Advertisement
ನಟ ಪುನೀತ್ ರಾಜಕುಮಾರ್ ಕಳೆದ ಶುಕ್ರವಾರವಷ್ಟೇ ನಿಧನರಾದರು. ಆದರೆ, ನಂತರದ ಬೆಳವಣಿಗೆಯಲ್ಲಿ ಮಾಧ್ಯಮಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಎದೆ ನೋವು ಬರುತ್ತಿದ್ದರೆ ನಿರ್ಲಕ್ಷ್ಯ ಮಾಡಬೇಡಿ ಎಂಬ ವೈದ್ಯರ ಸಲಹೆಗಳು ಹೆಚ್ಚು ಕೇಳಿಬಂದಿದ್ದವು. . ಇದರಿಂದ ಆತಂಕಗೊಂಡಿರುವ ಜನರು ಯಾವುದಕ್ಕೂ ಒಮ್ಮೆ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ ಎಂದು ನಿರ್ಧರಿಸಿ ಆಸ್ಪತ್ರೆಗಳಿಗೆ ದೌಡಾಯಿಸಿ ತಪಾಸಣೆಗೆ ಒಳಗಾಗಿದ್ದಾರೆ.
Related Articles
Advertisement
ಜೀವನಶೈಲಿ ಬದಲಾಯಿಸಿಕೊಳ್ಳಿ:ಪುನೀತ್ ನಿಧನದಿಂದ ದಿಢೀರ್ ಬೆಳವಣಿಗೆಯಲ್ಲಿ ಜನರು ತಪಾಸಣೆಗೆ ಮುಂದಾಗುತ್ತಿದ್ದಾರೆ. ಇಂತಹ ಘಟನೆಗಳು ನಡೆದ ಸಂದರ್ಭದಲ್ಲಿ ಎಚ್ಚೆತ್ತುಕೊಳ್ಳುವ ಬದಲು ವರ್ಷದಲ್ಲಿ ಒಮ್ಮೆಯಾದರೂ ಹೃದಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಇದರ ಜೊತೆಗೆ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ವ್ಯಾಯಾಮವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಈಗಿನ ಕಾಲದ ಯುವಕರಲ್ಲಿ ತಾಳ್ಮೆ ಇಲ್ಲ. ಯಾವುದೇ ಕೆಲಸವಾದರೂ ಕ್ಷಣಾರ್ಧದಲ್ಲಿ ಮಾಡಿಬಿಡಬೇಕು ಎಂಬ ಉದ್ದೇಶದಿಂದ ಹೆಚ್ಚು ಒತ್ತಡ ಮಾಡಿಕೊಳ್ಳುತ್ತಾರೆ. ಒತ್ತಡ ಮಾಡಿಕೊಳ್ಳುವುದನ್ನು ಕಡಿಮೆ ಮಾಡಿಕೊಂಡು ಜೀವನ ಶೈಲಿ ಬದಲಾಯಿಸಿಕೊಂಡರೆ ಹೃದಯ ಸಂಬಂಧಿ ಕಾಯಿಲೆಗಳು ಕಡಿಮೆಯಾಗಲಿದೆ ಎಂದು ತಿಳಿಸಿದರು. ವಿಕ್ರಂ ಆಸ್ಪತ್ರೆಯಲ್ಲಿಯೂ ಸಂಖ್ಯೆ ಹೆಚ್ಚಳ
ವಿಕ್ರಂ ಆಸ್ಪತ್ರೆ, ಮಣಿಪಾಲ್ ಆಸ್ಪತೆ ಸೇರಿದಂತೆ ಕಡೆ ತಪಾಸಣೆಗೆ ಒಳಗಾಗುವವರ ಸಂಖ್ಯೆ ಹೆಚ್ಚಳವಾಗಿದೆ. ಸಾಮಾನ್ಯವಾಗಿ ರಜೆ ದಿನಗಳಲ್ಲಿ 2ರಿಂದ 5 ಜನರು ಬರುತ್ತಿದ್ದರು. ಆದರೆ, ಭಾನುವಾರು ಮತ್ತು ಸೋಮವಾರ 12ರಿಂದ 15 ಜನರು ತಪಾಸಣೆಗೆ ಒಳಗಾಗಿದ್ದಾರೆ ಎಂದು ವಿಕ್ರಂ ಆಸ್ಪತ್ರೆ ಮಣಿಪಾಲ್ ಶಾಖೆಯ ಹೃದಯ ತಜ್ಞ ಡಾ. ರಂಜನ್ ಶೆಟ್ಟಿ ತಿಳಿಸಿದರು.