ಕಳೆದ ಮೂರ್‍ನಾಲ್ಕು ದಿನದಿಂದ ಗಾಳಿ- ಮಳೆ – ಅಲೆಗಳ ಅಬ್ಬರಕ್ಕೆ ಈ ಪ್ರದೇಶದಲ್ಲಿ ಭಾರೀ ಕೊರೆತ ಉಂಟಾಗಿದೆ. ಬೃಹತ್ ಗಾತ್ರದ ಅಲೆಗಳು ರಸ್ತೆಗೆ ಅಪ್ಪಳಿಸುತ್ತಿದ್ದು ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.
Advertisement
ಕೆಲವೆಡೆ ಅಲೆಗಳು ತಡೆಗೋಡೆಯನ್ನು ಕೊರೆದು ಮುನ್ನುಗ್ಗಿ ಬರುತ್ತಿವೆ. ಬೃಹತ್ ಅಲೆಗಳು ಕಾಂಕ್ರೀಟ್ ರಸ್ತೆಗೆ ಅಪ್ಪಳಿಸುತ್ತಿದ್ದು ರಸ್ತೆ ಅಪಾಯದ ಭೀತಿಯಲ್ಲಿದೆ. ಸಮೀಪದಲ್ಲಿರುವ ವಿದ್ಯುತ್ ಕಂಬ ಸಮುದ್ರಪಾಲಾಗಿದೆ.ಈ ಹಿಂದೆ ತಡೆಗೋಡೆಗೆ ಹಾಕಿದ ಕಲ್ಲುಗಳು ಸಮುದ್ರ ಸೇರುತ್ತಿವೆ. ಇಷ್ಟಾದರೂ ತಾತ್ಕಾಲಿಕವಾಗಿ ಕಲ್ಲು ಹಾಕುವ ಕೆಲಸ ಮಾತ್ರ ಇನ್ನೂ ನಡೆದಿಲ್ಲ ಎಂದು ಸ್ಥಳೀಯರು ದೂರಿಕೊಂಡಿದ್ದಾರೆ. ಕುತ್ಪಾಡಿ ಪಡುಕರೆಯಲ್ಲಿ ನಿರಂತರ ಕಲ್ಲು ಹಾಕಿದ ಹಿನ್ನೆಲೆಯಲ್ಲಿ ಕೊರೆತದ ಪ್ರಮಾಣ ಕಡಿಮೆಯಾಗಿದೆ.