Advertisement
ನಗರದ ಕ್ಲಿನಿಕ್, ಆಸ್ಪತ್ರೆ ಹಾಗೂ ಲ್ಯಾಬ್ ಗಳ ಎದುರು ಕ್ಯೂ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಆರೋಗ್ಯ ಇಲಾಖೆ ಈ ಜ್ವರದ ವಿದ್ಯಮಾನವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು, ಜ್ವರದ ಪ್ರಕರಣಗಳು ಮಳೆ ನಿಂತು ಏಕಾಏಕಿ ಬೇಸಿಗೆ ಸೆಖೆ ನಿರ್ಮಾಣವಾಗಿರುವುದು, ವಿವಿಧೆಡೆ ನೀರು ನಿಂತ ಪರಿಣಾಮ ಸೊಳ್ಳೆ, ವೈರಸ್ ಗಳ ಸೃಷ್ಟಿಯಾಗಿರುವುದು ಕಾರಣ ಎಂದು ಅಂದಾಜಿಸಿದೆ.
Related Articles
ಕಂಡುಬಂದರೆ ತಕ್ಷಣ ಕೂಲಂಕಶ ತನಿಖೆ ನಡೆಸಲಾಗುತ್ತಿದೆ. ಜ್ವರ ನಿಯಂತ್ರಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಜನರಿಗೆ ನಿರಂತರವಾಗಿ ತಿಳುವಳಿಕೆ ನೀಡುವ ಕೆಲಸವೂ ನಡೆಯುತ್ತಿದೆ ಎಂದರು.
Advertisement
ತಾಪಂನಲ್ಲೇ ನಿಲ್ಲುವ ನೀರು!: ಮಾರಣಾಂತಿಕ ಡೆಂಘೀ, ಎಚ್1ಎನ್1 ಅಪಾಯ ಎದುರಾಗುವುದರಿಂದ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂಬ ಸಲಹೆಯನ್ನು ಆರೋಗ್ಯ ಇಲಾಖೆ ನೀಡುತ್ತದೆಯಾದರೂ ತಾಲೂಕು ಆಡಳಿತವನ್ನು ನೋಡಿಕೊಳ್ಳುವ ತಾಪಂ ಸಾಮರ್ಥ್ಯ ಸೌಧದ ಸಭಾಂಗಣದ ಛಾವಣಿಯ ಮೇಲೆ ಸದಾ ನೀರು ನಿಲ್ಲುತ್ತದೆ.
ತಾಪಂ ಆವರಣದಲ್ಲಿರುವ ಇನ್ನೊಂದು ಕಟ್ಟಡದ ಮೇಲೆ ಕೂಡ ನೀರು ನಿಲ್ಲುವ ದೃಶ್ಯವನ್ನು ಕಾಣಬಹುದು. ಜನರಿಗೆ ಜಾಗೃತಿ ಮೂಡಿಸುವ ಸರ್ಕಾರಿ ಅಧಿಕಾರಿಗಳು ಸರ್ಕಾರಿ ಕಟ್ಟಡಗಳನ್ನು ಕೂಡ ಸೊಳ್ಳೆಗಳಾಗದಂತೆ ನೋಡಿಕೊಳ್ಳಬೇಕಲ್ಲವೇಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.