Advertisement
ಕುಂಚಾವರಂ ವನ್ಯಜೀವಿಧಾಮದಲ್ಲಿ ಇತ್ತೀಚೆಗೆ ಅಪರೂಪದ ನೀಲಗಾಯ, ಸೀಳುನಾಯಿ, ಚೌಸಿಂಗಾ, ಚಿಪ್ಪುಹಂದಿ, ಕಾಡುಕೋಣ ಪತ್ತೆಯಾಗಿವೆ. 2011ರಲ್ಲಿ ರಾಜ್ಯಅರಣ್ಯ ಇಲಾಖೆ ಮಂಡಳಿ ಉಪಾಧ್ಯಕ್ಷರಾಗಿದ್ದ ಕ್ರಿಕೆಟ್ ಆಟಗಾರ ಅನಿಲ ಕುಂಬ್ಳೆ ಕುಂಚಾವರಂ ಅರಣ್ಯ ಪ್ರದೇಶದ ಸೇರಿಭಿಕನಳ್ಳಿ ತಾಂಡಾಕ್ಕೆ ಭೇಟಿ ನೀಡಿ, ಈ ಅರಣ್ಯ ಪ್ರದೇಶವನ್ನು ವನ್ಯಜೀವಿಧಾಮವೆಂದು ಘೋಷಿಸಲು ಸೂಕ್ತವಾಗಿದೆ ಎಂದು ಸರ್ಕಾರಕ್ಕೆ ವರದಿ ನೀಡಿದ್ದರು. ಆ ನಂತರ ಸರ್ಕಾರ ಪ್ರಾದೇಶಿಕ ಅರಣ್ಯವನ್ನು ಮೇಲ್ದರ್ಜೆಗೇರಿಸಿದ ನಂತರ ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಕೇರಳ ರಾಜ್ಯಗಳ ಅರಣ್ಯ ಪ್ರದೇಶದಲ್ಲಿರುವ ನೀಲಗಾಯಿ ಹೊಸ ವನ್ಯಪ್ರಾಣಿಗಳು ಪತ್ತೆಯಾಗಿವೆ. ಕೆಲವು ಪ್ರಾಣಿಗಳು ತಂಪು ವಾತಾವರಣದಲ್ಲಿ ವಾಸಿಸುವಂತಹವಾಗಿದೆ. ಕಳೆದ ಎರಡು ವರ್ಷಗಳಿಂದ ಇಲ್ಲಿ ಮೂರು ನೀಲಗಾಯಿ ಕಾಡು ಪ್ರಾಣಿಗಳು ಕಾಣಿಸಿಕೊಂಡಿವೆ. ಕುಂಚಾವರಂ ಬಯಲು ಸೀಮೆಯ ಪ್ರಮುಖ ವನ್ಯಜೀವಿ ಧಾಮವಾಗಿರುವ ಈ ಅರಣ್ಯ 13,488 ಹೆಕ್ಟೇರ್ ಪ್ರದೇಶವನ್ನು ಹೊಂದಿದೆ.
Related Articles
Advertisement
ಲಭ್ಯಗಳಿಲ್ಲಕುಂಚಾವರಂ ವನ್ಯಜೀವಿಧಾಮದಲ್ಲಿ ಚಿರತೆ ಮತ್ತು ನೀಲಗಾಯಿ, ಕಾಡುಕೋಣ ಪತ್ತೆಯಾಗಿವೆ. ಅರಣ್ಯಸಿಬ್ಬಂದಿ ಸೇವೆಗೆ ಬಿಗಿಕ್ರಮ ಕೈಗೊಂಡಿದ್ದರಿಂದ ಕಾಡು ಪ್ರಾಣಿಗಳ ಸಂತತಿ ಹೆಚ್ಚುತ್ತಿರುವುದು ತುಂಬಾ ಖುಷಿತಂದಿದೆ. -ಸಂಜೀವಕುಮಾರ ಚವ್ಹಾಣ, ವಲಯ ಅರಣ್ಯಾಧಿಕಾರಿ, ಕುಂಚಾವರಂ
ವನ್ಯಜೀವಿಧಾಮಜಿಲ್ಲೆಯಲ್ಲಿಯೇ ಹೆಮ್ಮಪಡುವಂತಹ ಅರಣ್ಯಪ್ರದೇಶ ಚಿಂಚೋಳಿ ತಾಲೂಕಿನಲ್ಲಿದೆ. ಬೇರೆ ರಾಜ್ಯಗಳಲ್ಲಿ ವಾಸಿಸುವ ಕಾಡು ಪ್ರಾಣಿಗಳು ಕುಂಚಾವರಂ ವನ್ಯಜೀವಿಧಾಮದ ಪರಿಸರದಲ್ಲಿ ಬೆಳೆಯುತ್ತಿರುವುದು ಸಂತಸವಾಗುತ್ತಿದೆ. -ಅಜೀತ ಪಾಟೀಲ, ನಿರ್ದೇಶಕ, ಎಪಿಎಂಸಿ
ಐನೋಳಿ ಹತ್ತಿರವಿರುವ ಅರಣ್ಯಪ್ರದೇಶದಲ್ಲಿ ಅಪರೂಪದ ಕಾಡು ಪ್ರಾಣಿಗಳಾದ ಜಿಂಕೆ, ಮೊಲ,ನವಿಲು ಹೆಚ್ಚು ಕಾಣಿಸುತ್ತಿವೆ ಜಿಲ್ಲೆಯ ಹೆಮ್ಮೆಯ ಸಂಗತಿ ಎಂದರೆ ಕುಂಚಾವರಂ ಕಾಡು ಮತ್ತು ಕಾಡುಪ್ರಾಣಿಗಳನ್ನು ಉಳಿಸುವುದು ಮತ್ತು ಬೆಳೆಸುವುದು ಪರಿಸರ ರಕ್ಷಣೆ ಎಲ್ಲರ ಕರ್ತವ್ಯವಾಗಿದೆ. -ದೀಪಕನಾಗ ಪುಣ್ಯಶೆಟ್ಟಿ , ಜಿಪಂ ಮಾಜಿ ಅಧ್ಯಕ್ಷ
ಕುಂಚಾವರಂ ವನ್ಯಜೀವಿಧಾಮವು ಮಳೆಗಾಲದಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತದೆ. ಜಲಧಾರೆಗಳು ತುಂಬಿ ಹರಿಯುತ್ತವೆ. ಕಾಡು ಪ್ರಾಣಿಗಳು ಹೆಚ್ಚಾಗಿ ಬೆಳೆಯುತ್ತಿರುವುದರಿಂದ ಜಿಲ್ಲೆಗೆ ಮಾದರಿಯಾಗಿದೆ. ಪರಿಸರ ಮತ್ತು ಕಾಡು ಪ್ರಾಣಿಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. -ಮಲ್ಲಿಕಾರ್ಜುನ ರುದನೂರ, ನಿರ್ದೇಶಕ, ಎಪಿಎಂಸಿ
-ಶಾಮರಾವ ಚಿಂಚೋಳಿ