Advertisement

ಬಂದರು ಮಾರ್ಗದಲ್ಲಿ ಹೆಚ್ಚಿದ ಬೀದಿ ನಾಯಿಗಳ ಕಾಟ

10:03 PM May 29, 2020 | Sriram |

ಮಲ್ಪೆ: ಮಲ್ಪೆ ನಗರದ ಮುಖ್ಯ ವೃತ್ತದ ಕಾರ್ಪೊರೇಶನ್‌ ಬ್ಯಾಂಕ್‌ ಸಮೀಪದ ರಸ್ತೆಯಿಂದ 3ನೇ ಹಂತದ ಮೀನುಗಾರಿಕೆ ಬಂದರು, ಪಡುಕರೆ ಸೇತುವೆಯವರೆಗೆ ಹೋಗುವ ಮಾರ್ಗದಲ್ಲಿ ಬೀದಿ ನಾಯಿಗಳ ಕಾಟ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು ಸಾರ್ವಜನಿಕರು ತೊಂದರೆಯನ್ನು ಅನುಭವಿಸುಂತಾಗಿದೆ.

Advertisement

ಮೀನುಗಾರಿಕೆ ಬಂದರು ರಸ್ತೆ ಜನ ಓಡಾಟ ಇರುವ ಜಾಗದಲ್ಲಿ ನಾಯಿಗಳು ಬೀಡು ಬಿಟ್ಟಿದ್ದು, ಹಗಲು ಹಾಗೂ ಮಂಜಾನೆಯಲ್ಲಿ ರಸ್ತೆ ಯಲ್ಲಿ ನಡೆದುಕೊಂಡು ಹೋಗುವವರಿಗೆ ಮತ್ತು ದ್ವಿಚಕ್ರ ಸಾವಾರಿಗೆ ಈ ನಾಯಿಗಳು ಕಾಟ ಕೊಡುತ್ತಿರುವುದರಿಂದ ಭಯದಲ್ಲೇ ಹೋಗಬೇಕಾಗ ಸ್ಥಿತಿ ಇದೆ. ಹಿಂಡು ಹಿಂಡಾಗಿ ಗುಂಪು ಕೂಡುವ ನಾಯಿಗಳು ದ್ವಿಚಕ್ರ ಸವಾರರನ್ನು ಬೆನ್ನತ್ತಿ ಕಚ್ಚಲು ಬಂದಾಗ ಬಹುತೇಕ ಬೈಕ್‌ ಸಾವಾರರು ಬಿದ್ದು ಗಾಯಗೊಂಡ ನಿದರ್ಶನಗಳಿವೆ.

ಪ್ರಮುಖವಾಗಿ ಇಲ್ಲಿ ತ್ಯಾಜ್ಯಗಳು ಎಸೆಯುವ ಕಡೆಗಳಲ್ಲಿ ಈ ನಾಯಿಗಳು ಮುತ್ತಿಕೊಂಡಿರುತ್ತವೆ. ತ್ಯಾಜ್ಯ ರಾಶಿ ಎಳೆದಾಡಿ ಅಳಿ ದುಳಿದ ಅಹಾರಕ್ಕಾಗಿ ಪೈಪೋಟಿಗೆ ಬಿದ್ದು ಕಚ್ಚಾಡುತ್ತಿವೆ ಎನ್ನಲಾಗಿದೆ. ಸಂಬಂಧಪಟ್ಟವರು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಇಲ್ಲಿನ ನಾಗರಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next