Advertisement
ಮಲದೇವಿಹಳ್ಳಿ ಗ್ರಾಮದ ಎಂ.ಬಿ.ವಿಶ್ವನಾಥ, ಎಚ್. ಕೆ.ಮಂಜುನಾಥ, ಎಂ.ವಿ.ಸತೀಶ್‌ಕುಮಾರ್, ಎಂ.ಎನ್ .ಭೀಮೋಜಿರಾವ್, ಶಿವಲಿಂಗಪ್ಪ, ದೇವರಾಜು,ಕೃಷ್ಣಮೂರ್ತಿ ಸೇರಿದಂತೆ ಹಲವರ ಕೃಷಿಕರ ತೋಟಗಳಲ್ಲಿ20-30 ಮಂಗಗಳು ಎಲ್ಲಿಂದಲೋ ಆಗಮಿಸಿ ಬೀಡುಬಿಟ್ಟಿವೆ. ಮಂಗಗಳು ತೋಟಗಳಲ್ಲಿ ಬೆಳೆದ ತೆಂಗು, ಅಡಕೆ, ಮಾವು, ಬಾಳೆ ,ಹಲಸು ಮುಂತಾದ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತಿಂದು ನಷ್ಟ ಉಂಟು ಮಾಡುತ್ತಿವೆ. ಇವುಗಳನ್ನು ಓಡಿಸಲು ಹೋದಾಗ ಮನುಷ್ಯರ ಮೇಲೆ ದಾಳಿ ಮಾಡುತ್ತವೆ. ಇದರಿಂದ ಮಂಗಗಳ ಹಾವಳಿ ತಡೆಗಟ್ಟಲು ಹರಸಾಹಸ ಪಡುವಂತಾಗಿದೆ.
Related Articles
ಈ ಭಾಗದಲ್ಲಿ ಕಳೆದ 20ವರ್ಷಗಳಿಂದ ಸರಿಯಾಗಿ ಮಳೆಬಾರದೆ ಕೆರೆಕಟ್ಟೆಗಳು ಬತ್ತಿ ಹೋಗಿವೆ. ಆಗಾಗ್ಗೆ ಬೀಳುವ ಅಲ್ಪ ಪ್ರಮಾಣದ ಮಳೆ ಹಾಗೂಕೊಳವೆಬಾವಿಹೊಂದಿರುವುದರಿಂದ ಅಲ್ಪ ಸ್ವಲ್ಪಬೆಳೆ ಕಾಣಬಹುದಾಗಿದೆ.ಈ ಅಲ್ಪ ಸ್ವಲ್ಪ ಪ್ರಮಾಣದಬೆಳೆ ಪಡೆಯಲು ತುಂಬಾ ತೊಂದರೆಯುಂಟಾಗುತ್ತಿದೆ. ಈ ಬಗ್ಗೆ ತಾಲೂಕು ಅರಣ್ಯಾಧಿಕಾರಿಗಳು, ವಲಯ ಅರಣ್ಯಾಧಿಕಾರಿ ಹಾಗೂಸಹಾಯಕ ತೋಟಗಾರಿಕಾ ನಿರ್ದೇಶಕರನ್ನು ಸಂಪರ್ಕಿಸಿ ಕಾಡು ಪ್ರಾಣಿಗಳಿಂದ ಉಂಟಾಗುವ ತೊಂದರೆಯಿಂದ ನಷ್ಟ ಪರಿಹಾರ ಕೊಡಿಸುವಂತೆ ಮನವಿಮಾಡಲಾಗಿದೆ. ಆದರೆ,ಈ ಬಗ್ಗೆ ತಮಗೆ ಯಾವುದೇ ಅಧಿಕೃತ ಆದೇಶ ಬಂದಿಲ್ಲವೆಂದು ತಿಳಿಸಿದ್ದಾರೆಂದು ರೈತರು ಮಾಹಿತಿ ನೀಡಿದ್ದಾರೆ.
Advertisement
– ರವಿಶಂಕರ್