Advertisement

ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ: ಡಿಡಿಪಿಐ

08:38 PM Dec 09, 2020 | mahesh |

ಉಡುಪಿ: ಖಾಸಗಿ ಶಾಲೆಯಿಂದ ಸರಕಾರಿ ಶಾಲೆಗೆ ದಾಖಲಾಗುವವರಿಗೆ ಟಿಸಿ ಕೊಡದೆ ಸತಾಯಿಸುವಂತಿಲ್ಲ ಹಾಗೂ ಒತ್ತಾಯ ಪೂರ್ವಕವಾಗಿ ಶುಲ್ಕ ವಸೂಲು ಮಾಡುವ ಶಾಲೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸರಕಾರಕ್ಕೆ ಬರೆಯಲಾಗುವುದು ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್‌.ಎಚ್‌.ನಾಗೂರ ತಿಳಿಸಿದರು.

Advertisement

ಬುಧವಾರ ಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈ ವರ್ಷ ಒಟ್ಟು 1,832 ಮಕ್ಕಳು ಖಾಸಗಿ ಶಾಲೆಯಿಂದ ಸರಕಾರಿ ಶಾಲೆಗಳಿಗೆ ದಾಖಲಾಗಿದ್ದಾರೆ. ಕಾರ್ಕಳ, ಬ್ರಹ್ಮಾವರ ವಲಯ ವ್ಯಾಪ್ತಿಯಲ್ಲಿ ಇಂತಹ ಮಕ್ಕಳ ಸಂಖ್ಯೆ ಹೆಚ್ಚಿದೆ. ಕೇವಲ ಒಂದನೆ ತರಗತಿ ಮಾತ್ರವಲ್ಲ, ಇತರ ತರಗತಿಗಳಿಗೂ ಮಕ್ಕಳು ಸೇರ್ಪಡೆಯಾಗಿದ್ದಾರೆ. ಇದಕ್ಕೆ ದುಬಾರಿ ಶುಲ್ಕ ಮತ್ತು ಕೊರೊನಾದಿಂದ ಉಂಟಾಗಿರುವ ಆರ್ಥಿಕ ಸಮಸ್ಯೆಯೇ ಮುಖ್ಯ ಕಾರಣ ಎಂದರು.

ಶಿಕ್ಷಕರ ವಿಶೇಷ ಸಭೆ
ವಿದ್ಯಾಗಮ ಕಾರ್ಯಕ್ರಮದಲ್ಲಿ ಎಲ್ಲ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಶಿಕ್ಷಕರು ನಿರಂತರ ಮಾರ್ಗದರ್ಶನ ನೀಡುತ್ತಿದ್ದಾರೆ. ಶೇ.60ಕ್ಕಿಂತ ಕಡಿಮೆ ಫ‌ಲಿತಾಂಶ ಪಡೆದಿರುವ ಶಾಲೆಗಳ ಮುಖ್ಯ ಶಿಕ್ಷಕರ ಸಭೆಯನ್ನು ಪ್ರತ್ಯೇಕವಾಗಿ ಕರೆದು ಅವರಿಗೆ ಅಗತ್ಯ ಮಾರ್ಗದರ್ಶನ ಮಾಡಲು ಯೋಜನೆ ರೂಪಿಸಲಾಗಿದೆ. ಜನವರಿ ತಿಂಗಳಿನಿಂದ ಪ್ರತಿ ವಾರವೂ ಎಸೆಸೆಲ್ಸಿಯ ಒಂದು ವಿಷಯಕ್ಕೆ ಸಂಬಂಧಿಸಿ ಮಕ್ಕಳಿಗೆ ಫೋನ್‌ ಇನ್‌ ಕಾರ್ಯಕ್ರಮ ನಡೆಸ ಲಾಗುತ್ತದೆ. ಪಾಲಕರ ಮನೆಗಳಿಗೆ ಭೇಟಿ ನೀಡುವ ಕಾರ್ಯಕ್ರಮವನ್ನು ಕೂಡ ಹಾಕಿಕೊಳ್ಳಲಾಗುವುದು ಎಂದರು.

