Advertisement
ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚಿನ ಪ್ರಕರಣಗಳು ದೃಢವಾಗಿದೆ. ಬೆಂಗಳೂರು ನಗರದಲ್ಲಿ 12, ಉತ್ತರ ಕನ್ನಡ ಜಿಲ್ಲೆಯಲ್ಲಿ ಏಳು, ದಾವಣಗೆರೆಯಲ್ಲಿ ಆರು, ದಕ್ಷಿಣ ಕನ್ನಡ, ಚಿತ್ರದುರ್ಗ ಮತ್ತು ಬೀದರ್ ನಲ್ಲಿ ತಲಾ ಮೂರು, ವಿಜಯಪುರ ಮತ್ತು ತುಮಕೂರಿನಲ್ಲಿ ತಲಾ ಒಂದು ಪ್ರಕರಣಗಳು ದೃಢವಾಗಿದೆ.
Related Articles
Advertisement
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಸೋಂಕಿತರ ಸಂಖ್ಯೆ ಬೆಳೆಯುತ್ತಿದೆ. ಭಟ್ಕಳದ ಏಳು ಜನರಿಗೆ ಸೋಂಕು ತಾಗಿದೆ. ಸೋಂಕಿತ ಸಂಖ್ಯೆ 659ರ ದ್ವಿತೀಯ ಸಂಪರ್ಕದಿಂದ ಒಂದೂವರೆ ವರ್ಷದ ಮಗು ಸೇರಿದಂತೆ ಆರು ಜನರಗೆ ಸೋಂಕು ದೃಢವಾಗಿದೆ. ಸೋಂಕಿತ ಸಂಖ್ಯೆ 740ರ ಸಂಪರ್ಕದಿಂದ 68 ವರ್ಷದ ವೃದ್ಧರಿಗೆ ಸೋಂಕು ದೃಢವಾಗಿದೆ.
ಬೀದರ್ ನಲ್ಲಿ ಮೂವರಿಗೆ ಸೋಂಕು ದೃಢವಾಗಿದೆ. ಸೋಂಕಿತ ಸಂಖ್ಯೆ 647 ಮತ್ತು 648ರ ಸಂಪರ್ಕದಿಂದ ಕ್ರಮವಾಗಿ 30 ವರ್ಷದ ಗಂಡು ಮತ್ತು 12 ವರ್ಷದ ಬಾಲಕಿಗೆ ಸೋಂಕು ತಾಗಿದೆ. ಮತ್ತೊಂದು ಸೋಂಕಿತನ ಸಂಪರ್ಕ ಪತ್ತೆ ಮಾಡಲಾಗುತ್ತಿದೆ.
ಚಿತ್ರದುರ್ಗದಲ್ಲಿ ಮತ್ತೆ ಮೂವರಿಗೆ ಸೋಂಕು ದೃಢವಾಗಿದ್ದು, ಗುಜರಾತ್ ನ ಅಹಮದಾಬಾದ್ ಗೆ ಪ್ರಯಾಣ ಮಾಡಿದ ಹಿನ್ನೆಲೆಯಳ್ಳ ಮೂವರಿಗೆ ಸೋಂಕು ತಾಗಿರುವುದು ಖಚಿತವಾಗಿದೆ.
ವಿಜಯಪುರದ 11 ವರ್ಷದ ಬಾಲಕಿಗೆ ಸೋಂಕು ತಾಗಿದ್ದರೆ, ತುಮಕೂರಿನ 45 ವರ್ಷದ ಪುರುಷನಿಗೆ ಸೋಂಕು ದೃಢವಾಗಿದೆ.
ರಾಜ್ಯದಲ್ಲಿ ಇಂದು ಹೊಸ 36 ಸೋಂಕು ಪ್ರಕರಣಗಳು ದೃಢವಾಗಿದೆ. ಇದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 789ಕ್ಕೆ ಏರಿಕೆಯಾಗಿದೆ. ಇವರಲ್ಲಿ 30 ಜನರು ಮರಣ ಹೊಂದಿದ್ದರೆ, 379 ಪ್ರಕರಣಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದೆ. ಒಂದು ಪ್ರಕರಣ ಕೋವಿಡ್ ಅಲ್ಲದ ಕಾರಣದಿಂದ ಮರಣ ಹೊಂದಿದೆ.