Advertisement

ಇತಿಹಾಸ ಓದುವವರ ಸಂಖ್ಯೆ ಹೆಚ್ಚಳ

01:17 AM Jun 06, 2019 | Team Udayavani |

ಬೆಂಗಳೂರು: ಸಾಹಿತ್ಯದ ವಿದ್ಯಾರ್ಥಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿದ್ದ ಇತಿಹಾಸದ ಪುಸ್ತಕಗಳು ಇತ್ತೀಚಿನ ದಿನಗಳಲ್ಲಿ ಐಟಿಬಿಟಿ ಉದ್ಯೋಗಿಗಳಿಗೂ ಹತ್ತಿರವಾಗಿದೆ ಎಂದು ಪ್ರೊ. ಷ. ಶೆಟ್ಟರ್‌ ಅಭಿಪ್ರಾಯಪಟ್ಟರು.

Advertisement

ಇತಿಹಾಸ ದರ್ಪಣ ಸಂಸ್ಥೆ ಶತಮಾನೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ಇತಿಹಾಸ ದರ್ಪಣದ ದಶಮಾನೋತ್ಸವ ಸಮಾರಂಭ ಹಾಗೂ ಇತಿಹಾಸದರ್ಪಣ ಪ್ರಕಾಶನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತಿಹಾಸ ಪುಸ್ತಕಗಳಿಗೆ ಇತ್ತೀಚಿನ ದಿನಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಈ ಪುಸ್ತಕಗಳಲ್ಲಿನ ಭಾಷಾ ಶೈಲಿ ಬದಲಾಗಬೇಕು. ಆ ಮೂಲಕ ಮತ್ತಷ್ಟು ಓದುಗರನ್ನು ತಲುಪಬೇಕಿದೆ ಎಂದರು.

ಹಿಂದಿನ ಕಾಲದಲ್ಲಿ ಸಂಶೋಧನಾ ಗ್ರಂಥಗಳಿಗೆ ಬೇಡಿಕೆ ಇರಲಿಲ್ಲ. ಈಗ ಉಳಿದ ಪುಸ್ತಕಗಳಂತೆಯೇ ಸಂಶೋಧನಾ ಪುಸ್ತಕಗಳು ಮಾರಾಟವಾಗುತ್ತಿದೆ ಎಂದು ಹೇಳಿದರು. ಇತಿಹಾಸದ ಬಗ್ಗೆ ತಿಳಿದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆಯಾದರೂ ಅದಕ್ಕೆ ಬೇಕಾದ ಪ್ರೋತ್ಸಾಹ ಸಿಗುತ್ತಿಲ್ಲ. ಸರ್ಕಾರಗಳು ಈ ಹಿಂದೆ ಇತಿಹಾಸ ಕ್ಷೇತ್ರಕ್ಕೆ ಮನ್ನಣೆ ನೀಡುತ್ತಿದ್ದಷ್ಟು ಈಗ ಮನ್ನಣೆ ನೀಡುತ್ತಿಲ್ಲ. ಇತಿಹಾಸ ದರ್ಪಣದಂತಹ ಸಂಸ್ಥೆಗಳು ನಿರಂತರವಾಗಿ ಇತಿಹಾಸವನ್ನು ಪರಿಚಯಿಸುವ ಕೆಲಸವನ್ನು ಮಾಡುತ್ತಿವೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಇತಿಹಾಸ ತಜ n ಎಸ್‌.ಕೆ ಅರುಣಿ ಅವರ ಬೆಂಗಳೂರು ಪರಂಪರೆ ಹಾಗೂ ಆರ್‌.ಮೋಹನ್‌ ರಚಿಸಿರುವ ಕರ್ನಾಟಕ ಅದಿಮ ಕಲೆ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಓದುಗರನ್ನು ಸುಲಭವಾಗಿ ತಲುಪುವ ಉದ್ದೇಶದಿಂದ ಇತಿಹಾಸ ದರ್ಪಣವೆಬ್‌ಸೈಟ್‌ (www.itihasadarpana.com) ಅನಾವರಣಗೊಳಿಸಲಾಯಿತು.

ಇತಿಹಾಸದರ್ಪಣ ಪತ್ರಿಕೆಯ ಸಂಪಾದಕ ಡಾ. ಎಂ.ಜಿ ನಾಗರಾಜ ಮಾತನಾಡಿ, ಇತಿಹಾಸ ದರ್ಪಣ ವೆಬ್‌ಸೈಟ್‌ನಲ್ಲಿ ಸಂಸ್ಥೆಯ ಎಲ್ಲ ಆವೃತ್ತಿಯ ಪ್ರತಿಗಳು ಲಭ್ಯವಿದೆ. ಆನ್‌ಲೈನ್‌ ಮೂಲಕವೂ ಇತಿಹಾಸದ ಪುಸ್ತಕಗಳನ್ನು ಖರೀದಿಸಬಹುದು. ಓದುಗರು ವೆಬ್‌ಸೈಟ್‌ ಮೂಲಕವೂ ಚಂದಾದಾರರಾಗಬಹುದು ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next