Advertisement

ನಿಲ್ಲದ ಅಣ್ವಸ್ತ್ರ ಅಭಿವೃದ್ಧಿ

03:54 PM Aug 05, 2018 | |

ವಿಶ್ವಸಂಸ್ಥೆ: ಅಮೆರಿಕದ ಜತೆ ಮಾತುಕತೆಗೆ ಮುಂದಾಗಿದ್ದರೂ, ಉತ್ತರ ಕೊರಿಯಾ ಅಣ್ವಸ್ತ್ರ ಮತ್ತು ಕ್ಷಿಪಣಿ ಪರೀಕ್ಷಾ ಕಾರ್ಯಕ್ರಮ ಸ್ಥಗಿತ ಮಾಡಿಯೇ ಇಲ್ಲವೆಂದು ವಿಶ್ವಸಂಸ್ಥೆ ವರದಿ ಹೇಳಿದೆ. ಈ ಮೂಲಕ ವಿಶ್ವಸಂಸೆ‌§ ವತಿಯಿಂದ ಹೇರಲಾಗಿರುವ ನಿರ್ಬಂಧಗಳು ಸತತವಾಗಿ ಉಲ್ಲಂಘನೆ ಗೊಳ್ಳುತ್ತಿವೆ ಎಂದು ತಜ್ಞರ ಸಮಿತಿಯ ವರದಿಯಲ್ಲಿ ಪ್ರತಿ ಪಾದಿಸಿದೆ.
ನಿಬಂಧನೆ ಹಿನ್ನೆಲೆಯಲ್ಲಿ, ಉತ್ತರ ಕೊರಿಯಾ ಆಮದು ಮಾಡಿಕೊಳ್ಳುತ್ತಿದ್ದ ಕಲ್ಲಿದ್ದಲು, ಕಬ್ಬಿಣ, ಸಮುದ್ರ ಆಹಾರ ಹಾಗೂ ಇನ್ನಿತರ ಸಾಮಗ್ರಿಗಳನ್ನು ನಿಷೇಧಿಸಲಾಗಿತ್ತು. ಆದರೆ, ಈ ನಿರ್ಬಂಧದ ಹೊರತಾಗಿಯೂ ಆ ದೇಶಕ್ಕೆ ಸಮುದ್ರ ಮಾರ್ಗವಾಗಿ, ನಿರಂತರವಾಗಿ ಈ ವಸ್ತುಗಳು ರವಾನೆಯಾಗುತ್ತಿವೆ ಎಂದು ಸಮಿತಿ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next