ಗುಂಡ್ಲುಪೇಟೆ: ಸೋಂಕಿತರ ಪ್ರಮಾಣ ಕಡಿಮೆ ಮಾಡಲು ಪ್ರತಿ ಹಳ್ಳಿಗಳಲ್ಲಿ ಕೋವಿಡ್ ಸಂಪರ್ಕಿತರನ್ನು ಕಡ್ಡಾಯವಾಗಿ ಟೆಸ್ಟ್ ಮಾಡಿಸಬೇಕೆಂದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಸಲಹೆ ನೀಡಿದರು.
ತಾಲೂಕಿನ ಬಾಚಹಳ್ಳಿ, ಹುಂಡೀಪುರ, ಶಿವಪುರ, ಅಣ್ಣೂರು ಗ್ರಾಮಗಳಲ್ಲಿ ಟಾಸ್ಕ್ಫೋರ್ಸ್ ಸಮಿತಿ ಸಭೆ ನಡೆಸಿದ ಸಚಿವರು, ಸಾವಿನ ಪ್ರಮಾಣ ತಡೆಗೆ ಲಸಿಕೆ ಅಸ್ತ್ರವಾಗಿದ್ದು, ಲಸಿಕೆ ಬೇಡವೆಂದು ತಿರಸ್ಕರಿ ಸಿದರೂ ಸಹ ಅವರ ಮನವೊಲಿಸಿ ಲಸಿಕೆ ಹಾಕಿಸುವ ಕೆಲಸಕ್ಕೆ ಗ್ರಾಪಂ ಸದಸ್ಯರು, ಪಿಡಿಒಗಳು, ಸ್ಥಳೀಯ ಮುಖಂಡರು ಮುಂದಾಗಬೇಕು ಎಂದರು.
ಕೋವಿಡ್ ನಿರ್ವಹಣೆಯಲ್ಲಿ ಆಶಾ ಕಾರ್ಯಕರ್ತೆಯರು ಶ್ರಮ ವಹಿಸುತ್ತಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿಕೊಳ್ಳ ಬೇಕಾಗಿದೆ. ಹೀಗಾಗಿ ಗ್ರಾಮಸ್ಥರು ಇವರಿಗೆ ಬೆಂಬಲವಾಗಿ ನಿಲ್ಲುವಮೂಲಕ ಗ್ರಾಮಗಳಲ್ಲಿ 100ರಷ್ಟು ಲಸಿಕೆ ಹಾಕುವ ಗುರಿ ಹೊಂದಬೇಕು ಎಂದು ಸಚಿವರು ಮನವಿ ಮಾಡಿದರು.
ಶಾಸಕ ಸಿ.ಎಸ್.ನಿರಂಜನಕುಮಾರ್ ಮಾತನಾಡಿ, ಲಸಿಕೆ ಬಗ್ಗೆ ಜನರಿಗೆ ಇದೀಗ ಅರ್ಥವಾಗಿದ್ದು, ಹೆಚ್ಚಿನ ಮಂದಿ ಲಸಿಕೆ ಪಡೆಯಲು ಮುಂದೆ ಬರುತ್ತಿದ್ದಾರೆ. ಪ್ರತಿ ಗ್ರಾಪಂಗಳಲ್ಲಿ ಯುವಕರು ವಾರಿಯರ್ಸ್‌ಗಳಂತೆ ಜನರಿಗೆ ಲಸಿಕೆ ಹಾಕಿಸಬೇಕು ಎಂದರು. ತಹಶೀಲ್ದಾರ್ ರವಿಶಂಕರ್, ತಾಪಂ ಇಒ ಶ್ರೀಕಂಠರಾಜೇ ಅರಸ್, ಆರೋಗ್ಯಾಧಿಕಾರಿ ರವಿಕುಮಾರ್, ಸಿಡಿಪಿಒ ಚಲುವರಾಜು, ಕೃಷಿ ಇಲಾಖೆ ಸಹಾಯ ನಿರ್ದೇಶಕ ರಂಗಸ್ವಾಮಿ,ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣಿಕೊಪ್ಪ, ಇನ್ಸ್‌ಪೆಕ್ಟರ್ ಮಹದೇವಸ್ವಾಮಿ, ಸಬ್ ಇನ್ಸ್‌ಪೆಕ್ಟರ್ ಜೆ.ರಾಜೇಂದ್ರ, ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎನ್.ಮಲ್ಲೇಶ್, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಣಯ್ ಮತ್ತಿತರರಿದ್ದರು.
ಲಾಕ್‌ಡೌನ್ ತೆರವು ಬಗ್ಗೆ ಸರ್ಕಾರ ತಜ್ಞರ ಮಾಹಿತಿ ಸಲಹೆ ಪಡೆದ ಬಳಿಕನಿರ್ಧಾರ ಕೈಗೊಳ್ಳಲಿದೆ. ಈಗಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಸೂಚನೆಯಂತೆ ಎಲ್ಲಕ್ಷೇತ್ರಗಳಲ್ಲಿ ಶಾಸಕರು ಕೋವಿಡ್ ನಿರ್ವಹಣೆಯಲ್ಲಿ ತೊಡಗಿದ್ದಾರೆ.
– ಸುರೇಶ್‌ಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