Advertisement
ನಗರದ ಮಿಮ್ಸ್‌ನ ಹೆರಿಗೆ ವಾರ್ಡ್‌ನಲ್ಲಿ ಮಮತೆಯ ಮಡಿಲುವಿನ ನಿತ್ಯ ದಾಸೋಹದಲ್ಲಿ ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಹಾಗೂ ಭೂಮಿ ಬೆಳಗು ಸಾಂಸ್ಕೃತಿಕ ಸಂಘದ ವತಿಯಿಂದ ವಿಶ್ವ ಹಸಿರು ಬಳಕೆದಾರರ ದಿನದ ಅಂಗವಾಗಿ ಬಟ್ಟೆ ಕೈಚೀಲ ಮತ್ತು ಗಿಡ ವಿತರಣೆ, ಜಾಗೃತಿ ಗೀತ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಿಸರ್ಗದ ಮೇಲೆ ಮನುಷ್ಯನ ದಾಳಿ ಅವಿರಥವಾಗಿ ನಡೆಯುತ್ತಿದ್ದು, ಇದೊಂದು ಕೊಳ್ಳು ಬಾಕ ಸಂಸ್ಕೃತಿಯ ವಿಧಾನದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಹೇಳಿದರು.
Related Articles
Advertisement
ಉದಾತ್ತ ಚಿಂತನೆ ಅಳವಡಿಸಿಕೊಳ್ಳಿ: ಮಿಮ್ಸ್‌ನ ಸಮುದಾಯ ವೈದ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಸುಭಾಷ್ ಮಾತನಾಡಿ, ಜೀವನ ಶೈಲಿಯನ್ನೇ ಸರಳವಾಗಿ ಅಳವಡಿಸಿಕೊಳ್ಳುವುದರ ಮೂಲಕ ಉದಾತ್ತ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಹಸಿರು ಭಾಗಿದಾರರು ತಾಳ್ಮೆಗೆಡದೆ ಸ್ಥಳೀಯ ಗಿಡಮೂಲಿಕೆಗಳು, ಆಹಾರ ಉತ್ಪನ್ನ ಚಟುವಟಿಕೆಗಳನ್ನು ಬಳಸಿಕೊಂಡು ಗ್ರಾಮೀಣ ಸಂಸ್ಕೃತಿಯ ನಿಲುವಿಗೆ ಬದ್ಧರಾಗಿ ಅದನ್ನು ಸಮರ್ಥವಾಗಿಬಳಸಿಕೊಳ್ಳಬೇಕು. ಜೊತೆಗೆ ಹಸಿರು ಬಳಕೆದಾರರಾಗಲು ಇತರರನ್ನು ಪ್ರೇರೇಪಿಸುವಕೆಲಸವಾಗಬೇಕು ಎಂದರು. ಕೋವಿಡ್-19 ಸಾಂಕ್ರಾಮಿಕವಾಗಿ ಉಲ್ಬಣಗೊಳ್ಳುತ್ತಿದ್ದು, ಇದನ್ನು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರ ರೂಪಿಸಿರುವ ಹಲವು ನಿಯಮಗಳನ್ನು ಚಾಚೂ ತಪ್ಪದೆ ಅನುಸರಿಸಬೇಕು ಎಂದು ರೋಗಿಗಳಿಗೆ ಮತ್ತು ಅವರ ಸಂಬಂಧಿಕರಿಗೆ ತಿಳಿಸಿದರು.
ಕಾವೇರಿ ನೀರಾವರಿ ನಿಗಮದ ಇಂಜಿನಿಯರ್ ಜಿ.ಎನ್.ಕೆಂಪರಾಜು, ಲಯನ್ಸ್ ಕ್ಲಬ್ ಆಫ್ ಮಂಡ್ಯದ ವಲಯಾಧ್ಯಕ್ಷ ಪುನೀತ್ ಕುಮಾರ್, ಮಂಡ್ಯ ಜಿಲ್ಲಾ ಬೀದಿ ನಾಟಕ ಒಕ್ಕೂಟದ ಅಧ್ಯಕ್ಷ ಬಸವರಾಜ್ ಸಂತೆಕಸಲಗೆರೆ, ಹರೀಶ್ ಬಾಣಸವಾಡಿ, ಪರಿಸರ ಸಂಸ್ಥೆಯ ಸಂಚಾಲಕ ರವಿ ಮಂಗಲ ಉಪಸ್ಥಿತರಿದ್ದರು. ಹಸಿರು ಜಾಗೃತಿ ಗೀತೆಗಳನ್ನು ಸಾದರಪಡಿಸಲಾಯಿತು.
ಉತ್ಪಾದನಾ ವಿಧಾನ ಬದಲಿಸಲು ಸಾಧ್ಯ : ಮನುಕುಲ ರಕ್ಷಣೆಯ ಮಹತ್ವದ ಪರಿಸರ ಹಬ್ಬಗಳನ್ನು ವಿಶ್ವದಾದ್ಯಂತ ಜಾಗೃತ ದಿನವನ್ನಾಗಿಆಚರಿಸುವುದರ ಜೊತೆಗೆ ಜನತೆಯನ್ನು ಸನ್ನದ್ಧಗೊಳಿಸಲುಕಾರ್ಯಕ್ರಮ ರೂಪಿಸಲಾಗುತ್ತಿದೆ. ಸಾಧ್ಯವಾದಷ್ಟು ಮಟ್ಟಿಗೆ ಹಸಿರು ಧರ್ಮವನ್ನು ಬಳಕೆದಾರರು ಪಾಲಿಸಬೇಕು. ಬಳಕೆದಾರರು ಪ್ರಜ್ಞಾವಂತರಾದರೆ ಪ್ರಸ್ತುತ ದಿನಗಳಲ್ಲಿ ಉತ್ಪಾದನಾ ವಿಧಾನಗಳನ್ನೇ ಬದಲಿಸಲು ಸಾಧ್ಯವಿದೆ ಎಂದು ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.