Advertisement

ಅಪ್ಪರ್‌ ಲಿಪ್‌ನ ಅಂದ ಹೆಚ್ಚಿಸಿ

11:15 AM Nov 27, 2020 | mahesh |

ಬಹುತೇಕ ಹೆಣ್ಮಕ್ಕಳಿಗೆ ಅಪ್ಪರ್‌ ಲಿಪ್‌ನ ಸಮಸ್ಯೆ ತಲೆ ಕಾಡುತ್ತದೆ. ಇದಕ್ಕೆ ಪಾರ್ಲರ್‌, ಕೆಲವರು ಸಲೂನ್‌ಗಳಲ್ಲಿ ಬೇರೆ ದಾರಿ ಇಲ್ಲದೆ ಪರಿಹಾರ ಕಂಡುಕೊಳ್ಳುತ್ತಾರೆ. ಇನ್ನು ಕೆಲವರು ಅಲ್ಲಿಗೆ ಹೋಗುವಷ್ಟು ತಾಳ್ಮೆ ಇಲ್ಲದೆ ಪರದಾಡುತ್ತಾರೆ. ಅಂತವರಿಗಾಗಿ ಕೆಲವು ಸುಲಭ ಟಿಪ್ಸ್‌ಗಳು ಇಲ್ಲಿವೆ.

Advertisement

ತುಟಿಯ ಮೇಲ್ಭಾಗದಲ್ಲಿ ಬರುವ ಕೂದಲುಗಳು ಹೆಣ್ಮಕ್ಕಳ ಸೌಂದರ್ಯವನ್ನು ಹಾಳು ಮಾಡುತ್ತದೆ. ಸಮಾರಂಭಗಳಿಗೆ ಅಥವಾ ಇನ್ನಿತರ ಕೆಲಸಗಳಿಗೆ ಹೋಗುವಾಗ ಇದು ಮುಜುಗರಕ್ಕೀಡು ಮಾಡುತ್ತವೆ. ಇದನ್ನು ಪದೇ ಪದೇ ತೆಗೆಯುವ ಬದಲು ಮನೆಯಲ್ಲಿರುವ ಕೆಲವು ಸಾಮಗ್ರಿಗಳನ್ನು ಬಳಸಿಕೊಂಡು ಅದನ್ನು ನಿವಾರಿಸಿಕೊಳ್ಳಬಹುದು.

·   ಇದು ಸಾಮಾನ್ಯವಾಗಿ ಮಹಿಳೆಯರಲ್ಲಿ ಹಾರ್ಮೋನ್‌ಗಳ ಅಸಮತೋಲನದಿಂದ ಮೇಲ್‌ತುಟಿಯ ಮೇಲೆ ಕೂದಲು ಕಾಣಿಸಿಕೊಳ್ಳುತ್ತದೆ. ಅದಲ್ಲದೆ ಇದು ಆನುವಂಶಿಕವಾಗಿ ಕೂಡ ಅಥವಾ ಎರಡರ ಸಂಯೋಜನೆಯಿಂದ ಉಂಟಾಗುತ್ತದೆ. ಸುಮಾರು ಶೇ. 10 ರಷ್ಟು ಮಹಿಳೆಯರಿಗೆ ಹಿರ್ಸುಟಿಸಮ್‌ ಸಮಸ್ಯೆ ಇದೆ. ಈ ಸ್ಥಿತಿಗೆ ಯಾವುದೇ ಮುಖ್ಯ ಕಾರಣಗಳಿಲ್ಲ. ಅದಕ್ಕಾಗಿ ಕೆಲವು ಮನೆಮದ್ದುಗಳನ್ನು ಬಳಸಿಕೊಂಡು ಆ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.

·   ಅರಿಶಿನ ಸಾಮಾನ್ಯವಾಗಿ ಹೆಣ್ಮಕ್ಕಳ ಅಂದ ಇಮ್ಮಡಿಗೊಳಿಸುವ ಮನೆಮದ್ದಾಗಿದ್ದು ಇದನ್ನು ಒಂದು ಚಮಚ ನೀರು ಅಥವಾ ಹಾಲಿನೊಂದಿಗೆ ಚೆನ್ನಾಗಿ ಬೆರೆಸಿ ತುಟಿಯ ಮೇಲೆ ಹಚ್ಚಿರಿ. ಅನಂತರ ಅದನ್ನು ಅರ್ಧ ಗಂಟೆಯ ಬಳಿಕ ಗಟ್ಟಿಯಾದ ಮೇಲೆ ಚೆನ್ನಾಗಿ ಉಜ್ಜಿ ತೊಳೆಯಿರಿ. ಒಂದೆರಡು ವಾರ ಹೀಗೆ ಮಾಡುವುದರಿಂದ ಉತ್ತಮ ಫ‌ಲಿತಾಂಶ ಪಡೆದುಕೊಳ್ಳಬಹದು.

·   ಕಡಲೆ ಹಿಟ್ಟು ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿ ಬಳಸುತ್ತಾರೆ. ಇದನ್ನು ಒಂದು ಚಮಚ ಹಾಕಿ, ಚಿಟಿಕೆ ಅರಿಶಿನ ಜತೆ ಚೆನ್ನಾಗಿ ಬೆರೆಸಿ ಮಿಶ್ರಣ ಮಾಡಿಕೊಳ್ಳಿ.ಅನಂತರ ಅದನ್ನು ಕೂದಲಿನ ಬೆಳವಣಿಗೆಯ ದಿಕ್ಕಿನ ವಿರುದ್ಧ ಅದನ್ನು ಸðಬ್‌ ಮಾಡಿ, ವಾರಕ್ಕೆ ಎರಡು ಬಾರಿ ಮಾಡಿದಲ್ಲಿ ತುಟಿಯ ಮೇಲಿನ ಕೂದಲನ್ನು ಸುಲಭವಾಗಿ ತೆಗೆಯಬಹುದು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next