ಕಂಪನಿಗಳ ಕೈಗೆ ಒಪ್ಪಿಸುತ್ತಿರುವ ದಪ್ಪ ಚರ್ಮದ ಸರ್ಕಾರದ ನೀತಿಯಿಂದ ಆರ್ಥಿಕತೆ ಕುಸಿದಿದೆ ಎಂದರು.
Advertisement
ಚುನಾವಣೆ ವೇಳೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ಕೇವಲ ರಾಷ್ಟ್ರೀಯತೆ, ರಾಷ್ಟ್ರ ಪ್ರೇಮದ ಹೆಸರಿನಲ್ಲಿ ನಂಬಿಸಿ ದ್ರೋಹ ಮಾಡುತ್ತಿದೆ. ದೇಶದಮುಗª ಜನತೆಯನ್ನು ಒಂದು ಅಲ್ಲ ಎರಡು ಬಾರಿ ಮೋಸ ಮಾಡಬಹುದು. ಮೂರನೇ ಬಾರಿಗೆ ಮೋಸ ಸಾಧ್ಯವಿಲ್ಲ. ಬಿಜೆಪಿಯನ್ನು ಬುಡ ಸಮೇತ ಜನರು ಕಿತ್ತು ಹಾಕುತ್ತಾರೆ ಎಂದರು. ಬಿಜೆಪಿ ರಾಜ್ಯದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದ್ದು, ಶಾಸಕರ ಧ್ವನಿ ಹತ್ತಿಕ್ಕಲು ಸುಳ್ಳು ಕೇಸ್‌ಗಳನ್ನು ಹಾಕುತ್ತಿದೆ ಎಂದು ದೂರಿದರು. ಯಾದಗಿರಿಯಲ್ಲಿಯೂ ಆಡಳಿತ ಪಕ್ಷದ ದೂರುಗಳನ್ನು ಅಷ್ಟೇ ಪಡೆದು ಕಿರುಕುಳ ನೀಡಲಾಗುತ್ತಿದೆ ಎಂಬ ದೂರುಗಳು ಬಂದಿದೆ. ಅಧಿಕಾರಿಗಳು ನ್ಯಾಯ ಸಮ್ಮತ, ಸಂವಿಧಾನಾತ್ಮಕವಾಗಿ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.
5000 ಕೋಟಿಯಲ್ಲಿ ಕಾಮಗಾರಿಗಳು ನಡೆದಿವೆ. ಕೆಕೆಆರ್ ಡಿಬಿ ಅಡಿಯಲ್ಲಿ 1136 ಕೋಟಿ ಮಾತ್ರ ಬಿಡುಗಡೆ. ಈ ಸಲದ ಕಾಮಗಾರಿಗೆ ನಯಾಪೈಸೆ ಖರ್ಚಾಗಲ್ಲ. ಈ ಹಿಂದೆ ಪ್ರಾರಂಭವಾಗಿರುವ ಕಾಮಗಾರಿಗಳನ್ನ ತಮ್ಮದು ಎಂದು ಬಿಂಬಿಸಲಾಗುತ್ತಿದೆ. ಶೇ.40ರಿಂದ 50 ಹುದ್ದೆಗಳು ಖಾಲಿ ಇವೆ. ಹೀಗದ್ದಲ್ಲಿ ಅಭಿವೃದ್ಧಿ ಹೇಗೆ ಸಾಧ್ಯವೆಂದು ದೂರಿದರು.
Related Articles
Advertisement