Advertisement

10 ಕೋಟಿ ನೌಕರರ ವಿವರ ಆಧಾರ್‌ಗೆ?

06:36 PM Sep 26, 2018 | Team Udayavani |

ಹೊಸದಿಲ್ಲಿ: ಕೇಂದ್ರ ಸರಕಾರ ದೇಶಾದ್ಯಂತ ಇರುವ 10 ಕೋಟಿ ಉದ್ಯೋಗಸ್ಥರ ವಿವರಗಳನ್ನು ಆಧಾರ್‌ಗೆ ಜೋಡಿಸಲು ಮುಂದಾಗಿದೆ. ಈ ಕುರಿತು ನೌಕರರ ಭವಿಷ್ಯ ನಿಧಿ ಮಂಡಳಿ (ಇಪಿಎಫ್ಒ)ಗೆ ಕೇಂದ್ರ ಸರಕಾರ ಸೂಚನೆ ನೀಡಿದೆ ಎಂದು ಹೇಳಲಾಗಿದೆ.

Advertisement

ಉದ್ಯೋಗ ಸೃಷ್ಟಿ, ವಿಮಾ ನೆರವು, ವೇತನ ಪಾವತಿ ಸೇರಿದಂತೆ ಹಲವು ಸೌಲಭ್ಯಗಳು ಸರಿಯಾಗಿ ಅರ್ಹರಿಗೆ ಪಾವತಿಯಾಗುತ್ತದೆಯೇ ಎನ್ನುವುದನ್ನು ಗಮನಿಸಲು ಈ ಕ್ರಮ ನೆರವಾಗಲಿದೆ. ಹೀಗಾಗಿ, ದೇಶಾದ್ಯಂತ ಇರುವ ಇಪಿಎಫ್ಒ ಪ್ರಾದೇಶಿಕ ಕಚೇರಿಗಳಿಗೆ ಆದ್ಯತೆಯಲ್ಲಿ ಆಧಾರ್‌ ಲಿಂಕ್‌ ಮಾಡುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳನ್ನು ಉಲ್ಲೇಖೀಸಿ “ದ ಮಿಂಟ್‌’ ಪತ್ರಿಕೆ ವರದಿ ಮಾಡಿದೆ. ಮುಂದಿನ ಲೋಕಸಭೆ ಚುನಾವಣೆ ಒಳಗಾಗಿ ಈ ಪ್ರಕ್ರಿಯೆ ಮುಕ್ತಾಯ ವಾಗುವಂತೆ ನೋಡಿಕೊಳ್ಳಲೂ ಸೂಚಿಸಲಾಗಿದೆ. 

ಕೈಗಾರಿಕಾ ಕ್ಷೇತ್ರದ ಕಾರ್ಮಿಕರಿಗೆ ಆರೋಗ್ಯ ಸೌಲಭ್ಯ ನೀಡುವ ಕಾರ್ಮಿಕ ವಿಮಾ ನಿಗಮ (ಇಎಸ್‌ಐಸಿ) 4 ಕೋಟಿ ಮಂದಿಗೆ ಈ ಸೇವೆ ನೀಡುತ್ತಿದೆ. ಅದು ಆಧಾರ್‌ ಲಿಂಕ್‌ ಮಾಡುವಂತೆ ಸೂಚನೆ ನೀಡಿತ್ತು. ದೇಶದಲ್ಲಿ ಇಪಿಎಫ್ಒ ಮತ್ತು ಇಎಸ್‌ಐಸಿ ಸಾಂಪ್ರದಾಯಿಕ ಕ್ಷೇತ್ರದಲ್ಲಿ ಎಷ್ಟು ಉದ್ಯೋಗ ಸೃಷ್ಟಿಯಾಗಿದೆ ಎನ್ನುವುದರ ಬಗ್ಗೆ ಅಧಿಕೃತ ಮಾಹಿತಿ ನೀಡುವ ಸಂಸ್ಥೆಗಳಾಗಿವೆ. ಆದರೆ ಕೆಲವೊಮ್ಮೆ 2 ಸಂಸ್ಥೆಗಳ ಮೂಲಕ ಫ‌ಲಾನುಭವಿಗಳು ಒಬ್ಬರೇ ಆಗಿರುವ ಹಿನ್ನೆಲೆಯಲ್ಲಿ ನಿಖರ ಮಾಹಿತಿ ಪತ್ತೆ ಹಚ್ಚಲು ಅಸಾಧ್ಯವಾಗುತ್ತದೆ. ಹೀಗಾಗಿ, ಆಧಾರ್‌ ಜೋಡಣೆಯಿಂದ ಅರ್ಹರಿಗೆ ವೇತನ ಮತ್ತು ಇತರ ಸೌಲಭ್ಯಗಳು ಪಾವತಿಯಾಗಿಯೇ ಎಂದು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ ಎನ್ನುವುದು ಕೇಂದ್ರ ಸರಕಾರದ ಆಶಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next