Advertisement

ಹೆಚ್ಚಿದ ಬ್ಯಾಂಕ್‌ ವಂಚನೆ ಪ್ರಕರಣ

09:50 AM Sep 05, 2019 | mahesh |

ಮಣಿಪಾಲ: 2018-19ನೇ ಹಣಕಾಸು ವರ್ಷದಲ್ಲಿ ಬ್ಯಾಂಕುಗಳಿಗೆ ವಂಚನೆ ಮಾಡಿದ ಪ್ರಕರಣಗಳಲ್ಲಿ ಶೇ.15ರಷ್ಟು ಏರಿಕೆಯಾಗಿದೆ ಎಂದು ಕೇಂದ್ರೀಯ ಬ್ಯಾಂಕ್‌, ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ (ಆರ್‌ಬಿಐ) ಹೇಳಿದೆ. ಹಾಗಾದರೆ ಬ್ಯಾಂಕಿಂಗ್‌ ವಂಚನೆ ಎಂದರೇನು?
ಮಾಹಿತಿ ಇಲ್ಲಿದೆ.

Advertisement

ಬ್ಯಾಂಕ್‌ಗಳಿಗೆ ಮೋಸ ಹೇಗೆ?
ಸಾಲದ ರೂಪದಲ್ಲಿ ಮಾಡಿದ ಮೋಸ ಹಾಗೂ ನಕಲಿ ದಾಖಲೆಗಳನ್ನು ನೀಡಿದ ಪ್ರಕರಣಗಳನ್ನು ಬ್ಯಾಂಕ್‌ ಫ್ರಾಡ್‌ ಅಥವಾ ಬ್ಯಾಂಕುಗಳಿಗೆ ವಂಚನೆ ಎಂದು ಕರೆಯಲಾಗುತ್ತದೆ. ಸುಳ್ಳು ಲೆಕ್ಕ ಪತ್ರ ಮತ್ತು ವಿಶ್ವಾಸ ದ್ರೋಹದ ಮೂಲಕ ಬ್ಯಾಂಕುಗಳನ್ನು ವಂಚಿಸಲಾಗುತ್ತದೆ.

ಶೇ. 15ರಷ್ಟು ಹೆಚ್ಚಳ
ಕಳೆದ ಒಂದು ವರ್ಷದ ಅವಧಿಯಲ್ಲಿ ಬ್ಯಾಂಕ್‌ಗಳಿಗೆ ವಂಚನೆಯ ಪ್ರಮಾಣ ಶೇ.15ರಷ್ಟು ಹೆಚ್ಚಳವಾಗಿದೆ.

ಮೊತ್ತ ಎಷ್ಟು?
2018-19ನೇ ಸಾಲಿನಲ್ಲಿ ಒಟ್ಟು 71,542 ಕೋಟಿ ರೂ. ವಂಚನೆ ನಡೆದಿದೆ.

ಸರಕಾರಿ ಬ್ಯಾಂಕುಗಳಲ್ಲೇ ಹೆಚ್ಚು
ಸರಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಹೆಚ್ಚು ಮೋಸ ಕಂಡುಬಂದಿದ್ದು, 3,766 ಪ್ರಕರಣ ಗಳು ದಾಖಲಾಗಿದೆ.

Advertisement

64,509.43 ವಂಚನೆಯಿಂದ ಸರಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಸಂಭವಿಸಿದ ನಷ್ಟದ ಪ್ರಮಾಣ.

ಕಳೆದ ವರ್ಷ ಎಷ್ಟು?
ಕಳೆದ ವರ್ಷದ 2017-18ನೇ ಸಾಲಿನಲ್ಲಿ 41,167 ಕೋಟಿ ರೂ. ವಂಚನೆ ನಡೆದಿತ್ತು.

30 ಸಾವಿರ ಕೋಟಿ ನಷ್ಟ
ಈ ವರ್ಷ ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಹೆಚ್ಚುವರಿ 30 ಸಾವಿರ ಕೋಟಿ ರೂ. ನಷ್ಟ ಸಂಭವಿಸಿದೆ.

ಸಾಲವೇ ಹೆಚ್ಚು
ಬ್ಯಾಂಕಿಂಗ್‌ ವಂಚನೆಯಲ್ಲಿ ಬಹುಪಾಲು ಹಣ ಸಾಲದ ರೂಪದಲ್ಲಿದೆ.

5916 ಕಳೆದ ವರ್ಷ ಒಟ್ಟು 5,916 ವಂಚನೆ ಪ್ರಕರಣಗಳ ದಾಖಲಾಗಿದ್ದವು.
6,801ಪ್ರಕರಣ 2018-19ನೇ ಸಾಲಿನಲ್ಲಿ ಒಟ್ಟು 6,801 ಬ್ಯಾಂಕ್‌ ವಂಚನೆಯ ಪ್ರಕರಣಗಳು ರಾಷ್ಟ್ರಾದ್ಯಂತ ದಾಖಲಾಗಿವೆ.

ಡಿಜಿಟಲ್‌ ವಂಚನೆ 0.3 ಶೇ.
2018-19ನೇ ಸಾಲಿನಲ್ಲಿ ಕ್ರೆಡಿಟ್‌ ಕಾರ್ಡ್‌, ಇಂಟರ್‌ನೆಟ್‌ ಬ್ಯಾಂಕಿಂಗ್‌ ಹಾಗೂ ಠೇವಣಿ ಮೂಲಕ ಅತೀ ಕಡಿಮೆ ಎಂದರೆ ಶೇ. 0.3 ಫ್ರಾಡ್‌ಗಳು ದಾಖಲಾಗಿವೆ.

ನಕಲಿಯೇ ಹೆಚ್ಚು
ಮೋಸ ಹಾಗೂ ನಕಲಿ ದಾಖಲೆಗಳ ಮೂಲಕ ನಡೆದ ಪ್ರಕರಣಗಳೇ ಹೆಚ್ಚಾಗಿವೆ. ಸುಳ್ಳು ಲೆಕ್ಕ ಪತ್ರ ಮತ್ತು ವಿಶ್ವಾಸ ದ್ರೋಹದ ಮೂಲಕ ಬ್ಯಾಂಕುಗಳಿಗೆ ವಂಚಿಸಲಾಗಿದೆ.

ಶೇ. 0.1
1 ಲಕ್ಷ ರೂ.ಗಳಿಗಿಂತ ಕಡಿಮೆ ಮೌಲ್ಯದ ಹಣಕಾಸು ವಂಚನೆ ಪ್ರಕರಣಗಳು ಶೇ. 0.1ರಷ್ಟು ಮಾತ್ರ ಏರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next