋವಿಡ್ ನಿಯಮ ಬಗ್ಗೆ ನಿರ್ಲಕ್ಷ್ಯ

07:35 PM Dec 23, 2021 | Team Udayavani |

ಪಣಜಿ: ದೇಶದಲ್ಲಿ ಓಮಿಕ್ರಾನ್ ರೂಪಾಂತರಿ ಸೋಂಕಿನ ಭೀತಿಯ ನಡುವೆಯೂ ಗೋವಾದಲ್ಲಿ ಕ್ರಿಸ್‍ಮಸ್ ಮತ್ತು ಹೊಸ ವರ್ಷಾಚರಣೆಗಾಗಿ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆದರೆ ಪ್ರವಾಸಿಗರು ಕರೋನಾ ಪ್ರೋಟೊಕಾಲ್‍ಗಳನ್ನು ಅನುಸರಿಸದಿರುವುದು ಆತಂಕಕ್ಕೆ ಕಾರಣವಾಗಿದೆ.

Advertisement

ಲಾಕ್‍ಡೌನ್ ತೆರವಿನ ನಂತರ ಗೋವಾಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗ ಮಿಸುತ್ತಿರುವುದು ಸಂತಸದ ಸಂಗತಿ, ಆದರೆ ಇಲ್ಲಿ ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಲಾಗುತ್ತಿರುವುದು ಆತಂಕ ಹೆಚ್ಚುವಂತಾಗಿದೆ.

ವೈದ್ಯಕೀಯ ತಜ್ಞರ ಪ್ರಕಾರ ಗೋವಾಕ್ಕೆ ಭೇಟಿ ನೀಡುವ ಪ್ರವಾಸಿಗರು ಕೋವಿಡ್ ನಿಯಮಾವಳಿಗಳನ್ನು ಪಾಲಿಸದಿರುವುದು ಮುಂಬರುವ ದಿನಗಳಲ್ಲಿ ಹೆಚ್ಚಿನ ಸಮಸ್ಯೆ ಎದುರಾಗುವ ಭೀತಿಯಿದೆ. ಇದರಿಂದಾಗಿ ಕರೋನಾ ಸೋಂಕು ಹರಡುವ ಸಾಧ್ಯತೆಯಿದೆ.

ಸದ್ಯ ಗೋವಾದಲ್ಲಿ 392 ಕರೋನಾ ಸಕ್ರೀಯ ಪ್ರಕರಣಗಳಿವೆ. ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ 1.7 ರಷ್ಟಿದೆ. ಚೇತರಿಕೆಯ ಪ್ರಮಾಣ ಶೇ 97.8 ರಷ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next