ಮುಂಬೈ: ದೇಶದ ವಿವಿಧ ಕಂಪೆನಿಗಳಲ್ಲಿ ಮಹಿಳಾ ಭಾಗೀದಾರಿಕೆ ಹೆಚ್ಚಾಗಿದೆ. ಐದು ವರ್ಷಗಳ ಹಿಂದೆ ಶೇ.21ರಷ್ಟಿದ್ದ ಮಹಿಳೆಯರ ಸಂಖ್ಯೆ ಈಗ ಶೇ.30ರಷ್ಟಕ್ಕೇರಿದೆ. ತಾಂತ್ರಿಕೇತರ ಹಿದ್ದೆಗಳಲ್ಲಿ ಮಹಿಳಾ ಉದ್ಯೋಗಿಗಳು ಶೇ.31ರಷ್ಟಿದ್ದರೆ ತಾಂತ್ರಿಕ ಕೆಲಸಗಳಲ್ಲಿ ಶೇ.26ರಷ್ಟಿದ್ದಾರೆ ಎಂದು ಝಿನ್ನಾವ್ ಹೆಸರಿನ ಮ್ಯಾನೇಜ್‌ಮೆಂಟ್ ಕನ್ಸಲ್ಟೆಷನ್ ಕಂಪೆನಿ ನಡೆಸಿದ ಸಮೀಕ್ಷೆ ಹೇಳಿದೆ.
ಇದರೊಂದಿಗೆ ಕಂಪೆನಿಗಳಲ್ಲಿರುವ ಶೇ.11ರಷ್ಟು ಸೀನಿಯರ್ ಲೀಡರ್‌ಗಳು ಮಹಿಳೆಯರಾಗಿದ್ದಾರೆ. ಮಧ್ಯಮ ಲೀಡರ್‌ಗಳಲ್ಲಿ ಶೇ.20ರಷ್ಟಿದ್ದರೆ, ಜ್ಯೂನಿಯರ್ ವರ್ಗದಲ್ಲಿ ಶೇ.38ರಷ್ಟಿದ್ದಾರೆ ಎನ್ನಲಾಗಿದೆ.
ಇದರೊಂದಿಗೆ ಕಂಪೆನಿ ಆಡಳಿತ ಮಂಡಳಿಯಲ್ಲೂ ಮಹಿಳೆಯರ ಭಾಗೀದಾರಿಕೆ 2012ರ ವೇಳೆ ಶೇ.5ರಷ್ಟಿದ್ದರೆ 2018ರಲ್ಲಿ ಶೇ.13ರಷ್ಟಕ್ಕೇರಿದೆ ಎನ್ನಲಾಗಿದೆ. ಭಾರತದ 60 ಕಂಪೆನಿಗಳಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿದೆ.
ಇನ್ನು ಅತಿ ದೊಡ್ಡ ಕಂಪೆನಿಗಳಲ್ಲಿ ಮಹಿಳೆಯರ ಭಾಗೀದಾರಿಕೆ ಶೇ.33ರಷ್ಟಿದ್ದರೆ, ಮಧ್ಯಮ ಗಾತ್ರದ ಕಂಪೆನಿಗಳಲ್ಲಿ ಶೇ.27ರಷ್ಟಿದೆ. ಸಣ್ಣ ಕಂಪೆನಿಗಳಲ್ಲಿ ಶೇ.21ರಷ್ಟಿದೆ. ಭಾರತದಲ್ಲಿರುವ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಈ ಪ್ರಮಾಣ ಶೇ.25ರಷ್ಟಿದೆ ಎಂದು ಹೇಳಿದೆ.
ಇದರೊಂದಿಗೆ 1 ಟೈರ್ ನಗರಗಳಲ್ಲಿ ಲಿಂಗ ವೈವಿಧ್ಯತೆ ಶೇ.31ರಷ್ಟಿದೆ. 2 ಟೈರ್ ಮತ್ತು 3ಟೈರ್ ಸಿಟಿಗಳಲ್ಲಿ ಶೇ.25ರಷ್ಟಿದೆ. ಅತಿ ಹೆಚ್ಚು ಮಹಿಳಾ ಭಾಗೀದಾರರನ್ನು ಹೊಂದಿರುವ ಕಂಪೆನಿಗಳು ಬೆಂಗಳೂರಿನಲ್ಲಿ ಅತಿ ಹೆಚ್ಚು ಅಂದರೆ ಶೇ.34, ಮುಂಬಯಿ ಶೇ.33 ಮತ್ತು ಪುಣೆ ಶೇ.32ರಷ್ಟು ಇದೆ. ಸೀನಿಯರ್ ಲೀಡರ್‌ಶಿಪ್ ತಂಡದಲ್ಲಿ ಶೇ.26ರಷ್ಟು ಮಹಿಳೆಯರಿದ್ದಾರೆ ಎಂದು ಸಮೀಕ್ಷೆ ಹೇಳಿದೆ.