Advertisement
ದಿ ಫೆಡರೇಶನ್ ಆಫ್ ಆಟೋ ಮೊಬೈಲ್ ಡೀಲರ್ ಅಸೋಸಿಯೇಶನ್ ವಾಹನಗಳ ಚಿಲ್ಲರೆ ಮಾರಾಟದ ಜೂನ್ ತಿಂಗಳ ಅಂಕಿಅಂಶ ವನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ವಾರ್ಷಿಕ ಆಧಾರದ ಮೇಲೆ ವಾಹನಗಳ ಮಾರಾಟವು ಜೂನ್ ತಿಂಗಳಿನಲ್ಲಿ ಶೇ.10ರಷ್ಟು ಏರಿಕೆ ಕಂಡಿದೆ ಎಂದು ಹೇಳಿದೆ. ಇದೇ ತಿಂಗಳಿನ ಆಧಾರದ ಮೇಲೆ ನೋಡಿದರೆ ಶೇ. 8ರಷ್ಟು ಚಿಲ್ಲರೆ ಮಾರಾಟದಲ್ಲಿ ಇಳಿಕೆಯಾಗಿದೆ.
ದೇಶದಲ್ಲಿ ಈ ವರ್ಷದ ಜೂನ್‌ನಲ್ಲಿ ಪ್ಯಾಸೆಂಜರ್ ವಾಹನಗಳ ಚಿಲ್ಲರೆ ಮಾರಾಟವು ಶೇ.5 ರಷ್ಟು ಹೆಚ್ಚಳವಾಗಿದ್ದು 2,95,299 ವಾಹನಗಳು ಮಾರಾಟ ವಾಗಿವೆ. 2022ರ ಜೂನ್‌ನಲ್ಲಿ 2,81,811 ಪ್ಯಾಸೆಂಜರ್ ವಾಹನಗಳು ಮಾರಾಟವಾಗಿದ್ದವು. ಇದೇ ವೇಳೆ ಈ ವರ್ಷದ ಜೂನ್‌ನಲ್ಲಿ ದ್ವಿಚಕ್ರ ವಾಹನ ಗಳ ಮಾರಾಟದಲ್ಲೂ ಶೇ. 7ರಷ್ಟು ಏರಿಕೆ ಯಾಗಿದ್ದು 13,10,186 ವಾಹನಗಳು ಮಾರಾಟವಾಗಿವೆ. 2022ರ ಜೂನ್‌ನಲ್ಲಿ 12,27,149 ದ್ವಿಚಕ್ರ ವಾಹನಗಳು ಮಾರಾಟವಾಗಿದ್ದವು. ತ್ರಿಚಕ್ರ ವಾಹನಗಳ ಮಾರಾಟ ಹೆಚ್ಚಳ
ಕಳೆದ ವರ್ಷ ಜೂನ್‌ನಲ್ಲಿ 49,299 ತ್ರಿಚಕ್ರ ವಾಹನಗಳ ಮಾರಾಟವಾಗಿದ್ದರೆ, ಈ ಬಾರಿ ಶೆ.75ರಷ್ಟು ಹೆಚ್ಚಳ ಕಂಡು, 86,511 ತ್ರಿಚಕ್ರ ವಾಹನಗಳು ಮಾರಾಟವಾಗಿವೆ. ಟ್ರ್ಯಾಕ್ಟರ್‌ಗಳ ಚಿಲ್ಲರೆ ಮಾರಾಟವು ವರ್ಷದಿಂದ ವರ್ಷಕ್ಕೆ ಶೇ.45ರಷ್ಟು ಏರಿಕೆ ಕಂಡಿದೆ. ಕಮರ್ಶಿಯಲ್ ವಾಹನಗಳ ಮಾರಾಟದಲ್ಲಿ 73,212 ಯೂನಿಟ್‌ನಷ್ಟು ಏರಿಕೆಯಾಗಿದೆ.
Related Articles
– ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೀರೋ ಮೋಟಾರ್ ಬೈಕ್‌ಗಳು ಅತೀ ಹೆಚ್ಚು ಮಾರಾಟವಾಗಿದ್ದು, ಶೇ.32.56 ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.
-ಬಜಾಜ್ ಆಟೋವು ಶೇ. 35.4 ಮಾರುಕಟ್ಟೆ ಮೌಲ್ಯವನ್ನು ಹೊಂದಿದ್ದು, ತ್ರಿಚಕ್ರ ವಾಹನಗಳ ಮಾರಾಟದಲ್ಲಿ ಮೊದಲ ಸ್ಥಾನದಲ್ಲಿದೆ.
-ಟ್ರ್ಯಾಕ್ಟರ್‌ಗಳ ಮಾರಾಟದಲ್ಲಿ ಮಹೀಂದ್ರಾ ಟ್ರ್ಯಾಕ್ಟರ್ ಅತೀ ಹೆಚ್ಚು ಟ್ರ್ಯಾಕ್ಟರ್‌ಗಳನ್ನು ಮಾರಾಟ ಮಾಡಿದೆ. ಇದು ಶೇ.21.94ರಷ್ಟು ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.
Advertisement