Advertisement

ಹೆಚ್ಚಿದ ಸೈಬರ್‌ ದಾಳಿ ಹಾವಳಿ

01:38 AM May 24, 2020 | Sriram |

ಕೋವಿಡ್-19 ವೈರಸ್‌ ಬಿಕ್ಕಟ್ಟು, ಲಾಕ್‌ ಡೌನ್‌ ಗಳು ಆರಂಭವಾದ ಬಳಿಕ ಜಗತ್ತಿನಾದ್ಯಂತ ಸೈಬರ್‌ ದಾಳಿಕೋರರ ಹಾವಳಿಯೂ ಹೆಚ್ಚಾಗಿದೆ. ಪ್ರಸ್ತುತ ಬಿಕ್ಕಟ್ಟಿನ ಸಂದರ್ಭದಲ್ಲಿ ಸೈಬರ್‌ ಅಪರಾಧಗಳ ಪ್ರಮಾಣ ಶೇ.600ರಷ್ಟು ಹೆಚ್ಚಳವಾಗಿದ್ದು, ಈ ಕುರಿತು ಎಚ್ಚರಿಕೆ ವಹಿಸುವಂತೆ ವಿಶ್ವಸಂಸ್ಥೆಯೇ ಸೂಚಿಸಿದೆ. ಅಷ್ಟೇ ಅಲ್ಲ, ಹಲವೆಡೆ ಆರೋಗ್ಯಸೇವಾ ಸಂಸ್ಥೆಗಳು ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರಗಳ ಮೇಲೆಯೂ ಸೈಬರ್‌ ದಾಳಿಗಳು ನಡೆದಿರುವ ವಿಚಾರ ಬೆಳಕಿಗೆ ಬಂದಿರುವುದಾಗಿಯೂ ವಿಶ್ವಸಂಸ್ಥೆ ಹೇಳಿದೆ. ಭಾರತದಲ್ಲಿ ಅತಿ ಹೆಚ್ಚು ಸೈಬರ್‌ ದಾಳಿಗೊಳಗಾದ ರಾಜ್ಯ- ಕೇರಳ.

Advertisement

ಭಾರತೀಯರ ಮಾಹಿತಿ ಸೋರಿಕೆ
ಉದ್ಯೋಗಕ್ಕೆಂದು ಅರ್ಜಿ ಸಲ್ಲಿಸಿದ್ದ 2.9 ಕೋಟಿ ಭಾರತೀಯರ ವೈಯಕ್ತಿಕ ಮಾಹಿತಿಗಳನ್ನು ಒಳಗೊಂಡ ದತ್ತಾಂಶಗಳನ್ನು ಸೋರಿಕೆ ಮಾಡಲಾಗಿದೆ ಎಂಬ ವಿಚಾರವನ್ನು ಶನಿವಾರ ಆನ್‌ ಲೈನ್‌ ಗುಪ್ತಚರ ಸಂಸ್ಥೆ ಬಹಿರಂಗಪಡಿಸಿದೆ. ಉದ್ಯೋಗಾಕಾಂಕ್ಷಿಗಳ ಇಮೇಲ್‌, ದೂರವಾಣಿ ಸಂಖ್ಯೆ, ಮನೆಯ ವಿಳಾಸ, ಶೈಕ್ಷಣಿಕ ಅರ್ಹತೆ, ಕೆಲಸದ ಅನುಭವ ಸೇರಿದಂತೆ ಎಲ್ಲ ಮಾಹಿತಿಗಳನ್ನೂ ಡಾರ್ಕ್‌ ವೆಬ್‌ ನಲ್ಲಿ ಉಚಿತವಾಗಿ ಸೋರಿಕೆ ಮಾಡಲಾಗಿದೆ. ಇದೇ ವೇಳೆ, ಪಿಎಂ ಕೇರ್‌ ನಿಧಿಗೆ ದೇಣಿಗೆ ಹೆಸರಲ್ಲಿ ಹಾಗೂ ಕೋವಿಡ್-19 ಮಾಹಿತಿಯ ಹೆಸರಲ್ಲಿ ಲಿಂಕ್‌ ಕಳಿಸಿ, ಆ ಲಿಂಕ್‌ ತೆರೆದವರ ಕ್ರೆಡಿಟ್‌ ಕಾರ್ಡ್‌, ಬ್ಯಾಂಕಿಂಗ್‌ ಮಾಹಿತಿ ಕದ್ದಿರುವ ಘಟನೆಗಳೂ ಇತ್ತೀಚೆಗೆ ವರದಿಯಾಗಿವೆ.

 

Advertisement

Udayavani is now on Telegram. Click here to join our channel and stay updated with the latest news.

Next