Advertisement
ಕೇರಳದ ವೈನಾಡು ಪ್ರದೇಶ ಸೇರಿದಂತೆ ತಾಲೂಕು ಮತ್ತು ಕಬಿನಿ ಹಿನ್ನಿರು ಪ್ರದೇಶದಲ್ಲಿ ಕಳೆದ 3-4 ದಿನಗಳಿಂದ ಹೆಚ್ಚಿನ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಹರಿದು ಬರುತ್ತಿರುವ ಒಳ ಹರಿವಿನ ಪ್ರಮಾಣ ಹೆಚ್ಚುತ್ತಿದೆ. ಕಳೆದ ಶುಕ್ರವಾರ 3 ರಿಂದ 4 ಸಾವಿರ ಕ್ಯೂಸೆಕ್ ಇದ್ದ ಒಳ ಹರಿವು, ಶನಿವಾರ 3.85 ಕ್ಯೂಸೆಕ್ ತನಕ ಏರಿತ್ತು. ದಿನಲೂ ಉತ್ತಮ ಮಳೆಯಾದ ಪರಿಣಾಮ ಭಾನುವಾರ ಅದು 7200 ಕ್ಯೂಸೆಕ್ ಏರಿಕೆ ಕಂಡಿದೆ.
Related Articles
Advertisement
ಬತ್ತಿದ ಕೆರೆ ಕಟ್ಟೆ ಬೋರಲ್ಲೂ ನೀರು ಇಲ್ಲ: ಕಳೆದ 3 ವರ್ಷಗಳಲ್ಲಿ ಆವರಿಸಿದ್ದ ಬರದ ಛಾಯೆಯಿಂದ ಮೊದಲೇ ಬೆಳೆ ನಷ್ಟ ಕಂಡಿದ್ದ ರೈತರು ಈ ಬಾರಿಯೂ ಮುಂಗಾರು ಮಳೆ ಕೈಕೊಟ್ಟು, ಹಿಂಗಾರು ಮಳೆ ಪ್ರಾರಂಭ ಆಗದೆ ಸಂಕಷ್ಟಕ್ಕೀಡಾಗಿದ್ದರು.
ಉತ್ತಮ ಮಳೆ, ಮತ್ತೇ ಚಿಗುರಿದ ಕನಸು: ಜಲಾಶಯಕ್ಕೆ 7 ಸಾವಿರ ಕ್ಯೂಸೆಕ್‌ಗೂ ಹೆಚ್ಚಿನ ನೀರು ಹರಿದು ಬರುತ್ತಿದೆ. ಇನ್ನೂ ಸೋಮವಾರ ಕೂಡ ಮಳೆ ಹೆಚ್ಚಿದ್ದು ಜಲಾಶಯದ ಒಳ ಹರಿವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಜಲಾಶಯ ಶೀಘ್ರ ಭರ್ತಿಗೊಳ್ಳುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಈ ಹಿಂದೆ ಜಲಾಶಯದ ನೀರಿನ ಮಟ್ಟ ಕುಸಿದಿತ್ತು ನೆರೆ ರಾಜ್ಯ ಕೇರಳದ ವೈನಾಡು ಪ್ರದೇಶದಲ್ಲಿ ಕಳೆದ ತಿಂಗಳು ಹಾಗೂ ಅದಕ್ಕೂ ಮುನ್ನ ಪೂರ್ವ ಮುಂಗಾರು ವೇಳೆ ಕೆಲ ದಿನಗಳು ಮಳೆ ಅಬ್ಬರಿಸಿದ ಪರಿಣಾಮ ಜಲಾಶಯಕ್ಕೆ ಸುಮಾರು 17 ಸಾವಿರ ಕ್ಯೂಸೆಕ್ ನಷ್ಟು ನೀರು ಹರಿದು ಬಂದ ಪರಿಣಾಮ ಜಲಾಶಯದಲ್ಲಿ 74 ಅಡಿಗಳಷ್ಟು ನೀರು ಸಂಗ್ರಹಣಗೊಂಡಿತ್ತು. ಆದರೆ, ಜಲಾಶಯ ಇನ್ನೇನು ತುಂಬಿ ಬಾಗಿನಕ್ಕೆ ಭಾಜನವಾಗಬಹುದು ಎಂದು ತಾಲೂಕಿನ ಜನರು ಕನಸು ಕಂಡಿದ್ದರೂ ಅಷ್ಟರಲ್ಲೇ ಸರ್ಕಾರ ಸಂಕಷ್ಟ ಸೂತ್ರ ನೆಪವೊಡ್ಡಿ ದಿನಲೂ ಕಬಿನಿ ಜಲಾಶಯದಿಂದ 10 ಸಾವಿರಕ್ಕೂ ಹೆಚ್ಚು ನೀರನ್ನು ಹೊರ ಬಿಟ್ಟ ಕಾರಣ ಮತ್ತು ಇತ್ತೀಚಿಗೆ ಕೆರೆ ಕಟ್ಟೆ ತುಂಬಿಸಲು ಹಾಗೂ ಜಾನುವಾರುಗಳಿಗೆ ನೀರುಣಿಸಲು ಎಡ ಮತ್ತು ಬಲದಂಡೆ ನಾಲೆಗಳಿಗೆ ನದಿ ಸೇರಿ ದಿನಾಲೂ 4 ಸಾವಿರ ನೀರು ಹರಿಸಿದ್ದರಿಂದ ತುಂಬುವ ಹಂತದಲ್ಲಿದ್ದ ಜಲಾಶಯ 68 ಅಡಿಗೆ ಕುಸಿದಿತ್ತು. ಕೇರಳದ ವೈನಾಡು ಹಾಗೂ ಜಲಾಶಯದ ಹಿನ್ನೀರು ವ್ಯಾಪ್ತಿಯಲ್ಲಿ ಉತ್ತಮ ಮಳೆ ಆದ ಪರಿಣಾಮ ಹೆಚ್ಚಿನ ನೀರು ಹರಿದು ಬಂದಿದೆ. ದಿನಾಲೂ ಒಳ ಹರಿವಿನ ಪ್ರಮಾಣ ಹೆಚ್ಚಾಗುತ್ತಿದ್ದು, ಇದೇ ರೀತಿ ಇನ್ನಷ್ಟು ದಿನ ಮಳೆ ಮುಂದುವರಿದರೆ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ.
-ಕೃಷ್ಣಯ್ಯ, ಎಇಇ * ಬಿ.ನಿಂಗಣ್ಣಕೋಟೆ