Advertisement

ಹೆಚ್ಚುತ್ತಿರುವ ಕೋವಿಡ್ ಸೋಂಕು : ಮುಳುವಾಗದಿರಲಿ ಸರಕಾರದ ಹೊಸ ನಿಯಮ

11:17 AM May 29, 2020 | mahesh |

ಉಡುಪಿ: ಹಸುರು ವಲಯದಲ್ಲಿದ್ದ ಉಡುಪಿ ಜಿಲ್ಲೆಗೆ ಅನ್ಯರಾಜ್ಯದಿಂದ ಆಗಮಿಸಿದವರೇ ಸಮಸ್ಯೆಯಾಗಿ ಕಾಡುತ್ತಿದ್ದಾರೆ. ಈ ನಡುವೆ 7 ದಿನಗಳ ಕ್ವಾರಂಟೈನ್‌ ಅವಧಿ ಮುಗಿಸಿದವರಲ್ಲಿ ಯಾವುದೇ ರೋಗಲಕ್ಷಣ ಕಾಣಿಸದಿದ್ದರೆ ಅವರು ಮತ್ತೆ 7 ದಿನಗಳ ಕಾಲ ಹೋಂ ಕ್ವಾರಂಟೈನ್‌ ಮಾಡಬಹುದು ಎಂಬ ಸರಕಾರದ ಆದೇಶವು ಉಡುಪಿ ಜಿಲ್ಲೆಗೆ ಶಾಪವಾಗುವ ಸಾಧ್ಯತೆಯೇ ಹೆಚ್ಚು.

Advertisement

ಅತ್ಯಧಿಕ ಕೋವಿಡ್ ಸೋಂಕು ಕಂಡು ಬಂದಿರುವ ಮಹಾರಾಷ್ಟ್ರದಿಂದ ಆಗಮಿಸಿದ 7 ಸಾವಿರಕ್ಕೂ ಅಧಿಕ ಮಂದಿಯಿಂದ ಜಿಲ್ಲೆಯ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಿದೆ. ಸರಕಾರದ ನಿಯಮಾವಳಿಯಂತೆ ವಿದೇಶ, ಹೊರರಾಜ್ಯಗಳಿಂದ ಆಗಮಿಸಿದ ವ್ಯಕ್ತಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾದ 7 ದಿನಗಳಲ್ಲಿ ಯಾವುದೇ ಸೋಂಕು ಲಕ್ಷಣ ಕಂಡುಬಾರದಿದ್ದರೆ ಹೋಂ ಕ್ವಾರಂಟೈನ್‌ಗೆ ಒಳಪಡಬಹುದು. ಅವರು ಬಯಸಿದರಷ್ಟೇ ಪರೀಕ್ಷೆ ನಡೆಸಲಾಗುವುದು. ಆದರೆ ಈ ಹಿಂದಿನ ಪ್ರಕರಣಗಳನ್ನು ಗಮನಿಸಿದಾಗ ಯಾವುದೇ ಸೋಂಕು ಲಕ್ಷಣ ಕಂಡುಬಾರದವರಲ್ಲೂ ಬಳಿಕ ಸೋಂಕು ದೃಢಪಟ್ಟ ಉದಾಹರಣೆಗಳಿವೆ. ಇದೀಗ ಸರಕಾರ ಅಂತಹವರನ್ನು ಯಾವುದೇ ಪರೀಕ್ಷೆಗೊಳಪಡಿಸದೆ ಮನೆಸೇರುವಂತೆ ಮಾಡಿರುವುದು ಆತಂಕಕ್ಕೆ ಕಾರಣವಾಗಿದೆ.

