Advertisement

ಜನರಲ್ಲಿ ಹೆಚ್ಚಾದ ಆರೋಗ್ಯ ಜಾಗೃತಿ; ಕಷಾಯಕ್ಕೆ ಬೆಲೆ ತಂದು ಕೊಟ್ಟ ಕೋವಿಡ್!

09:48 PM Aug 27, 2020 | mahesh |

ಉಡುಪಿ: ಅಮೃತಬಳ್ಳಿ, ಮಜ್ಜಿಗೆ ಸೊಪ್ಪು, ನೆಲನೆಲ್ಲಿ, ಬಿಲ್ವಪತ್ರೆ, ಪೇರಳೆ ಎಲೆ, ಪಪ್ಪಾಯಿ ಎಲೆ, ತುಳಸಿ, ಸಾಂಬಾರಬಳ್ಳಿ, ಕಹಿಬೇವಿನ ಎಲೆ, ಪಾರಿಜಾತದ ಎಲೆ, ಸದಾಪುಷ್ಪದ ಎಲೆ- ಕಾಂಡ, ಕೊತ್ತಂಬರಿ, ಜೀರಿಗೆ, ಕಾಳುಮೆಣಸು, ಕಾಳು ಜೀರಿಗೆ, ಚಕ್ಕೆ, ಲವಂಗ, ಏಲಕ್ಕಿ, ಅರಿಶಿನ, ಉಪ್ಪು, ಬೆಲ್ಲ, ನೀರುಳ್ಳಿ, ಶುಂಠಿ, ಓಮ ಹೀಗೆ ಹತ್ತಾರು ಬಗೆಗಳನ್ನು ಹಾಕಿ ಮೂರ್‍ನಾಲ್ಕು ವರ್ಷಗಳಿಂದ ಕಷಾಯ ಮಾಡುತ್ತಿದ್ದರೂ ಆಗ ಬೇಡಿಕೆ ಇಲ್ಲದಿದ್ದ ಕಷಾಯಕ್ಕೆ ಈಗ ಕೊರೊನಾ ಕಾಲದಲ್ಲಿ ಬೇಡಿಕೆ ಬಂದಿದೆ…

Advertisement

ಉಡುಪಿ ಸಿಟಿ ಬಸ್‌ ನಿಲ್ದಾಣದ ಸಮೀಪದ ಸದಾನಂದ ಟವರ್‌ನಲ್ಲಿರುವ ಅಮೃತ್‌ ರಿಫ್ರೆಶ್‌ಮೆಂಟ್‌ನಲ್ಲಿ ಪ್ರತಿ ಬುಧವಾರ ಇಂತಹ ಔಷಧೀಯ ಸಾಮಗ್ರಿಗಳನ್ನು ಕಲೆ ಹಾಕಿ ಕಷಾಯ ತಯಾರಿಸುತ್ತಾರೆ. ಸುಮಾರು ಮುಕ್ಕಾಲು ಗಂಟೆ ಕಾಲ ಇವುಗಳನ್ನು ಕುದಿಸಲಾಗುತ್ತದೆ. 50-70 ಜನರು ಇದನ್ನು ಸೇವಿಸುತ್ತಿದ್ದಾರೆ. ಕೋವಿಡ್ ಬಂದ ಬಳಿಕ ಜನರಲ್ಲಿ ಜಾಗೃತಿ ಉಂಟಾಗಿ ಶೇ. 25ರಷ್ಟು ಬೇಡಿಕೆ ಹೆಚ್ಚಾಗಿದೆ.

ರಿಫ್ರೆಶ್‌ಮೆಂಟ್‌ ಮಾಲಕ ರಮಾನಂದರಿಗೆ ತಾಯಿ ಗುಲಾಬಿಯವರು ಕಷಾಯವನ್ನು ಮಾಡುವ ಕ್ರಮ ಹೇಳಿಕೊಟ್ಟಿದ್ದರು. ಈಗ ಅವರ ಪುತ್ರ ಇದನ್ನು ಮುಂದುವರಿಸುತ್ತಿದ್ದಾರೆ. ಇಷ್ಟು ಸಾಮಗ್ರಿಗಳನ್ನು ಕಲೆ ಹಾಕುವುದೂ ಕಷ್ಟದ ಕೆಲಸ. ತಮ್ಮ ಚರಣ್‌, ಸ್ನೇಹಿತ ಗೋಪಾಲ್‌ ಅವರು ಸೊಪ್ಪುಗಳನ್ನು ತಂದು ಕೊಡುತ್ತಿದ್ದಾರೆ. ನಮ್ಮ ಮಾವ, ತಂಗಿ ಮನೆ ಆವರಣದಿಂದಲೂ ತರುತ್ತೇವೆ ಎನ್ನುತ್ತಾರೆ ರಮಾನಂದರು.

ಇಂತಹ ಗಿಡಮೂಲಿಕೆಗಳನ್ನು ಮನೆ ಆವರಣದಲ್ಲಿಯೂ ಬೆಳೆಸಿ ಕಷಾಯ ತಯಾರಿಸಲು ಸಾಧ್ಯವಿದೆ. ಇವುಗಳಲ್ಲಿ ಬಹುತೇಕ ಗಿಡಮೂಲಿಕೆಗಳನ್ನು ಜನರು ಆಹಾರ ಪದಾರ್ಥಗಳ ಮೂಲಕ ಸೇವನೆ ಮಾಡುತ್ತಿದ್ದರು. ಈಗ ಇವುಗಳನ್ನು ಮತ್ತೆ ಚಾಲ್ತಿಗೆ ತರಲು ಕಾಲವೂ ಕೂಡಿ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next