Advertisement
78.32 ಲಕ್ಷ ಮಕ್ಕಳ ಪರೀಕ್ಷೆರಾಜ್ಯ ಸರಕಾರ ರಾಷ್ಟ್ರೀಯ ಆರೋಗ್ಯ ಅಭಿಯಾನದ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿಯಲ್ಲಿ ಅಂಗನ ವಾಡಿ, ಸರಕಾರಿ ಹಾಗೂ ಖಾಸಗಿ ಶಾಲೆ, ಕಾಲೇಜುಗಳ 18 ವರ್ಷದೊಳಗಿನ 78.32 ಲಕ್ಷ ಮಕ್ಕಳನ್ನು ಮಕ್ಕಳನ್ನು ಟೈಪ್ -1 ಡಯಾಬಿಟಿಸ್ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ 1,884 ಮಕ್ಕಳು ಡಯಾಬಿಟಿಸ್‌ನಿಂದ ಬಳಲುತ್ತಿದ್ದರು.
ರಾಜ್ಯದ ಒಟ್ಟು ಟೈಪ್ -1 ಡಯಾಬಿಟಿಸ್ ಪ್ರಕರಣಗಳಲ್ಲಿ ಶೇ. 75ರಷ್ಟು ಕೇವಲ ರಾಯಚೂರು ಜಿಲ್ಲೆಯಲ್ಲಿ ಪತ್ತೆಯಾಗಿವೆ. ರಾಯಚೂರು 1,448, ದಾವಣಗೆರೆ 87, ಬಳ್ಳಾರಿ 46, ಬೆಳಗಾವಿ 33, ಚಿಕ್ಕಮಗಳೂರು 30, ಕಲಬುರಗಿ 23, ಬಾಗಲಕೋಟೆಯಲ್ಲಿ 20 ಪ್ರಕರಣ ವರದಿಯಾಗಿದೆ. ಉಳಿದಂತೆ ಯಾದಗಿರಿ, ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಮಾತ್ರ ಪರೀಕ್ಷೆಗೆ ಒಳಪಡಿಸ ಲಾದ ಮಕ್ಕಳಲ್ಲಿ ಪತ್ತೆಯಾಗಿಲ್ಲ. ಉಚಿತ ಚಿಕಿತ್ಸೆ
ಆರೋಗ್ಯ ಇಲಾಖೆ ತಾಲೂಕು ಮಟ್ಟದಲ್ಲಿ ಈ ಕಾಯಿಲೆಯನ್ನು ಪತ್ತೆಹಚ್ಚಲು ಲ್ಯಾಬ್ ವ್ಯವಸ್ಥೆ ಕಲ್ಪಿಸಿದೆ. ಈಗಾಗಲೇ ಡಯಾಬಿಟಿಸ್ ವರದಿಯಾದ ಮಕ್ಕಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ.
Related Articles
Advertisement
ನಿಯಂತ್ರಣ ಹೇಗೆ?ಮಕ್ಕಳಲ್ಲಿ ಟೈಪ್ 1 ಮಧುಮೇಹವನ್ನು ನಿರ್ವಹಿಸಲು ಮಧುಮೇಹ ತಜ್ಞ, ಪೌಷ್ಟಿಕ ತಜ್ಞ, ಮನಃಶಾಸ್ತ್ರಜ್ಞರು ಹಾಗೂ ಕುಟುಂಬ ದವರ ಬೆಂಬಲ ಅಗತ್ಯವಾಗಿದೆ. ರಕ್ತದಲ್ಲಿ ಸಕ್ಕರೆ ಪ್ರಮಾಣ ಅಧಿಕವಾಗುವುದು ಅಥವಾ ಕಡಿಮೆಯಾ ಗುವುದನ್ನು ತಡೆಯಬೇಕು. ಸಕ್ಕರೆ ಪ್ರಮಾಣ ಸಮತೋಲನದಲ್ಲಿರುವಂತೆ ನೋಡಿಕೊಳ್ಳಬೇಕು. ಮಕ್ಕಳು ಸದಾಕಾಲ ಚಟುವಟಿಕೆಯಲ್ಲಿರುವಂತೆ ಪ್ರೇರೇಪಿಸಬೇಕು ಎನ್ನುತ್ತಾರೆ ವೈದ್ಯಾಧಿಕಾರಿಗಳು. ಜಿಲ್ಲೆಯ ಸರಕಾರಿ ಆಸ್ಪತ್ರೆಯಲ್ಲಿ ಯಾವುದೇ ಟೈಪ್ 1 ಡಯಾಬಿಟಿಸ್ ಕಂಡುಬಂದಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಕೆಲವು ಪ್ರಕರಣಗಳು ಇರಬಹುದು. ಕಾಯಿಲೆ ಕಂಡು ಬಂದವರಿಗೆ ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು.
– ಡಾ| ನಾಗರತ್ನಾ,
ಡಾ| ಜಗದೀಶ್
ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ, ಉಡುಪಿ/ದ.ಕ. -ಪುನೀತ್ ಸಾಲ್ಯಾನ್