Advertisement

ಬಿಜೆಪಿ ಮುಸ್ಲಿಮರನ್ನು ಬೆದರಿಸಿ ಮತ ಸೆಳೆಯಲು ಬಯಸಿದೆ: ಸಂಸದ ಮೌಲಾನಾ ಅಜ್ಮಲ್

12:51 PM Sep 01, 2022 | Team Udayavani |

ಡಿಸ್ಪುರ್ : ಬಿಜೆಪಿ ಮುಸ್ಲಿಮರನ್ನು ಹೆದರಿಸಿ ಮತಗಳನ್ನು ಪಡೆದು 2024 ರಲ್ಲಿ ಅಧಿಕಾರದಲ್ಲಿ ಉಳಿಯಲು ಬಯಸುತ್ತಿದೆ ಎಂದು ಅಸ್ಸಾಂನ ಪ್ರಮುಖ ರಾಜಕೀಯ ಪಕ್ಷ ಎಐಯುಡಿಎಫ್ ಅಧ್ಯಕ್ಷ ಮತ್ತು ಲೋಕಸಭಾ ಸದಸ್ಯ ಮೌಲಾನಾ ಬದ್ರುದ್ದೀನ್ ಅಜ್ಮಲ್ ಅವರು ಅಸ್ಸಾಂ ಸರ್ಕಾರ ಮತ್ತು ಬಿಜೆಪಿ ವಿರುದ್ಧ ದೊಡ್ಡ ಆರೋಪ ಮಾಡಿದ್ದಾರೆ.

Advertisement

2024ರ ಚುನಾವಣೆಗೂ ಮುನ್ನ ಮುಸ್ಲಿಮರು, ಮದರಸಾಗಳ ಮೇಲೆ ದಾಳಿಗಳು ಹೆಚ್ಚುತ್ತಿವೆ. 2024ರಲ್ಲಿ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿಗೆ ಮುಸ್ಲಿಮರ ಮತಗಳು ಬೇಕಾಗಿದ್ದು, ಹೀಗಾಗಿ ದಾಳಿಗಳು ಹೆಚ್ಚಾಗುತ್ತಿವೆ, ಹಾಗಾಗಿ ಹೆದರಿದ ಮುಸ್ಲಿಮರು ಅವರಿಗೆ ಮತ ಹಾಕುತ್ತಾರೆ ಎಂದು ಅಜ್ಮಲ್ ಅಭಿಪ್ರಾಯಪಟ್ಟಿದ್ದಾರೆ.

ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರನ್ನು ಗುರಿಯಾಗಿಸಿ, ಸರ್ಕಾರವು ಮದರಸಾಗಳಲ್ಲಿ ಬುಲ್ಡೋಜರ್‌ಗಳ ಪ್ರಯೋಗವನ್ನು ನಿಲ್ಲಿಸಬೇಕು, ಇಲ್ಲದಿದ್ದರೆ ನಮ್ಮ ಪಕ್ಷವು ಸುಪ್ರೀಂ ಕೋರ್ಟ್‌ಗೆ ಹೋಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next