Advertisement
ವಿಧಾನಸಭಾವಾರು ಮತದಾನ:
Related Articles
Advertisement
ಕಾರ್ಕಳದಲ್ಲಿ ಈ ಬಾರಿ ಶೇ. 78.39 ಮತದಾನವಾದರೆ, 2014ರಲ್ಲಿ ಶೇ.78.98, ವಿಧಾನಸಭೆ ಚುನಾವಣೆಯಲ್ಲಿ ಶೇ.80.61 ಮತದಾನವಾಗಿತ್ತು.
ಶೃಂಗೇರಿಯಲ್ಲಿ ಈ ಬಾರಿ ಶೇ. 78.86 ಮತದಾನವಾದರೆ, 2014ರಲ್ಲಿ ಶೇ.77.22, ವಿಧಾನಸಭೆ ಚುನಾವಣೆಯಲ್ಲಿ ಶೇ.82.55 ಮತದಾನವಾಗಿತ್ತು.
ಮೂಡಿಗೆರೆಯಲ್ಲಿ ಈ ಬಾರಿ ಶೇ. 74.79 ಮತದಾನವಾದರೆ, 2014ರಲ್ಲಿ ಶೇ.72.27, ವಿಧಾನಸಭೆ ಚುನಾವಣೆಯಲ್ಲಿ ಒಟ್ಟು ಶೇ.77.15 ಮತದಾನ ವಾಗಿತ್ತು.
ಚಿಕ್ಕಮಗಳೂರಿನಲ್ಲಿ ಈ ಬಾರಿ ಶೇ. 69.45 ಮತದಾನವಾದರೆ, 2014ರಲ್ಲಿ ಶೇ.67.43, ವಿಧಾನಸಭೆ ಚುನಾವಣೆ ಯಲ್ಲಿ ಶೇ.74.52 ಮತದಾನವಾಗಿತ್ತು.
ತರಿಕೆರೆಯಲ್ಲಿ ಈ ಬಾರಿ ಶೇ.72.18 ಮತದಾನವಾದರೆ, 2014ರಲ್ಲಿ ಶೇ. 70,88, ವಿಧಾನಸಭೆ ಚುನಾವಣೆಯಲ್ಲಿ ಒಟ್ಟು ಶೇ.81.78 ಮತದಾನವಾಗಿತ್ತು.
ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಕುಂದಾಪುರ, ಶೃಂಗೇರಿ, ಚಿಕ್ಕಮಗಳೂರು, ತರಿಕೆರೆ, ಮೂಡಿಗೆರೆ, ಕಾಪುವಿನಲ್ಲಿ ವಿಧಾನಸಭೆಗಿಂತ ಕಡಿಮೆ, ಲೋಕಸಭೆಗಿಂತ ಹೆಚ್ಚು ಮತದಾನವಾಗಿದೆ. ಕಾರ್ಕಳದಲ್ಲಿ ಎರಡೂ ಚುನಾವಣೆಗಿಂತ ಕಡಿಮೆ ಮತದಾನವಾಗಿದೆ. ಉಡುಪಿಯಲ್ಲಿ ಮಾತ್ರ ಎರಡೂ ಚುನಾವಣೆಗಿಂತ ಈ ಬಾರಿ ಹೆಚ್ಚಿನ ಮತದಾನವಾಗಿದೆ. ಸಾಮಾನ್ಯವಾಗಿ ಮತದಾರರು ಲೋಕಸಭೆ, ವಿಧಾನಸಭೆ, ಜಿ.ಪಂ., ತಾ.ಪಂ., ಗ್ರಾ.ಪಂ.ಗಳಲ್ಲಿ ಕೆಳಗಿನ ಹಂತದ ಚುನಾವಣೆಗೆ ಬಂದಾಗ ಹೆಚ್ಚು ತೊಡಗಿಸಿಕೊಳ್ಳುತ್ತಾರೋ? ಅಥವಾ ಲೋಕಸಭೆಗಿಂತ ಚಿಕ್ಕ ಭೌಗೋಳಿಕ ಪ್ರದೇಶ ವ್ಯಾಪ್ತಿಯ ವಿಧಾನಸಭೆಗೆ ಜನರು ಹೆಚ್ಚು ಉತ್ಸುಕರಾಗಿರುತ್ತಾರೋ ಎಂದು ಸಂಶಯ ಮೂಡಿಬರುತ್ತದೆ.
