Advertisement
ಪಿಲೇಕೆಮ್ಮ ನಗರದ 11ನೇ ವಾರ್ಡ್‌ನಲ್ಲಿ ಸ್ವತ್ಛತೆ ಮರೀಚಿಕೆಯಂತಾಗಿದೆ. ಕೊಳಚೆ ಪ್ರದೇಶವಾಗಿರುವುದರಿಂದ ಸಹಜವಾಗಿ ಜನರಲ್ಲಿ ಆರೋಗ್ಯ ಮತ್ತು ಪರಿಸರ ರಕ್ಷಣೆಯ ಪ್ರಜ್ಞೆಯ ಕೊರತೆ ಇದೆ. ಮನೆಯ ಮುಂದೆ ತೆರೆದ ಬ್ಯಾರಲ್ ಮುಂತಾದವುಗಳಲ್ಲಿ ನೀರು ಸಂಗ್ರಹಿಸಬಾರದು ಎಂದು ಸಾಕಷ್ಟು ಬಾರಿ ತಿಳಿವಳಿಕೆ ನೀಡಿದ್ದರೂ ನೀರಿನ ಸಂಗ್ರಹ ಪರಿಣಾಮ ಲಾರ್ವಾಗಳ ಸಂತತಿ ಬೆಳೆಯಲು ಆಸ್ಪದ ನೀಡಿದಂತಾಗಿದೆ.
Related Articles
Advertisement
4.5 ಲೀಟರ್ ಡೀಸೆಲ್‌ಗೆ 250 ಎಂಎಲ್ ಪೆರಿಥ್ರಿಮ್ ಕೀಟನಾಶಕ ದ್ರಾವಣ ಸೇರಿಸಿ ಕ್ರಮವಾಗಿ 1, 4, 7 ಮತ್ತು 10ನೇ ದಿನದಂದು ಬೆಳಗ್ಗೆ, ಸಂಜೆ ಫಾಗಿಂಗ್ ಮಾಡಬೇಕು. ಈಡಿಸ್ ಲಾರ್ವಾ ಕಂಡು ಬಂದಿರುವ ಏರಿಯಾಗಳ ಜನರಿಗೆ ಸಾಂಕ್ರಾಮಿಕ ರೋಗ ಕುರಿತ ಜಾಗೃತಿ ಮೂಡಿಸಿದ್ದು ಸ್ವಚ್ಛತೆ ಕಾಪಾಡಲು ವ್ಯಾಪ್ರಕ ಪ್ರಚಾರ ನಡೆಸುವಂತೆ ತಿಳಿಸಲಾಗಿದೆ.
ಪಿಲೇಕೆಮ್ಮ ನಗರ, ಮಹೆಬೂಬ ನಗರ, ಮಹಾಂತೇಶ ನಗರ, ಶಾರದಾ ಶಾಲೆಯ ಹಿಂಭಾಗ ಸೇರಿ ಕೆಲ ಬಡಾವಣೆಗಳಲ್ಲಿ ಡೆಂಘೀ, ಚಿಕೂನ್ ಗುನ್ಯಾ ಪ್ರಕರಣಗಳು ಖಚಿತಗೊಂಡಿವೆ. ಆರೋಗ್ಯ ಇಲಾಖೆ ಸಿಬ್ಬಂದಿ ಲಾರ್ವಾ, ಜ್ವರ ಸಮೀಕ್ಷೆ ನಡೆಸಿ ಸ್ವಯಂ ರಕ್ಷಣಾ ಕ್ರಮ ಅನುಸರಿಸಲು ಮಾಹಿತಿ ನೀಡಿದ್ದಾರೆ. ಪುರಸಭೆಯವರು ಇಂಥ ಬಡಾವಣೆಗಳಲ್ಲಿ ಕೀಟನಾಶಕ ಸಿಂಪರಣೆ, ಫಾಗಿಂಗ್ ಸೇರಿ ಹಲವು ಕ್ರಮ ಕೈಗೊಳ್ಳುವುದರ ಜೊತೆಗೆ ಸ್ವಚ್ಛತೆ ಕುರಿತು ಕಸ ವಿಲೇವಾರಿವಾಹನಗಳಲ್ಲಿರುವ ಮೈಕ್ ಮೂಲಕ ಪ್ರಚಾರ ಮಾಡುವಂತೆ ತಾಲೂಕು ಆರೋಗ್ಯಾಧಿಕಾರಿಯವರೂ ಪುರಸಭೆಗೆ ಸೂಚನೆ ನೀಡಿದ್ದಾರೆ. ಪಟ್ಟಣದ ಕೆಲವು ಬಡಾವಣೆಗಳಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿರುವುದು ಗಮನಕ್ಕೆ ಬಂದ ಕೂಡಲೇ ಪುರಸಭೆಯಲ್ಲಿರುವ ಆರೋಗ್ಯ ವಿಭಾಗದ ಸಿಬ್ಬಂದಿಯನ್ನು ಎಚ್ಚರಿಸಿ ಕಾರ್ಯೋನ್ಮುಖರಾಗುವಂತೆ ಮಾಡಲಾಗಿದೆ. ಬೇಜವಾಬ್ದಾರಿ ಸಿಬ್ಬಂದಿಗೆ ಈಗಾಗಲೇ ಬಿಸಿ ಮುಟ್ಟಿಸಲಾಗಿದೆ. ಸಾರ್ವಜನಿಕರು ಕೂಡಾ ಸ್ವಯಂ ರಕ್ಷಣಾ ಕ್ರಮಗಳನ್ನು ಪಾಲಿಸಿ ಸುತ್ತಲಿನ ಪರಿಸರ ಸ್ವಚ್ಛವಾಗಿಸಿಕೊಳ್ಳಲು ಹೆಚ್ಚಿನ ಆದ್ಯತೆ ನೀಡಬೇಕು.
