Advertisement

ಕುಡಿತದಿಂದ ವಿಚ್ಚೇದನ ಪ್ರಕರಣಗಳು ಹೆಚ್ಚಳ

03:28 PM Jul 29, 2019 | Suhan S |

ನಾಗಮಂಗಲ: ಸಮಾಜದಲ್ಲಿ ಸ್ವಾಸ್ಥ್ಯ ವನ್ನು ಕಾಪಾಡಲು ಮೊದಲು ಪ್ರಜೆಗಳು ಉತ್ತಮರಾಗಬೇಕು. ಆ ನಿಟ್ಟಿನಲ್ಲಿ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಮೂಲಕ ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡುವ ಸದುದ್ದೇಶದಿಂದ ಧರ್ಮಸ್ಥಳ ಗ್ರಾಮಾಭಿ ವೃದ್ಧಿ ಯೋಜನೆ ವತಿಯಿಂದ ಮದ್ಯ ವರ್ಜನ ಶಿಬಿರಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ನಾಗಮಂಗಲದ ಎಸ್‌.ಎ.ಸಿ.ಕಾಲೇಜಿನ ಉಪನ್ಯಾಸಕ ಚೇತನ್‌ ಅಭಿಪ್ರಾಯಪಟ್ಟರು.

Advertisement

ಪಟ್ಟಣದ ಜಯಮ್ಮ ಎಚ್.ಟಿ.ಕೃಷ್ಣಪ್ಪ ಸಮುದಾಯಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿರುವ 1376ನೇ ಮದ್ಯ ವರ್ಜನ ಶಿಬಿರದಲ್ಲಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಕೆಲವರು ಅನೇಕ ದುಶ್ಚಟಗಳಿಗೆ ಬಲಿಯಾಗುವ ಮೂಲಕ ಇರುವಂತಹ ವೈಶಿಷ್ಟ್ಯವನ್ನು ಕಳೆಯುತ್ತಿದ್ದು ಸಮಾಜ ವನ್ನು ಅಧೋಗತಿಗೆ ದೂಡುತ್ತಿ ರುವುದು ವಿಷಾದನೀಯ. ತಮ್ಮ ಜೀವನ ದಲ್ಲಿ ಅನೇಕ ಕಾರಣಗಳಿಂದ ಮದ್ಯವೆಂಬ ವಿಷವರ್ತುಲಕ್ಕೆ ಸಿಲುಕಿಕೊಂಡು ನಂತರ ಅದರಿಂದ ಹೊರಬಾರಲು ಆಗದೆ ನರಳು ತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ ಈ ರೀತಿಯ ವ್ಯಸನಗಳಿಂದ ತಮ್ಮ ಮಾನಸಿಕ ಮತ್ತು ದೈಹಿಕ ಶಕ್ತಿಯನ್ನು ಕುಂದಿಸಿಕೊಳ್ಳುವ ಜೊತೆಗೆ ರೋಗಗ್ರಸ್ಥರಾ ಗುತ್ತಿದ್ದಾರೆ.

ಮನುಷ್ಯ ಮೊದಲು ತನ್ನ ಮನಸ್ಸನ್ನು ನಿಗ್ರಸಿಕೊಳ್ಳುವ ಮೂಲಕ ಮಾನವೀ ಯತೆಯ ಗುಣಗಳನ್ನು ಮೈಗೂಡಿಸಿ ಕೊಂಡು, ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿಸಿಕೊಂಡರೆ ಎಲ್ಲಾ ದುಶ್ಚಟಗಳಿಗೆ ಕಡಿವಾಣ ಹಾಕಿಕೊಳ್ಳಬಹುದು ಎಂದರು.

ಎಪಿಎಂಸಿ ನಿರ್ದೇಶಕ ಮಂಜೇಶ್‌ ಮಾತ ನಾಡಿ, ವ್ಯಸನಿಗಳು ಇಂದು ತಮ್ಮ ದುಡಿಮೆಯ ಹಣವನ್ನು ತಮ್ಮ ದುಶ್ಚಟ ಗಳಿಗೆ ಖರ್ಚು ಮಾಡುತ್ತಿರುವ ಜತೆಗೆ ಸಾಲ ಮಾಡುತ್ತಿರುವುದು ಹೆಚ್ಚು. ಇದ ರಿಂದ ಸಾಲಗಾರರಾಗುವ ಮೂಲಕ ತಮ್ಮ ಕುಟುಂಬಗಳನ್ನು ಬೀದಿಗೆ ತರುವಂಥ ನೀಚ ಕೆಲಸಕ್ಕೆ ಮುಂದಾಗು ತ್ತಿದ್ದಾರೆ. ತಮ್ಮ ಮಕ್ಕಳ ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ವ್ಯಸನಮುಕ್ತರಾಗಲು ಯೋಗ,ಧ್ಯಾನ, ಸಮಾಜಸೇವೆಗಳಲ್ಲಿ ಪಾಲ್ಗೊಳ್ಳುವ ಗುಣ ವನ್ನು ಅಳವಡಿಸಿಕೊಳ್ಳಬೇಕಿದೆ. ಜಿಲ್ಲಾ ಕಸಾಪ ಉಪಾಧ್ಯಕ್ಷ ಬಿ.ಸಿ.ಮೋಹನ್‌ಕುಮಾರ್‌, ಎಸ್‌ಕೆಡಿಆರ್‌ಪಿ ಯೋಜನಾ ಧಿಕಾರಿ ಹೇಮಲತಾ ಹೆಗ್ಡೆ, ಮೇಲ್ವಿಚಾರಕಿ ನೋವಿತಾ, ಉಮೇಶ್‌, ಎಸ್‌ಕೆಡಿಆರ್‌ಪಿ ಯೋಜನಾಧಿಕಾರಿ ನೇತ್ರಾವತಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next