ಬಸವಕಲ್ಯಾಣ: ಭಕ್ತಿ ಸಂಗೀತದ ಮೂಲಕ ನಾಡು, ನುಡಿಗೆ ಸೇವೆ ಸಲ್ಲಿಸಿದ ಪಂಡಿತ ವಿರೂಪಾಕ್ಷಯ್ಯ ಸ್ವಾಮಿ
ಅವರು ಸಂಗೀತ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿ ಕಲ್ಯಾಣ ನಾಡಿನ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಗೋರಟಾದ
ಡಾ| ರಾಜಶೇಖರ್ ಶಿವಾಚಾರ್ಯ ಸ್ವಾಮೀಜಿ ನುಡಿದರು.
ಗೋರಟಾ ಗ್ರಾಮದ ಶ್ರೀ ಸಂಗೀತ ರುದ್ರೇಶ್ವರ ದೇವಾಲಯದ ಆವರಣದಲ್ಲಿ ಪಂ| ವಿರೂಪಾಕ್ಷಯ್ಯ ಸ್ವಾಮಿ ಅವರ 6ನೇ ಪುಣ್ಯ ಸ್ಮರಣೋತ್ಸವ ನಿಮಿತ್ತ ನಡೆದ ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಪಂಡಿತ ವಿರೂಪಾಕ್ಷಯ್ಯನವರ ಆದರ್ಶ ಬದುಕು ನಮ್ಮೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ ಎಂದರು.
ಪಂಡಿತ ವಿರೂಪಾಕ್ಷಯ್ಯನವರ ಪುಣ್ಯದ ಫಲವಾಗಿಯೇ ಇಲ್ಲಿ ಶ್ರೀ ಸಂಗೀತ ರುದ್ರೇಶ್ವರ ದೇವಾಲಯ ನಿರ್ಮಾಣವಾಗಿದೆ. ಮೈಸೂರು ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದಿಂದ ಇಲ್ಲಿ ಪ್ರಾದೇಶಿಕ ಸಂಗೀತ ಅಧ್ಯಯನ ಕೇಂದ್ರ ಮಂಜೂರಾಗಿದೆ. ತಿಂಗಳ ಹಿಂದೆಯೇ ಉದ್ಘಾಟನೆಯೂ ಆಗಿದ್ದು, ಶಿಘ್ರದಲ್ಲಿಯೇ ಕಾರ್ಯರಂಭ ಮಾಡಲಿದೆ ಎಂದರು.
ಬಾಗಲಕೋಟೆಯ ಡಾ| ಸಿದ್ದರಾಮಯ್ಯ ಸ್ವಾಮಿ ಅವರು ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರೊ| ರುದ್ರೇಶ್ವರ ಸ್ವಾಮಿ, ಕಾಶಿಲಿಂಗ ಸ್ವಾಮಿ, ಸರಸ್ವತಿ ಸ್ವಾಮಿ, ನಿವೃತ್ತ ಬಿಇಒ ಬಸವರಾಜ ಸ್ವಾಮಿ, ಡಾ| ನಾಗನಾಥ ಸ್ವಾಮಿ ಹುಲಸೂರು, ಚಂದ್ರಕಾಂತ ಚಂದನಹಳ್ಳಿ, ಭೂದಾನಿ ಕರಬಸಪ್ಪ ಅಕ್ಕಣ್ಣ, ಬಸವರಾಜ ದಿಂಡೆ, ಜಗನ್ನಾಥ ಸ್ವಾಮಿ, ಬಸವರಾಜ ವಡಗಾಂವ, ಕರಬಸಪ್ಪ ಮಠಪತಿ ಇನ್ನಿತರರು ಇದ್ದರು. ಇದಕ್ಕೂ ಮುನ್ನ ಸಂಗೀತ ರುದ್ರೇಶ್ವರ ದೇವಾಲಯದ ಆವರಣದಲ್ಲಿರುವ ಪಂಡಿತ ವಿರೂಪಾಕ್ಷಯ್ಯ ಸ್ವಾಮಿ ಅವರ ಸಮಾಧಿಗೆ ಸಂಗೀತ ರುದ್ರಾಭಿಷೇಕ ಪೂಜೆ ನೆರವೇರಿಸಲಾಯಿತು.