Advertisement

ಸೌಕೂರು –ಬೊಳ್ಕಟ್ಟೆ ರಸ್ತೆ ಅಭಿವೃದ್ಧಿಗೆ ಹೆಚ್ಚಿದ ಬೇಡಿಕೆ

12:15 AM Nov 15, 2019 | Sriram |

ವಿಶೇಷ ವರದಿ-ಕಂಡ್ಲೂರು: ಸೌಕೂರಿನಿಂದ ಗುಲ್ವಾಡಿ, ಮಾವಿನಕಟ್ಟೆಗೆ ಸಂಪರ್ಕ ಕಲ್ಪಿಸುವ ಹತ್ತಿರದ ಸೌಕೂರು – ಬೊಳ್ಕಟ್ಟೆ ರಸ್ತೆ ನಿರ್ಮಾಣಗೊಂಡು 25 ವರ್ಷವಾದರೂ, ಇನ್ನೂ ಸಂಪೂರ್ಣ ಡಾಮರೀಕರಣ ಮುಗಿದಿಲ್ಲ. ಅರ್ಧದವರೆಗೆ ಡಾಮರೀಕರಣ ಕಾಮಗಾರಿ ಆಗಿದ್ದರೆ, ಇನ್ನುಳಿದ ಭಾಗದಲ್ಲಿ ಕೇವಲ ಜಲ್ಲಿ ಕಲ್ಲು ಹಾಕಿ ಬಿಡಲಾಗಿದೆ. ಈ ಮಾರ್ಗವಾಗಿ ಸಂಚರಿಸುವ ನೂರಾರು ಮಂದಿ ಕಷ್ಟ ಪಟ್ಟು ಸಂಚರಿಸುವಂತಾಗಿದೆ.

Advertisement

ಸೌಕೂರಿನಿಂದ ಚಿಕ್ಕಪೇಟೆ, ಕುಚ್ಚಟ್ಟಿ, ಬೊಳ್ಕಟ್ಟೆಯಾಗಿ ಗುಲ್ವಾಡಿ, ಮಾವಿನಕಟ್ಟೆಗೆ ಸಂಚರಿಸುವ ಮಾರ್ಗ ಇದಾಗಿದೆ. ಚಿಕ್ಕಪೇಟೆ, ಕುಚ್ಚಟ್ಟಿ, ಬೊಳ್ಕಟ್ಟೆ ಭಾಗದಲ್ಲಿ ಸುಮಾರು 300 ಕ್ಕೂ ಮಿಕ್ಕಿ ಮನೆಗಳಿದ್ದು, ಅವರೆಲ್ಲ ಕಂಡೂÉರು ಪೇಟೆ ಅಥವಾ ಗುಲ್ವಾಡಿ, ಮಾವಿನಕಟ್ಟೆಗೆ ತೆರಳಲು ಇದೇ ಮಾರ್ಗವನ್ನು ಆಶ್ರಯಿಸಿದ್ದಾರೆ.

ಬಸ್‌ ಸಂಚಾರವೇ ಸ್ಥಗಿತ
ಈ ಮಾರ್ಗದಲ್ಲಿ ಕಂಡ್ಲೂರಿನಿಂದ ಸೌಕೂರು ದೇವಸ್ಥಾನದ ಮೂಲಕವಾಗಿ ಗುಲ್ವಾಡಿಗೆ 2 ಸರಕಾರಿ ಬಸ್‌ ಹಾಗೂ 1 ಖಾಸಗಿ ಬಸ್‌ ಪ್ರತಿ ನಿತ್ಯ ಸಂಚರಿಸುತ್ತಿತ್ತು. ಆದರೆ ಅದು ಸ್ಥಗಿತಗೊಂಡು 3 ವರ್ಷಗಳಾಗಿವೆ. ಇದಕ್ಕೆ ಕಾರಣ ಹದಗೆಟ್ಟ ರಸ್ತೆ.