ಬಿ.ಎಸ್. ಕಡಕಭಾವಿ, ತಹಶೀಲ್ದಾರ ರೋಗ ಸಮೀಕ್ಷೆ, ನಿಯಂತ್ರಣ, ಮುಂಜಾಗ್ರತಾ ಕ್ರಮಗಳ ಕುರಿತು ನಮ್ಮ ಕೆಲಸವನ್ನು ನಾವು ಮಾಡಿದ್ದೇವೆ. ಪುರಸಭೆಯ ಆರೋಗ್ಯ ವಿಭಾಗದ ಸಿಬ್ಬಂದಿ ಹೆಚ್ಚು ಮುತುವರ್ಜಿ ವಹಿಸಿ ಫಾಗಿಂಗ್ ಸೇರಿದಂತೆ ಅಗತ್ಯ ಸ್ವಚ್ಛತಾ ಕ್ರಮಗಳನ್ನು ಪಾಲಿಸಬೇಕು. ಜನರಲ್ಲೂ ತಮ್ಮ ಸುತ್ತಲಿನ ಪರಿಸರದಲ್ಲಿ ಸ್ವತ್ಛತೆ ಕಾಪಾಡುಕೊಳ್ಳುವ ಆರೋಗ್ಯ ಪ್ರಜ್ಞೆ ಮೂಡಬೇಕು. ಸಧ್ಯ ಯಾವುದೇ ಸಾಂಕ್ರಾಮಿಕ ರೋಗದ ಆತಂಕ ಇಲ್ಲ. ಡಿಸೆಂಬರ್ ಅಂತ್ಯದವರೆಗೂ ಎಲ್ಲರೂ ಜಾಗೃತರಾಗಿರಬೇಕು.
ಡಾ| ಸತೀಶ ತಿವಾರಿ,
ತಾಲೂಕು ಆರೋಗ್ಯಾಧಿಕಾರಿ ಜನರಿಗೆ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ಕಾಯಿಲೆಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ತಾಲೂಕು ಆರೋಗ್ಯಾಧಿಕಾರಿ, ವೈದ್ಯಾಧಿಕಾರಿ, ಪುರಸಭೆಯ ಆರೋಗ್ಯ ವಿಭಾಗದವರು ಶಂಕಿತ ಬಡಾವಣೆಗಳಿಗೆ ಭೇಟಿ ನೀಡಿ ಮುಂಜಾಗರೂಕತಾ ಕ್ರಮ ಕೈಗೊಳ್ಳಲಾಗಿದೆ. ಡೆಂಘೀ, ಚಿಕೂನ್‌ಗುನ್ಯಾ, ಮಲೇರಿಯಾ, ಆನೆಕಾಲು ರೋಗ ಇವು ಸೊಳ್ಳೆಗಳಿಂದ ಬರುವಂತಹ ರೋಗಗಳಾಗಿದ್ದು ಸಾರ್ವಜನಿಕರು ಜಾಗೃತರಾಗಿರಬೇಕು.
ಎಂ.ಎಸ್. ಗೌಡರ,
ಆರೋಗ್ಯ ನಿರೀಕ್ಷಣಾಧಿಕಾರಿ ಡಿ.ಬಿ. ವಡವಡಗಿ