Advertisement

Pollution: ಪಟಾಕಿಯಿಂದ ಅಧಿಕಗೊಂಡ ಮಾಲಿನ್ಯ

10:11 AM Nov 16, 2023 | Team Udayavani |

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಸಂಭ್ರಮಕ್ಕೆ ಅದ್ದೂರಿ ತೆರೆ ಬಿದ್ದಿದ್ದು, ಮತ್ತೂಂದೆಡೆ ಸಿಲಿಕಾನ್‌ ಸಿಟಿಯಲ್ಲಿ ಅತಿಯಾದ ಪಟಾಕಿ ಸಿಡಿಸಿದ ಪರಿಣಾಮ ಸಾಮಾನ್ಯ ದಿನಗಳಿಗಿಂತ ಭಾರಿ ಹೆಚ್ಚಿನ ಮಾಲಿನ್ಯ ಉಂಟಾಗಿದೆ. ಪ್ರತಿ ವರ್ಷವೂ ದೀಪಾವಳಿ ಸಮಯದಲ್ಲಿ ವಾಯು ಮಾಲಿನ್ಯ ಸಹಜ. ಅದರಂತೆ ಈ ವರ್ಷ ದೀಪಾವಳಿಗೆ ಹೆಚ್ಚಿನ ಪ್ರಮಾಣದ ಪಟಾಕಿ ಸಿಡಿಸಿದ ಹಿನ್ನೆಲೆಯಲ್ಲಿ ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಪ್ರಮಾಣವೂ ಗಮನಾರ್ಹವಾಗಿ ಏರಿಕೆಯಾಗಿದೆ.

Advertisement

ಸಾಮಾನ್ಯ ದಿನಕ್ಕೆ ಹೋಲಿಸಿದರೆ ನ.13, 14ರಂದು ಶೇ.40 ವಾಹನಗಳು ರಸ್ತೆಗಿಳಿದಿರಲಿಲ್ಲ. ಆದರೆ, ಸಂಜೆಯಾಗುತ್ತಿದ್ದಂತೆ ನಗರಾದ್ಯಂತ ಪಟಾಕಿ ಹೊಗೆ ಆವರಿಸಿತ್ತು. ಹೀಗಾಗಿ ನ.14ರಂದು ಗಾಳಿಯ ಗುಣಮಟ್ಟ ಸೂಚ್ಯಂಕವು (ಎಕ್ಯುಐ) ಜಯನಗರ ದಲ್ಲಿ 301, ಬಾಪೂಜಿನಗರ 258, ಸಿಲ್ಕ್ ಬೋಡ್‌ ìನಲ್ಲಿ 301, ಹೊಂಬೇಗೌಡನಗರದಲ್ಲಿ 220ಕ್ಕೆ ಗಮನಾರ್ಹ ಏರಿಕೆಯಾಗಿರುವುದನ್ನು ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ದೃಢಪಡಿಸಿ ದ್ದು, ಆತಂಕ ಹುಟ್ಟಿಸಿದೆ. ಸಾಮಾನ್ಯ ದಿನಕ್ಕಿಂತ ಸುಮಾರು ಮೂರು ಪಟ್ಟು ಮಾಲಿನ್ಯ ಹೆಚ್ಚಿರುವು ದನ್ನು ಅಂದಾಜಿಸಲಾಗಿದೆ. ಪಟಾಕಿ ಮಾಲಿನ್ಯ ತಂದ ಆಪತ್ತು :ನಗರದಲ್ಲಿ ನಿರಂತರ ವಾಯುಮಾಲಿನ್ಯ ಹೆಚ್ಚಳದಿಂದ ವಿವಿಧ ಕಾಯಿಲೆಗಳಿಗೆ ತುತ್ತಾದವರು, ಉಸಿರಾಟದ ಸಮ ಸ್ಯೆ ಇರುವವರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

