ತುಮಕೂರು: ಕಲ್ಪತರು ನಾಡಿನಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ವಾರ ದಿಂದ ವಾರಕ್ಕೆ ಹೆಚ್ಚುತ್ತಿದೆ. ಬುಧವಾರ ಒಂದೇ ದಿನ ನಾಲ್ಕು ಕೋವಿಡ್ 19 ಸೋಂಕು ಪ್ರಕರಣ ಪತ್ತೆ ಯಾಗಿದ್ದು. ಈಗ ಸೋಂಕಿತರ ಸಂಖ್ಯೆ 15 ಕ್ಕೆ ಏರಿಕೆಯಾಗಿದೆ. ಹೊರ ರಾಜ್ಯ, ಹೊರ ಜಿಲ್ಲೆಯಿಂದ ಬರುವ ಮಂದಿ ಸೋಂಕು ಹೊತ್ತು ತರುತ್ತಿದ್ದು, ಜಿಲ್ಲೆಗೆ ಹೊರ ರಾಜ್ಯ ಹೊರ ಜಿಲ್ಲೆಯಿಂದ ಬರುವರಿಂದ ರೋಗ ಹೆಚ್ಚು ವ್ಯಾಪಿಸುತ್ತಿದೆ ಎನ್ನುವ ಭೀತಿ ಹೆಚ್ಚಿದೆ.
ನಾಲ್ವರಿಗೆ ಕೋವಿಡ್ 19: ಹೊರ ರಾಜ್ಯದಿಂದ ಜಿಲ್ಲೆಗೆ ಬಂದವರಲ್ಲಿ ಒಂದೇ ದಿನ ನಾಲ್ಕು ಕೋವಿಡ್ 19 ಪಾಸಿಟಿವ್ ಬಂದಿವೆ. ದೆಹಲಿ, ಅಹಮದಾಬಾದ್, ಗುಜರಾತ್, ಬೆಂಗ ಳೂರು ಪಾದರಾಯನ ಪುರ ಆಯ್ತು ಈಗ ಮುಂಬೈ ನಂಟು ಬೆಳೆದಿದ್ದು, ಮುಂಬೈನಿಂದ ಬಂದಿರುವ ನಾಲ್ವರಿಗೆ ಸೋಂಕು ಇರುವುದು ಪತ್ತೆಯಾಗಿದೆ.
ಇನ್ನೂ ಬರಬೇಕು ಲ್ಯಾಬ್ ವರದಿ: ಇನ್ನೂ ಲ್ಯಾಬ್ ವರದಿ ಬಾಕಿ ಇದ್ದು ಇನ್ನೂ ಹಲವ ರಲ್ಲಿ ಕೋವಿಡ್ 19 ಪಾಸಿಟಿವ್ ಬರುವ ಲಕ್ಷಣಗಳೇ ಹೆಚ್ಚು ಗೋಚರ ವಾಗುತ್ತಿದ್ದು ಕಿತ್ತಲೆ ವಲಯದಲ್ಲಿರುವ ತುಮಕೂರು ಕೆಂಪು ವಲಯದತ್ತ ಹೋಗುತ್ತಿದೆಯೇ..? ಎನ್ನುವ ಆತಂಕ ಜನರನ್ನು ಕಾಡುತ್ತಿದೆ. ಪಾಸಿಟಿವ್ ಬಂದಿರುವ ವ್ಯಕ್ತಿಗಳು ಯಾವ ತಾಲೂಕಿನವರು ಎನ್ನುವುದನ್ನು ಜಿಲ್ಲಾಡಳಿತ ಬಿಟ್ಟು ಕೊಟ್ಟಿಲ್ಲ,
ಈಗ ಎಂಟು ಸೋಂಕಿತ ರಿಗೂ ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾಡಳಿತ ಎಚ್ಚರಿಕೆ: ಜಿಲ್ಲೆಯು ಆರೆಂಜ್ ವಯಲದಲ್ಲಿರುವುದರಿಂದ ನಾಗರೀಕರು ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಬೇಕು. ಆದ್ದರಿಂದ ಮಕ್ಕಳು, ವಯಸ್ಸಾದವರು ಮನೆಯಿಂದ ಹೊರಗಡೆ ಹೋಗಬಾರದು. ಸಾರ್ವಜನಿಕರು ಸರ್ಕಾರದ ನಿರ್ದೇಶನ ಗಳನ್ನು ಪಾಲಿಸಿ ತಮ್ಮ ಆರೋಗ್ಯದ ಕಡೆ ಗಮನ ನೀಡಬೇಕು ಎಂದು ಜಿಲ್ಲಾಡಳಿತ ಎಚ್ಚರಿಕೆ ಮೂಡಿಸುತ್ತಿದೆ.
ಹೊರ ರಾಜ್ಯದಿಂದ ಬಂದ್ರೆ ಮಾಹಿತಿ ನೀಡಿ: ಜಿಲ್ಲೆಗೆ ಹೊರ ರಾಜ್ಯದಿಂದ ಈವರೆಗೆ 439 ಮಂದಿ ಬಂದಿದ್ದಾರೆ ಅವರು ಜಿಲ್ಲೆಗೆ ಬಂದ ತಕ್ಷಣ ಕ್ವಾರೆಂಟೈನ್ ಮಾಡಲಾಗುತ್ತಿದೆ. ಜಿಲ್ಲೆಯ ಜನರೊಂದಿಗೆ ಅವರ ಸಂಪರ್ಕ ಇರುವುದಿಲ್ಲ, ಅವರ ಆರೋಗ್ಯ ಪರೀಕ್ಷೆ ನಡೆದು ಲ್ಯಾಬ್‌ನಿಂದ ನೆಗೆಟಿವ್ ಬಂದ ಮೇಲೆ ಮತ್ತೆ ಆರೋಗ್ಯ ತಪಾಸಣೆ ಮಾಡಿ ರೋಗದ ಯಾವುದೇ ಲಕ್ಷಣ ಇಲ್ಲ ಎಂದು ದೃಢವಾದ ಮೇಲೆ ಪ್ರಾಥಮಿಕ ಸಂಪರ್ಕ ಕಲ್ಪಿಸಲಾಗುತ್ತಿದೆ. ಹೊರ ರಾಜ್ಯದಿಂದ ಬಂದವರ ಮಾಹಿತಿಯನ್ನು ಜಿಲ್ಲಾಡಳಿತ ಅಥವಾ ತಾಲೂಕು ಆಡಳಿತಕ್ಕೆ ತಕ್ಷಣ ನೀಡಬೇಕೆಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಮನವಿ ಮಾಡಿದ್ದಾರೆ.
ತುಮಕೂರು ಜಿಲ್ಲೆ ಸದ್ಯದ ಪರಿಸ್ಥಿತಿಯಲ್ಲಿ ಆರೆಂಜ್ ವಯಲದಲ್ಲಿದೆ, ಜನರು ಕೋವಿಡ್ 19 ಹೆಚ್ಚು ವ್ಯಾಪಿಸದಂತೆ ಜಾಗೃತಿ ವಹಿಸ ಬೇಕು. ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 15ಕ್ಕೆ ಏರಿಕೆ ಯಾಗಿದೆ. ಸಾರ್ವ ಜನಿಕರು ಸರ್ಕಾರದ ನಿರ್ದೇಶನಗಳನ್ನು ಪಾಲಿಸಿ ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು.
-ಡಾ.ಕೆ.ರಾಕೇಶ್ ಕುಮಾರ್, ಜಿಲ್ಲಾಧಿಕಾರಿ
* ಚಿ.ನಿ.ಪುರುಷೋತ್ತಮ್