Advertisement
ಸ್ಮಾರ್ಟ್ ಸಿಟಿಯಾಗಿ ಬೆಳೆಯುತ್ತಿರುವ ನಗರದ ವಿವಿಧ ಜಂಕ್ಷನ್‌ಗಳಲ್ಲಿ ಭಿಕ್ಷಾಟನೆ ನಿರತರು ಕಾಣಸಿಗುತ್ತಿದ್ದಾರೆ. ಇದರಲ್ಲಿ ಹೆಚ್ಚಿನ ಮಂದಿ ಹೊರ ರಾಜ್ಯ, ಹೊರ ಜಿಲ್ಲೆಯವರು.
Related Articles
Advertisement
ಸಿಗ್ನಲ್‌ಗಳಲ್ಲಿ ವಸ್ತುಗಳ ಮಾರಾಟನಗರದಲ್ಲಿ ಹೆಚ್ಚಾಗಿ ಪೆನ್ನು, ಟವಲ್, ಮೊಬೈಲ್ ಸ್ಟಾ éಂಡ್ ಸಹಿತ ವಿವಿಧ ವಸ್ತುಗಳನ್ನು ಸಿಗ್ನಲ್‌ಗಳಲ್ಲಿ ಮಾರಾಟ ಮಾಡುವ ತಂಡ ನಗರದ ವಿವಿಧೆಡೆ ಕಾರ್ಯಾಚರಿಸುತ್ತಿದೆ. ತಂಡದಲ್ಲಿ ಗಂಡು ಮಕ್ಕಳು ಮಾತ್ರವಲ್ಲದೆ, ಹೆಣ್ಣು ಮಕ್ಕಳು, ಯುವತಿಯರು, ಹಿರಿಯರು, ವೃದ್ಧರು ಎಲ್ಲರೂ ಸೇರಿಕೊಂಡಿದ್ದಾರೆ. ಪ್ರಮುಖವಾಗಿ ನಗರದ ಪಿ.ವಿ.ಎಸ್. ಜಂಕ್ಷನ್, ಲಾಲ್‌ಬಾಗ್, ಡಾ| ಬಿ.ಆರ್. ಅಂಬೇಡ್ಕರ್ ವೃತ್ತ, ಸ್ಟೇಟ್‌ಬ್ಯಾಂಕ್, ನಂತೂರು ವೃತ್ತ ಸಹಿತ ವಿವಿಧ ಜಂಕ್ಷನ್‌ಗಳಲ್ಲಿ ಮಾರಾಟ ಸಾಗುತ್ತಿದೆ. ಬೆಂಗಳೂರಿನಲ್ಲಿ ಈಗಾಗಲೇ ಆದೇಶ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೂ ಈ ರೀತಿ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಭಿಕ್ಷೆ ಬೇಡುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿತ್ತು. ಇಂತಹ ಕಾರ್ಯಗಳಿಗೆ ಬ್ರೇಕ್ ನೀಡಲು ಅಲ್ಲಿನ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದರು. ಹಣ ನೀಡಲು ನಿರಾಕರಿಸುವ ವೇಳೆ ವಾಹನ ಸವಾರರ ಜತೆ ಅನುಚಿತ ವರ್ತನೆ ನಡೆಯುತ್ತಿದೆ ಎಂದು ಸಾರ್ವಜನಿಕರು ಪೊಲೀಸರಲ್ಲಿ ಮನವಿ ಮಾಡಿದ್ದರು. ಈ ನಿಟ್ಟಿನಲ್ಲಿ ಆದೇಶ ಹೊರಡಿಸಲಾಗಿತ್ತು. ಪಾಲಿಕೆ ಜತೆ ಚರ್ಚಿಸಿ ಕ್ರಮ
ನಗರದಲ್ಲಿ ಭಿಕ್ಷುಕರ ಹಾವಳಿ ಹೆಚ್ಚಾಗುತ್ತಿರುವುದು ಗಮನಕ್ಕೆ ಬಂದಿದೆ. ಕೆಲವು ದಿನಗಳ ಹಿಂದೆ ನಗರದ ಜಂಕ್ಷನ್‌ಗಳು, ಬಸ್ ತಂಗುದಾಣದಲ್ಲಿ ತಂಗಿದ್ದ ಭಿಕ್ಷುಕರನ್ನು ನಿರಾಶ್ರಿತರ ಕೇಂದ್ರಕ್ಕೆ ಕಳುಹಿಸಲಾಗಿದೆ. ಭಿಕ್ಷುಕರ ನಿಯಂತ್ರಣ ಕುರಿತಂತೆ ಮಹಾನಗರ ಪಾಲಿಕೆ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ನಟರಾಜ್, ಟ್ರಾಫಿಕ್ ಎಸಿಪಿ ಮಂಗಳೂರು ಚೈಲ್ಡ್ ಲೈನ್ ಗಮನಕ್ಕೆ ತನ್ನಿ
ನಂತೂರು, ಲಾಲ್‌ಬಾಗ್, ಹಂಪನಕಟ್ಟೆ ಸಹಿತ ಸುತ್ತಮುತ್ತ ಭಿಕ್ಷೆ ಬೇಡುತ್ತಿದ್ದ ಮಕ್ಕಳನ್ನು ಕೆಲವು ದಿನಗಳ ಹಿಂದೆ ರಕ್ಷಿಸಲಾಗಿತ್ತು. ಮುಂದಿನ ದಿನಗಳಲ್ಲಿ ನಗರದಲ್ಲಿ ಮಕ್ಕಳು ಭಿಕ್ಷೆ ಬೇಡುತ್ತಿದ್ದರೆ ಸಾರ್ವಜನಿಕರು ಚೈಲ್ಡ್ ಲೈನ್ (1098)ಗಮನಕ್ಕೆ ತರಬಹುದು.
-ದೀಕ್ಷಿತ್ ಅಚ್ರಪ್ಪಾಡಿ,
ಚೈಲ್ಡ್ ಲೈನ್ ಕೇಂದ್ರ ಸಂಯೋಜಕ