Advertisement
ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಉಪಾಧ್ಯಕ್ಷ ಶಿವಾನಂದ ಉದಪುಡಿ, ಕೆಪಿಸಿಸಿ ಕಾರ್ಯದರ್ಶಿ ಬಸವಪ್ರಭು ಸರನಾಡಗೌಡ, ಜಿಪಂ ಸದಸ್ಯರಾದ ಬಾಯಕ್ಕ ಮೇಟಿ, ಬಸವರಾಜ ಖೋತ, ಹೈಕೋರ್ಟ್ ವಕೀಲ ಎಚ್.ಬಿ. ನೀರಲಕೇರಿ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಶಿವಾನಂದ ನಿಂಗನೂರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಸೌದಾಗರ, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ರಕ್ಷಿತಾ ಈಟಿ ಸೇರಿದಂತೆ ಡಜನ್ ಆಕಾಂಕ್ಷಿಗಳು, ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ.
ಉದಪುಡಿ ಪರ ಸಿದ್ದು-ಮೇಟಿ ಬ್ಯಾಟಿಂಗ್: ಶಿವಾನಂದ ಉದಪುಡಿ ಪರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಎಚ್.ವೈ. ಮೇಟಿ ಬ್ಯಾಟಿಂಗ್ ಶುರು ಮಾಡಿದ್ದಾರೆ ಎನ್ನಲಾಗಿದೆ. 2015ರಲ್ಲಿ ನಡೆದ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲುವು ಸಾಧಿಸಿ, ಬಳಿಕ ಕಾಂಗ್ರೆಸ್‌ಗೆ ಬೆಂಬಲ ನೀಡಿ, ಉಪಾಧ್ಯಕ್ಷರೂ ಆಗಿರುವ ಶಿವಾನಂದ ಉದಪುಡಿಗೆ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ದೊರೆಯಲಿದೆ ಎಂಬ ಮಾತು ದಟ್ಟವಾಗಿದೆ. ಆದರೆ, ಬಿಜೆಪಿಯ ಅಭ್ಯರ್ಥಿಗೆ ಪ್ರಬಲ ಪೈಪೋಟಿ ನೀಡಲು, ಆ ಪಕ್ಷದ ಅಭ್ಯರ್ಥಿಯ ಸಮಾಜಕ್ಕೇ ಸೇರಿದ ನಾಯಕರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟರೆ ಸೂಕ್ತ ಎಂಬ ಅಭಿಪ್ರಾಯ ಕೆಲವರು ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
Related Articles
Advertisement
ಇನ್ನೊಂದೆಡೆ ಬಿಜೆಪಿ ವಶದಿಂದ ಕ್ಷೇತ್ರ ಹೋಗಬಾರದು. ಬಾದಾಮಿಯಲ್ಲಿ ಸಿದ್ದರಾಮಯ್ಯ ಶಾಸಕರಾಗಿರುವ ಕಾರಣ, ಅವರು ಲಾಭ ಪಡೆಯಬಾರದು, ಕುರುಬ ಮತಗಳನ್ನೂ ಸೆಳೆಯಲು ವ್ಯವಸ್ಥಿತ ಸಂಘಟನೆ ಮಾಡಿಕೊಳ್ಳಿ ಎಂದು ನಿರ್ದೇಶನ ನೀಡಿ, ಕೆ.ಎಸ್. ಈಶ್ವರಪ್ಪ ಅವರಿಗೆ ಬಾಗಲಕೋಟೆ ಕ್ಷೇತ್ರದ ಉಸ್ತುವಾರಿಯನ್ನು ಬಿಜೆಪಿ ಹೈಕಮಾಂಡ್ ನೀಡಿದೆ. ಹೀಗಾಗಿ ಸಿದ್ದರಾಮಯ್ಯ-ಈಶ್ವರಪ್ಪ ಅವರಿಗೆ ಈ ಕ್ಷೇತ್ರ ಪ್ರತಿಷ್ಠೆಯಾಗಿದೆ.
ಕ್ಷೇತ್ರವನ್ನು ಪುನಃ ನಮ್ಮ ವಶಕ್ಕೆ ಪಡೆಯಲು ಯುವ ಸಮುದಾಯಕ್ಕೆ ಪಕ್ಷ ಆದ್ಯತೆ ಕೊಡುತ್ತದೆ ಎಂಬ ವಿಶ್ವಾಸವಿದೆ. ಈಗಾಗಲೇ ಇಡೀ ಜಿಲ್ಲೆಯಲ್ಲಿ ಸುತ್ತಾಡಿ ಕೆಲಸ ಮಾಡಿದ್ದೇನೆ. ಹೀಗಾಗಿ ಪಕ್ಷದ ಟಿಕೆಟ್ ನನಗೆ ದೊರೆಯುತ್ತದೆ ಎಂಬ ನಂಬಿಕೆ ಇದೆ.-ವೀಣಾ ಕಾಶಪ್ಪನವರ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಟಿಕೆಟ್‌ಗಾಗಿ ಪಕ್ಷದ ಹಿರಿಯರಿಗೆ ಮನವಿ ಮಾಡಿದ್ದೇನೆ. ಹಲವಾರು ಮುಖಂಡರು, ಕಾರ್ಯಕರ್ತರು ನನ್ನ ಪರವಾಗಿ ಟಿಕೆಟ್ ಕೇಳಿದ್ದಾರೆ. ಸಿದ್ದರಾಮಯ್ಯ, ದಿನೇಶ ಗುಂಡೂರಾವ್ ಅವರಿಗೂ ಪ್ರತ್ಯೇಕವಾಗಿ ಕೇಳಿಕೊಂಡಿದ್ದೇವೆ. ಟಿಕೆಟ್ ದೊರೆಯುವ ವಿಶ್ವಾಸವಿದೆ.
-ಶಿವಾನಂದ ಉದಪುಡಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ – ಶ್ರೀಶೈಲ ಕೆ. ಬಿರಾದಾರ