Advertisement
ಅವರು ಅಂಗಸಂಸ್ಥೆಯ ಸಂಪರ್ಕ ಸಭೆಯಲ್ಲಿ ಎಸೆಸೆಲ್ಸಿ ಹಾಗೂ ಪ್ಲಸ್ ಟು ಪರೀಕ್ಷೆಯಲ್ಲಿ ಉತ್ತಮ ಗ್ರೇಡ್‌ಗಳೊಂದಿಗೆ ತೇರ್ಗಡೆಯಾದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಸೆಸೆಲ್ಸಿ ಹಾಗೂ ಪ್ಲಸ್ ಟು ತರಗತಿಗಳಲ್ಲಿ ಉತ್ತಮ ಗ್ರೇಡುಗಳೊಂದಿಗೆ ತೇರ್ಗಡೆಯಾದ ಸಿಂಧು ಪಿ.ಆರ್. ಕುಳ, ಪ್ರಜ್ವಲ್ ಹೇರಳ ಉಡುವ, ಶ್ರೀವಿದ್ಯಾ ಎಸ್. ನೀರಾಳ, ಅಭಯ ಕಾರಂತ ಬೆದ್ರಡ್ಕ, ಸಿಂಚನಾ ಹೊಳ್ಳ ಎಲ್ಲಂಗಳ, ನಯನಾ ಬಿ. ಬನ್ನೂರು ಹಾಗೂ ಚರಿತಾ ಬಿ. ಬನ್ನೂರು ಅವರಿಗೆ ದಿ| ವೆಂಕಟ್ರಮಣ ಮಯ್ಯ ಮತ್ತು ದಿ| ಕಾವೇರಿ ಅಮ್ಮ ಅವರ ಸ್ಮರಣಾರ್ಥ ಪ್ರತಿವರ್ಷ ನೀಡಲಾಗುವ ಸ್ಮರಣಿಕೆ ಮತ್ತು ಗುರು ಶ್ರೀ ಶಂಕರಾನಂದ ಪ್ರತಿಷ್ಠಾನ ಮುಗು ಹಾಗೂ ರಾಧಾಕೃಷ್ಣ ಮಯ್ಯ ಪಟ್ಲ ಅವರ ವತಿಯಿಂದ ನೀಡಲಾದ ಆರ್ಥಿಕ ಪುರಸ್ಕಾರಗಳನ್ನು ವಿತರಿಸಲಾಯಿತು. ಪುರಸ್ಕೃತರು ಈ ಸಮ್ಮಾನಕ್ಕೆ ಕೃತಜ್ಞತೆಯನ್ನು ಸಲ್ಲಿಸಿ ಮಾತನಾಡಿದರು.
Related Articles
Advertisement
ಸಂಪರ್ಕ ಸಭೆಗಿಂತ ಮೊದಲು ವಿಷ್ಣು ಸಹಸ್ರನಾಮ ಪಠನ ಹಾಗೂ ಭಜನ ಸಂಕೀರ್ತನೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಅಂಗಸಂಸ್ಥೆಯ ಮುಂದಿನ ಸಂಪರ್ಕ ಸಭೆಯನ್ನು ಜು.7 ರಂದು ಅಪರಾಹ್ನ ಬೇಳದ ಕುಮಾರಮಂಗಲದ ರಾಮಚಂದ್ರ ಅಡಿಗರ ಮನೆಯಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸುವಂತೆ ಕೋರಲಾಯಿತು.
ಅಂಗಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನರಸಿಂಹ ಮಯ್ಯ ಎಂ. ಮಧೂರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಚಂದ್ರಶೇಖರ ರಾವ್ ಏತಡ್ಕ ವಂದಿಸಿದರು. ಕೋಶಾಧಿಕಾರಿ ಕೃಷ್ಣ ಕಾರಂತ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.