Advertisement
ಒಂದು ತಿಂಗಳಿನಿಂದ ಜಿಲ್ಲೆಯ ಆಸ್ಪತ್ರೆಗಳಲ್ಲಿ ಒಂದು ವರ್ಷದೊಳಗಿನ 40ರಿಂದ 50 ಮಕ್ಕಳು ಶ್ವಾಸಕೋಶದ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರ್‌ಎಸ್‌ವಿ ಸಂಬಂಧಿಸಿದ ಸೋಂಕು ಮಕ್ಕಳನ್ನು ಕಾಡುತ್ತಿದೆ. ಮಕ್ಕಳಲ್ಲಿ ಜ್ವರ, ಕೆಮ್ಮು, ಶೀತ, ನೆಗಡಿಯ ರೂಪದಲ್ಲಿ ಇದು ಕಂಡು ಬರುತ್ತದೆ. ಆರ್‌ಎಸ್‌ವಿ ಈ ಸಮಯದಲ್ಲಿ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕಾಯಿಲೆ ಉಲ್ಬಣಿಸಿದರೆ ವೈರಲ್ ನ್ಯುಮೋನಿಯಾಗೆ ತಿರುಗಲಿದೆ. ಪ್ರಸ್ತುತ ತಪಾಸಣೆಗೆ ಬರುವ 10 ಮಕ್ಕಳಲ್ಲಿ 8 ಮಕ್ಕಳು ಆರ್‌ಎಸ್‌ವಿ ಸೋಂಕಿಗೆ ತುತ್ತಾಗುತ್ತಿದ್ದಾರೆ.
Related Articles
Advertisement
ಆರ್‌ಎಸ್‌ವಿ ಸಂಬಂಧಿತ ಬಹುತೇಕ ಮಕ್ಕಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಆರ್‌ಟಿಪಿಸಿಆರ್ ವರದಿ ನೆಗೆಟಿವ್ ಬಂದಿದೆ. ಆದರೂ ಇದನ್ನು ನಿರ್ಲಕ್ಷಿಸುವುದು ಸರಿಯಲ್ಲ. ಆರ್‌ಎಸ್‌ವಿ ನಲ್ಲಿ ಉಸಿರಾಟ ಸಮಸ್ಯೆ ಹೆಚ್ಚಾದರೆ ಮಕ್ಕಳ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಹೆತ್ತ ವ ರು ಸಾಕಷ್ಟು ಜಾಗರೂಕರಾಗಿಬೇಕು. ಆರ್‌ಎಸ್‌ವಿ ಲಕ್ಷಣಗಳಿರುವ ಮಗುವಿಗೆ ತತ್‌ಕ್ಷಣ ಚಿಕಿತ್ಸೆ ನೀಡಲು ಮುಂದಾಗಬೇಕು ಎಂದು ಮಕ್ಕಳ ತಜ್ಞೆ ಡಾ| ಶ್ವೇತಾ ಶಾನುಭಾಗ್ ತಿಳಿಸಿದ್ದಾರೆ.
ಏನಿದು ಆರ್‌ಎಸ್‌ವಿ? : ಒಂದು ವರ್ಷ ಪ್ರಾಯದ ಮಕ್ಕಳಿಗೆ ಹೆಚ್ಚಾಗಿ ಬಾಧಿಸುವ Respiratory Syncytial Virus (ಆರ್‌ಎಸ್‌ವಿ) ಸೋಂಕು. ಇದು ಉಸಿರಾಟದ ತೊಂದರೆಯಂತಹ ಲಕ್ಷಣಗಳನ್ನು ಹೊಂದಿದೆ. ಶ್ವಾಸಕೋಶದಲ್ಲಿ ಸಣ್ಣ ಶ್ವಾಸನಾಳದ ಉರಿಯೂತ ಹಾಗೂ ಮಕ್ಕಳಲ್ಲಿ ನ್ಯುಮೋನಿಯಾಕ್ಕೆ ಕಾರಣವಾಗುತ್ತದೆ. ಈ ಸೋಂಕಿನಿಂದ ಕಫ, ಶೀತ, ನೆಗಡಿ ಮಕ್ಕಳನ್ನು ಕಾಡುತ್ತದೆ. ಆಕ್ಸಿಜನ್ ಸಮಸ್ಯೆ ಉಂಟಾದರೆ ಮಕ್ಕಳ ಜೀವ ಹಾನಿ ಕೂಡ ಆಗಬಹುದು.
ಹೇಗೆ ಹರಡುತ್ತದೆ? : ಸೋಂಕಿತ ಮಗುವಿನ ಉಸಿರಾಟದ ಹನಿಗಳು ಗಾಳಿಯ ಮೂಲಕ ಸುಲಭವಾಗಿ ಹರಡಲು ಸಾಧ್ಯವಾಗುತ್ತದೆ. ಸೋಂಕಿತ ವ್ಯಕ್ತಿಯ ಕೈಗಳನ್ನು ಮುಟ್ಟು ವ ಸಮಯ ನೇರ ಸಂಪರ್ಕದ ಮೂಲಕ ವೈರಸ್ ಇತರರಿಗೆ ಹರಡುತ್ತದೆ.
ಆರ್‌ಎಸ್‌ವಿ ಋತುಮಾನದ ಕಾಯಿಲೆಯಾಗಿದೆ. ಮಳೆಗಾಲ ಹಾಗೂ ಚಳಿಗಾಲದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಜಿಲ್ಲೆಯಲ್ಲಿ ಈ ಬಾರಿ ಆರ್‌ಎಸ್‌ವಿಗೆ ತುತ್ತಾಗುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಲಕ್ಷಣ ಇರುವ ಮಕ್ಕಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ, ಉತ್ತಮ ಆಹಾರ, ಹಾರೈಕೆ ಅಗತ್ಯ.–ಡಾ| ಶ್ರೀಕಿರಣ್ ಹೆಬ್ಟಾರ್, ಮಕ್ಕಳ ತಜ್ಞ ವೈದ್ಯರು, ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