ಕಳೆದೆರಡು ದಿನಗಳಲ್ಲಿ ಪಟಾಕಿ ಮಾಲಿನ್ಯವು ಸಾವಿರಾರು ಬೆಂಗಳೂರಿಗರ ಆರೋಗ್ಯಕ್ಕೆ ಕುಂದು ಉಂಟು ಮಾಡಿದೆ. ಶುದ್ಧ ಗಾಳಿ ಕೊರತೆಯಿಂದ ಬೆಂಗಳೂರಿಗರಲ್ಲಿ ಅಲರ್ಜಿ, ಉಸಿರಾಟದ ಸಮಸ್ಯೆ, ಆಗಾಗ ಜ್ವರ, ಶೀತ, ಚರ್ಮದ ಕಾಯಿಲೆ, ಕೆಮ್ಮು, ನಿಶಕ್ತಿಗೆ ಒಳಗಾಗುವವರ ಪ್ರಮಾಣ ಹೆಚ್ಚಿದ್ದು, ಹಲವರು ಚಿಕಿತ್ಸೆಗಾಗಿ ಆಸ್ಪತ್ರೆ ಮೊರೆ ಹೋಗಿದ್ದಾರೆ. ಮಾಲಿನ್ಯದಿಂದ ಮಕ್ಕಳು ಹಾಗೂ ವಯಸ್ಸಾದವರಲ್ಲಿ ಶ್ವಾಸಕೋಶದ ವ್ಯವಸ್ಥೆಯು ದುರ್ಬಲವಾಗುವ ಸಾಧ್ಯತೆಗಳಿವೆ ಎಂದು ತಜ್ಞ ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಟಾಕಿಯಿಂದ ಪರಿಸರಕ್ಕೆ ಹಾನಿ: ನಗರದಲ್ಲಿ ಸಾರಿಗೆ ವಲಯದಿಂದಲೇ ಶೇ.50 ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಉಂಟಾಗುತ್ತದೆ. ಅತಿ ಯಾದ ಜನಸಂದಣಿಯಿಂದ ಶೇ.16.9 ರಸ್ತೆ ಧೂಳು ಉತ್ಪತ್ತಿಯಾಗುತ್ತದೆ. ರಸ್ತೆ, ಕಟ್ಟಡ ಕಾಮ ಗಾರಿಗಳಿಂದ ಶೇ.11, ಕೈಗಾರಿಕೆಗಳಿಂದ ಶೇ.0.1, ತ್ಯಾಜ್ಯ ಸುಡುವುದರಿಂದ ಶೇ.4 ಮಾಲಿನ್ಯ ಬೆಂಗಳೂರಿನಲ್ಲಿ ಉಂಟಾಗುತ್ತದೆ. ಹಸಿರು ಪಟಾಕಿ ಹೆಸರಿನಲ್ಲಿ ಹಲವು ಕಡೆಗಳಲ್ಲಿ ಕೆಂಪು ಪಟಾಕಿ ಸುಡಲಾಗಿದೆ.

ಹಸಿರು ಪಟಾಕಿಗಳಲ್ಲೂ ಸಾಕಷ್ಟು ಹಾನಿಕಾರಕ ರಾಸಾಯನಿಕ ಬೆರೆಸಲಾಗುತ್ತದೆ. ಪಟಾಕಿಯಿಂದ ಬೆಂಗಳೂರಿನ ಸುತ್ತ-ಮುತ್ತಲಿನ ಪರಿಸರಕ್ಕೆ ಪ್ರತಿ ವರ್ಷದಂತೆ ಈ ವರ್ಷವೂ ಹಾನಿಯಾಗಿದೆ ಎನ್ನುತ್ತಾರೆ ಪರಿಸರ ತಜ್ಞರು. ಎಕ್ಯೂಐ ಗುಣಮಟ್ಟ ಎಷ್ಟಿದ್ದರೆ ಉತ್ತಮ ? ಗಾಳಿಯ ಗುಣಮಟ್ಟ ಸೂಚ್ಯಂಕವು (ಎಕ್ಯುಐ) 0-50 ಇದ್ದರೆ ಉತ್ತಮ. 51-100 ಇದ್ದರೆ ಸಮಾ ಧಾನಕರ, 100-200 ಮಧ್ಯಮ, 201-300 ಕಳಪೆ, 301-400 ಇದ್ದರೆ ತುಂಬಾ ಕಳಪೆ ಹಾಗೂ ಎಕ್ಯುಐ ಪ್ರಮಾಣ 401-500 ಇದ್ದರೆ ತೀವ್ರ ಕಳಪೆ ಎಂದು ಪರಿಗಣಿಸಲಾಗುತ್ತದೆ. ಎಕ್ಯೂಐ 201ರಿಂದ 500ರ ಆಸು-ಪಾಸಿನಲ್ಲಿದ್ದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಉಸಿರಾಟ, ಶ್ವಾಸಕೋಶದ ಸಮಸ್ಯೆ ಇರುವವರ ಆರೋಗ್ಯ ಹದಗೆಡುತ್ತವೆ ಎಂದು ಕೆಎಸ್‌ಪಿಸಿಬಿ ತಿಳಿಸಿದೆ.

Advertisement

ಪಟಾಕಿಯಿಂದ ಪರಿಸರಕ್ಕೆ ಭಾರಿ ಹಾನಿಯಾಗಿದೆ. ಬೆಂಗಳೂರಿಗರು ಮಾಲಿನ್ಯ ನಿಯಂತ್ರಣದ ಬಗ್ಗೆ ಎಚ್ಚೆತ್ತು ಕೊಳ್ಳದಿದ್ದರೆ ಮುಂದೆ ಭಾರಿ ಸಂಕಷ್ಟ ಎದುರಾದೀತು. ಪ್ರತಿ ವರ್ಷ ದೀಪಾವಳಿ ವೇಳೆ ಪಟಾಕಿಯಿಂದ ಪರಿಸರಕ್ಕೆ ಹಾನಿಯಾಗುವ ಜತೆಗೆ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಡಾ.ಎ.ಎನ್‌.ಯಲ್ಲಪ್ಪ ರೆಡ್ಡಿ, ಪರಿಸರ ತಜ್ಞ

Advertisement

Udayavani is now on Telegram. Click here to join our channel and stay updated with the latest news.

Next