ಮಹಾರಾಷ್ಟ್ರದಂತೆ ಆಗದಿರಲಿ ಕರ್ನಾಟಕ
ಕರ್ನಾಟಕ ಸರಕಾರ ತೆಗೆದುಕೊಳ್ಳುವ ಕೆಲವು ಸರಳ ನಿಯಮಗಳು ಕೂಡ ರಾಜ್ಯದ ಪಾಲಿಗೆ ಮತ್ತಷ್ಟು ಮಾರಕವಾಗಲಿವೆ. ಮೊದಲನೆಯದಾಗಿ ಅಂತರ್‌ ಜಿಲ್ಲಾ, ಅಂತಾರಾಜ್ಯ, ವಿದೇಶಗಳಿಂದ ಆಗಮಿಸುವವರಿಗೆ ಪ್ರವೇಶಕ್ಕೆ ಅನುಮತಿಸಿದ್ದು. ಇದರಲ್ಲಿ ಕ್ವಾರಂಟೈನ್‌ ನಿಯಮಗಳನ್ನು ಉಲ್ಲೇಖೀಸಿ ದ್ದರೂ ಆಯಾ ಜಿಲ್ಲೆಗಳಲ್ಲಿ ದಾಖಲಾಗುವ ಪ್ರಕರಣಗಳನ್ನು ತಡೆಯಲು ಅಸಾಧ್ಯವಾಗಿದೆ. ಮುಂಬಯಿಯಲ್ಲಿ ಈಗಾಗಲೇ ಸೋಂಕು ಸಮುದಾಯಕ್ಕೆ
ಹಬ್ಬಿದೆ. ಇಂತಹ ಉದಾಹರಣೆಗಳಿರುವಾಗ ಕರ್ನಾಟಕ ಸರಕಾರವು ಈಗ ಇರುವ ನಿಯಮಾ ವಳಿಗಳನ್ನೇ ಮತ್ತಷ್ಟು ವಿಸ್ತರಿಸುವ ಅವಕಾಶವಿತ್ತು. ಹಾಗೆಯೇ ದೇಶದಲ್ಲಿಯೇ ಅತ್ಯಧಿಕ ಪ್ರಕರಣಗಳು ಕಂಡು ಬಂದಿರುವ ಮಹಾರಾಷ್ಟ್ರದ ಜನತೆಗೆ ರಾಜ್ಯ ಪ್ರವೇಶಿಸಲು ಈ ಹಿಂದಿನ ಕ್ವಾರಂಟೈನ್‌ ಪದ್ಧತಿಯನ್ನು ಮುಂದುವರಿಸಬಹುದಿತ್ತು ಎಂಬ ಮಾತುಗಳು ಈಗ ಉಡುಪಿ ಜಿಲ್ಲೆಯಾದ್ಯಂತ ಕೇಳಿಬರುತ್ತಿವೆ.

ಮೂಲವೇ ಅಗೋಚರ!
ಮಹಾರಾಷ್ಟ್ರದಿಂದ ಬಂದವರು ತಮಗೇನೂ ಸೋಂಕಿನ ಲಕ್ಷಣಗಳಿಲ್ಲ ಎಂದುಕೊಂಡು ಕ್ವಾರಂಟೈನ್‌ ಆಗಿದ್ದರು. ಆದರೆ ಪರೀಕ್ಷಾ ವರದಿ ಪಾಸಿಟಿವ್‌ ಎಂದು ಬರುತ್ತಿದೆ. ಹೊರಡುವಾಗಲೇ ಸೋಂಕು ಇತ್ತೇ ಅಥವಾ ಪ್ರಯಾಣದ ವೇಳೆ ಹರಡಿತೇ, ಕ್ವಾರಂಟೈನ್‌ ಅವಧಿಯಲ್ಲಿ ಸೋಂಕು ಬಾಧಿಸುವ ಸಾಧ್ಯತೆಗಳಿವೆಯೇ ಎಂಬಿತ್ಯಾದಿ ಅನುಮಾನ ಕಾಡುತ್ತಿವೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ 7 ದಿನಗಳ ಕ್ವಾರಂಟೈನ್‌ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಬಹುದು ಎಂಬುದೇ ಪ್ರಶ್ನೆಯಾಗಿದೆ.

ಹೊರ ದೇಶ/ರಾಜ್ಯದಿಂದ ಬಂದವರನ್ನು ಏಳು ದಿನಗಳ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರಿಸಿ ಬಳಿಕ ಹೋಂ ಕ್ವಾರಂಟೈನ್‌ಗೆ ಕಳುಹಿಸಲಾಗುವುದು. ಅವರು ಕಡ್ಡಾಯವಾಗಿ ಕ್ವಾರಂಟೈನ್‌ ವಾಚ್‌ ಆ್ಯಪ್‌, ಆರೋಗ್ಯ ಸೇತು ಆ್ಯಪ್‌ಗ್ಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಹೋಂ ಕ್ವಾರಂಟೈನ್‌ ಅವಧಿಯಲ್ಲಿ ಮನೆಯಿಂದ ಹೊರಗೆ ಬರಬಾರದು. ಹೊರಗೆ ಬಂದರೆ ಜಿಯೊ ಫೆನ್ಸಿಂಗ್‌ ಮೂಲಕ ತಿಳಿಯುತ್ತದೆ. ಮೊದಲ ಬಾರಿ ಎಚ್ಚರಿಕೆ ಕೊಡಲಾಗುತ್ತದೆ, ಎರಡನೆಯ ಬಾರಿ ಪ್ರಕರಣ ದಾಖಲಿಸಲಾಗುತ್ತದೆ. ನಿಯಮ ಉಲ್ಲಂ ಸಿದರೆ ಕಠಿನ ಕ್ರಮ ಕೈಗೊಳ್ಳಲಾಗುವುದು. ಈ ಅವಧಿಯಲ್ಲಿ ಯಾವುದೇ ಸೋಂಕು ಲಕ್ಷಣ ಕಂಡುಬಂದರೆ ತತ್‌ಕ್ಷಣ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಬೇಕು.
-ಜಿ. ಜಗದೀಶ್‌, ಉಡುಪಿ ಜಿಲ್ಲಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next