ಶೃಂಗೇರಿಯಲ್ಲಿ ಶೇ. 78.86 ಮತದಾನ ವಾಗಿದ್ದು ಪ್ರಥಮ ಸ್ಥಾನದಲ್ಲಿದೆ. ಶೇ. 69.45 ಮತದಾನವಾಗಿರುವ ಚಿಕ್ಕಮಗಳೂರು ಕೊನೆಯ ಸ್ಥಾನದಲ್ಲಿದೆ. 2014ರ ಚುನಾವಣೆಯಲ್ಲಿ ಕಾರ್ಕಳ ಶೇ. 78.98 ಮತಗಳಿಂದ ಮೊದಲ ಸ್ಥಾನದ ಲ್ಲಿತ್ತು ಮತ್ತು ಚಿಕ್ಕಮಗಳೂರು ಶೇ.67.43 ಮತಗಳಿಂದ ಕೊನೆಯ ಸ್ಥಾನದಲ್ಲಿತ್ತು.
ಬಿಜೆಪಿ ವರಸೆ:
ಹೊಸ ಮತದಾರರು ಮೋದಿ ಪರವಾಗಿ ಹೆಚ್ಚು ಉತ್ಸಾಹದಿಂದ ಮತ ಚಲಾಯಿಸಿದ್ದಾರೆ. ಎಲ್ಲ ಕಡೆ ಕಾರ್ಯ ಕರ್ತರು ಒಮ್ಮನಸ್ಸಿನಿಂದ ಕೆಲಸ ಮಾಡಿರು ವುದು, ಎಲ್ಲಕ್ಕಿಂತ ಮುಖ್ಯವಾಗಿ ದೇಶ ಉಳಿಸಲು ನರೇಂದ್ರ ಮೋದಿ ಸಮರ್ಥ ನಾಯಕನೆಂದು ಮತದಾರರು ಅರಿತಿರು ವುದು ನಮಗೆ ಪೂರಕ. ಇದುವರೆಗೆ ಮತದಾನದಿಂದ ದೂರು ಉಳಿಯುತ್ತಿದ್ದ ಶಿಕ್ಷಿತ ಮತದಾರರು ಬಹಳ ಬೇಗ ಬಂದು ಮತ ಚಲಾಯಿಸಿದ್ದಾರೆ. ಯಾವಾಗ ಹೆಚ್ಚು ಮತದಾನವಾಗುತ್ತದೋ ಆಗ ಬಿಜೆಪಿಗೇ ಗೆಲುವಾಗಿದೆ ಎನ್ನುವುದು ನಮ್ಮ ಅನುಭವ ಎಂದು ಬಿಜೆಪಿ ನಾಯಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಜೆಡಿಎಸ್- ಕಾಂಗ್ರೆಸ್ ವರಸೆ:
ಮೊಗವೀರ ಸಮುದಾಯದವರು ತಮ್ಮ ಅಭ್ಯರ್ಥಿಗೆ ಹೆಚ್ಚಿನ ಮತದಾನ ಮಾಡುವುದರಿಂದ ಉಡುಪಿ, ಕಾಪು, ಕುಂದಾಪುರ ಕ್ಷೇತ್ರದಲ್ಲಿ ತಾವೇ ಮುಂದಿದ್ದು ಉಡುಪಿ ನಗರ ಭಾಗದಲ್ಲಿ ಮಾತ್ರ ಕಡಿಮೆಯಾದರೂ ಬ್ರಹ್ಮಾವರ ಭಾಗದಲ್ಲಿ ಮುಂದಿದ್ದೇವೆ. ಕಾರ್ಕಳ ಸಮಸಮವಾಗಿದ್ದೇವೆ. ತರಿಕೆರೆ ಕ್ಷೇತ್ರದಲ್ಲಿ ಗಂಗಾಮತಸ್ಥರು ದೊಡ್ಡ ಸಂಖ್ಯೆಯಲ್ಲಿರುವುದು ನಮಗೆ ಹೆಚ್ಚಿನ ಬಲ ಸಿಗಲಿದೆ. ಚಿಕ್ಕಮಗಳೂರು ಕ್ಷೇತ್ರ ಹೊರತುಪಡಿಸಿ ತರಿಕೆರೆ, ಮೂಡಿಗೆರೆ, ಶೃಂಗೇರಿಯಲ್ಲಿ ಅಭ್ಯರ್ಥಿ ಹೊಸಮುಖ ವಾಗಿರುವುದರಿಂದ, ಜೆಡಿಎಸ್ ಪ್ರಬಲ ವಾಗಿರುವುದರಿಂದ ಹೆಚ್ಚಿನ ಲಾಭ ತರಲಿದೆ ಎಂದು ಕಾಂಗ್ರೆಸ್- ಜೆಡಿಎಸ್ ನಾಯಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.