Advertisement

ಗ್ರೂಪ್‌ ಡಿ ನೌಕರರ ಪ್ರಯಾಣ ಭತ್ಯೆ ಹೆಚ್ಚಿಸಿ

12:32 PM Dec 18, 2021 | Team Udayavani |

ಚಿತ್ತಾಪುರ: ಗ್ರೂಪ್‌ ಡಿ ನೌಕರರಿಗೆ ಪ್ರಸಕ್ತ ವರ್ಷದ ಪ್ರಯಾಣ ಭತ್ಯೆ ಹೆಚ್ಚಿಸಬೇಕು ಮತ್ತು ಕೋವಿಡ್‌ 19 ಪ್ರೋತ್ಸಾಹ ಧನ ನೀಡಬೇಕು ಎಂದು ಒತ್ತಾಯಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗ್ರೂಪ್‌ ಡಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಶಿವರಾಜ ಕುಮಾರ ನೇತೃತ್ವದಲ್ಲಿ ಪದಾಧಿಕಾರಿಗಳು ತಾಲೂಕು ಆರೋಗ್ಯಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

Advertisement

ನಂತರ ಮಾತನಾಡಿದ ಅವರು, ನೌಕರರು ಪ್ರತಿ ವರ್ಷ ಪ್ರಯಾಣ ಭತ್ಯೆ ಪಡೆಯುತ್ತಿದ್ದಾರೆ. ಆದರೆ ಪ್ರಯಾಣ ಭತ್ಯೆ ನೀಡುವಲ್ಲಿ ಪ್ರತಿ ತಿಂಗಳಿಗೆ ಇಂತಿಷ್ಟೇ ಎಂದು ದರ ನಿಗದಿ ಮಾಡಿದ್ದಾರೆ. ನೌಕರರು ವಿಶೇಷವಾಗಿ ಈ ವರ್ಷ ಕೋವಿಡ್‌-19 ಸಂದರ್ಭದಲ್ಲಿ ಕೋವಿಡ್‌ ಲಸಿಕೆ ತರುವುದು. ಕೋವಿಡ್‌ ಮಾದರಿಗಳನ್ನು ಪ್ರಯೋಗಾಲಯಕ್ಕೆ ನೀಡುವುದು. ಹೀಗೆ ಅತಿ ಹೆಚ್ಚು ಪ್ರಯಾಣ ಮಾಡಿದ್ದಾರೆ. ಹೀಗಾಗಿ ಪ್ರತಿ ವರ್ಷದಂತೆ ಪ್ರಯಾಣ ಭತ್ಯೆಗೆ ಯಾವುದೇ ದರ ನಿಗದಿ ಮಾಡದೇ ಸರ್ಕಾರದ ನಿಯಮಾವಳಿಗಳಂತೆ ನೌಕರರು ಎಷ್ಟು ಪ್ರಯಾಣ ಮಾಡಿದ್ದಾರೋ ಅವರಿಗೆ ಸಂಪೂರ್ಣ ಪ್ರಯಾಣ ಭತ್ಯೆ ನೀಡಬೇಕು ಎಂದು ಆಗ್ರಹಿಸಿದರು.

ಕೋವಿಡ್‌-19 ಪ್ರೋತ್ಸಾಹ ಧನ ನೀಡುವಂತೆ ಸರ್ಕಾರ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಆದೇಶ ಹೊರಡಿಸಿದರೂ ಇನ್ನೂ ಕೆಲವು ನೌಕರರಿಗೆ ಪ್ರೋತ್ಸಾಹ ಧನ ಬಂದಿಲ್ಲ. ಆದ್ದರಿಂದ ಕೂಡಲೇ ನೌಕರರಿಗೆ ಪ್ರೋತ್ಸಾಹ ಧನ ನೀಡಬೇಕು ಎಂದು ಒತ್ತಾಯಿಸಿದರು.

ತಾಲೂಕು ಘಟಕದ ಗೌರವಾಧ್ಯಕ್ಷ ಶಿವಾನಂದ, ಉಪಾಧ್ಯಕ್ಷ ತಿಪ್ಪಣ್ಣ, ಸಂಘಟನಾ ಕಾರ್ಯದರ್ಶಿಗಳಾದ ರಾಘವೇಂದ್ರ, ಶ್ರವಣಕುಮಾರ, ಜಂಟಿ ಕಾರ್ಯದರ್ಶಿಗಳಾದ ರಮೇಶ ಶಿವಶರಣ, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಮಹಾದೇವ, ಅಕ್ಷಯಕುಮಾರ, ಸದಸ್ಯರಾದ ಖಾಜಾ, ಶಬ್ಬೀರ್‌, ಶರಣು, ಸುನೀಲ, ಶಿವಲಿಂಗಪ್ಪ, ನಾಗಪ್ಪಾ ಹೆಚ್‌, ಹಣಮಂತ, ರಂಜಿತಾ ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next