ವಿದ್ಯಾರ್ಥಿಗಳಿಗೆ ಸಂಕಷ್ಟ
ಬಸ್‌ ಸಂಚಾರ ಸ್ಥಗಿತಗೊಳಿಸಿರುವುದರಿಂದ ನಿಜವಾಗಿಯೂ ಸಮಸ್ಯೆಯಾಗುತ್ತಿರುವುದು ಶಾಲಾ – ಕಾಲೇಜಿಗೆ ಹೋಗುವ ಮಕ್ಕಳಿಗೆ. ಈ ಭಾಗದಿಂದ ಹತ್ತಾರು ಮಕ್ಕಳು ಬಸೂÅರು ಕಾಲೇಜು, ಕುಂದಾಪುರ ಕಾಲೇಜು, ಮಾವಿನಕಟ್ಟೆ ಪ್ರೌಢಶಾಲೆ, ಕಂಡ್ಲೂರಿನ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಾರೆ. ಇಲ್ಲಿನ ಮಕ್ಕಳು ಮಾವಿನಕಟ್ಟೆಗೆ 4 ಕಿ.ಮೀ. ನಡೆದುಕೊಂಡು ತೆರಳಿದರೆ, ಕುಂದಾಪುರ, ಬಸೂÅರಿಗೆ ಹೋಗುವ ಮಕ್ಕಳು ಕಂಡ್ಲೂರಿಗೆ 3 ಕಿ.ಮೀ. ವರೆಗೆ ನಡೆದುಕೊಂಡು ಹೋಗಿ, ಅಲ್ಲಿಂದ ಬಸ್‌ನಲ್ಲಿ ಸಂಚರಿಸುತ್ತಿದ್ದಾರೆ.

ಹಲವು ವರ್ಷಗಳಿಂದ ಈ ಜಲ್ಲಿ ಹಾಕಿದ ರಸ್ತೆಯಲ್ಲಿ ವಾಹನದಲ್ಲಿ ಸಂಚರಿಸುವುದೇ ಕಷ್ಟವಾಗುತ್ತಿದೆ. ನಮಗೆ ಪೇಟೆಗೆ ಹೋಗಬೇಕಾದರೆ ಕಂಡ್ಲೂರಿಗೆ ಹೋಗಬೇಕು ಅಥವಾ ಮಾವಿನಕಟ್ಟೆಗೆ ಆದರೆ ಹೋಗಲು ಸರಿಯಾದ ರಸ್ತೆಯಿಲ್ಲ. ಈ ರಸ್ತೆಗೆ ಡಾಮರು ಆಗುತ್ತದೆ ಎಂದು ಕಾಯುವುದೇ ಬಂತು. ಇನ್ನೂ ಆಗುವ ಲಕ್ಷಣ ಮಾತ್ರ ಕಾಣುತ್ತಿಲ್ಲ ಎನ್ನುವುದು ಬೊಳ್ಕಟ್ಟೆಯ ಸಾಧು ಅವರ ಅಳಲು.

Advertisement

ಶೀಘ್ರ ಡಾಮರೀಕರಣವಾಗಲಿ
ರಸ್ತೆ ನಿರ್ಮಾಣವಾಗಿ ಸರಿ ಸುಮಾರು 25 ವರ್ಷಗಳಾಗಿವೆ. ಈ ರಸ್ತೆ ಕಾವ್ರಾಡಿ ಹಾಗೂ ಗುಲ್ವಾಡಿ ಎರಡೂ ಗ್ರಾ.ಪಂ. ಗಳ ಮಧ್ಯೆ ಹಾದುಹೋಗುತ್ತಿದ್ದು, ಸೌಕೂರು ಸೇತುವೆಯಿಂದ ಈಚೆ ಗುಲ್ವಾಡಿ ಪಂಚಾಯತ್‌ಗೆ ಸಂಬಂಧಿಸಿದೆ. ಆದರೆ ಕಂಡ್ಲೂರಿಗೆ ತೆರಳುವ ಆರಂಭದ ರಸ್ತೆ ಹಾಗೂ ಸೇತುವೆಯಿಂದ ಈಚೆ ಭಾಗದಲ್ಲಿ ಡಾಮರೀಕರಣ ಹಾಕಿದ್ದು ಕೂಡ ಕಿತ್ತು ಹೋಗಿದೆ. ಇನ್ನೂ 2 ಕಿ.ಮೀ. ವರೆಗೆ ಇನ್ನೂ ಡಾಮರೀಕರಣವೇ ಆಗಿಲ್ಲ. ಶಾಸಕರು, ಸಂಸದರು ಇದೇ ರಸ್ತೆಯಲ್ಲಿ ಓಡಾಟ ಮಾಡುತ್ತಾರೆ. ಆದರೂ ಪ್ರಯೋಜನವಾಗಿಲ್ಲ. ಈ ವರ್ಷವಾದರೂ ಡಾಮರೀಕರಣ ಆಗಲಿ.
– ಸಂಜೀವ ಶೇರೆಗಾರ್‌,
ಚಿಕ್ಕಪೇಟೆ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next