ಜನವರಿಯಿಂದ ಶಿಬಿರ
ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಸಹ ಶಿಕ್ಷಕರಿಗೆ ಶಿಕ್ಷಣ ಸಂಯೋಜಕರ ವಲಯದಡಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬೋಧನಾ ಪ್ರಾವೀಣ್ಯತೆ ಮತ್ತು ಮನೋಬಲ ಬದಲಾವಣೆಗೆ ಜನವರಿ ಯಿಂದ ವಾರಕ್ಕೆ ಒಂದು ಶನಿವಾರ, ರವಿವಾರ ಶಿಬಿರಗಳನ್ನು ಆರಂಭಿಸಲಾಗು ವುದು ಎಂದು ಅವರು ತಿಳಿಸಿದರು.

ಶೈಕ್ಷಣಿಕ ಚಿಂತನ ಮಂಥನ ಸಭೆ
ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಒಂದು ದಿನದ ಶೈಕ್ಷಣಿಕ ಚಿಂತನ ಮಂಥನ ಸಭೆ ನಡೆಸಿ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತು ತಿಳಿಸಲಾಗಿದೆ. ತಾಲೂಕುಗಳ ಸಿಆರ್‌ಪಿ ಅವರಿಂದ ಡಿಡಿಪಿಐವರೆಗೆ ಸಭೆ ನಡೆಸಿ ಶೈಕ್ಷಣಿಕ ಕಾರ್ಯಕ್ರಮಗಳ ಅನುಷ್ಠಾನ, ಮೇಲ್ವಿಚಾರಣೆಯ ಮಾರ್ಗದರ್ಶನ ನೀಡುವ ಕ್ರಮಗಳ ಕುರಿತು ತಿಳಿಸಲಾಗಿದೆ ಎಂದರು.

Advertisement

ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ನಾಗೇಂದ್ರಪ್ಪ, ಬ್ರಹ್ಮಾವರ ಶಿಕ್ಷಣ ಸಂಯೋಜಕ ಪ್ರಕಾಶ್‌ ಬಿ.ಬಿ., ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಓ.ಆರ್‌.ಪ್ರಕಾಶ್‌, ಮುದ್ರಾಡಿ ನೆಲ್ಲಿಕಟ್ಟೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ರವೀಂದ್ರ ಹೆಗ್ಡೆ ಉಪಸ್ಥಿತರಿದ್ದರು.

11,000 ಎಸೆಸೆಲ್ಸಿ ವಿದ್ಯಾರ್ಥಿಗಳು
ಜಿಲ್ಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 11,000 ಎಸೆಸೆಲ್ಸಿ ವಿದ್ಯಾರ್ಥಿಗಳಿದ್ದಾರೆ. ಅವರ ಪರೀಕ್ಷೆ ಹಾಗೂ ಫ‌ಲಿತಾಂಶದ ಬಲವರ್ಧನೆಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಲಿಕಾ ನಿರಂತರತೆ ಕಾಪಾಡಿಕೊಳ್ಳಲು ಶಾಲೆ ಯಲ್ಲಿ ಮಕ್ಕಳ ವಾಟ್ಸ್‌ಆ್ಯಪ್‌ ಗುಂಪು ಗಳನ್ನು ರಚಿಸಿಕೊಂಡು ವಿಷಯ ವಾರು ಶಿಕ್ಷಕರು ನಿರಂತರ ವಾಗಿ ಮಕ್ಕಳೊಂದಿಗೆ ಸಂಪರ್ಕ ನಡೆಸುತ್ತಿ ದ್ದಾರೆ. ಶಿಕ್ಷಕರು ಶಾಲೆಯಲ್ಲಿ ಲಭ್ಯ ವಿರುವುದರಿಂದ ಕೆಲವು ಮಕ್ಕಳು ಸಾಮಾಜಿಕ ಅಂತರ ಕಾಪಾಡಿ ಶಾಲೆಗೆ ಬಂದು ಮನೆ ಪಾಠಗಳನ್ನು ತಿದ್ದಿಸಿ ಕೊಂಡು ಹೋಗುತ್ತಿದ್ದಾರೆ ಡಿಡಿಪಿಐ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next