Advertisement

ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಿ

10:09 AM Jun 08, 2019 | Suhan S |

ಲಕ್ಷ್ಮೇಶ್ವರ: ಮೀಸಲಾತಿ ಪ್ರಮಾಣ ಹೆಚ್ಚಿಸುವಂತೆ ಆಗ್ರಹಿಸಿ ತಾಲೂಕು ವಾಲ್ಮೀಕಿ ನಾಯಕ ಸಂಘದವರು ತಹಶೀಲ್ದಾರ್‌ಗೆ ಶುಕ್ರವಾರ ಮನವಿ ಸಲ್ಲಿಸಿದರು.

Advertisement

ಕೇಂದ್ರ ಈಗಾಗಲೇ ಎಸ್‌ಟಿ ಜನಾಂಗಕ್ಕೆ ಶೇ 7.5 ಮೀಸಲಾತಿ ನೀಡುತ್ತಿದೆ. ಆದರೆ ರಾಜ್ಯದಲ್ಲಿ ಸುಮಾರು 60-70 ಲಕ್ಷ ಎಸ್‌ಟಿ ಜನಾಂಗವಿದ್ದು, ಇವರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದಿದ್ದಾರೆ. ಈ ಜನಾಂಗದವರಿಗೆ ನೇಮಕಾತಿ, ಮುಂಬಡ್ತಿ ಸಮಯದಲ್ಲಿ ಕೇಂದ್ರ ಮೀಸಲಾತಿಯನ್ನೇ ರಾಜ್ಯದಲ್ಲೂ ನೀಡಬೇಕು.

ಎಸ್‌ಟಿ ಜನಾಂಗದ ಹೆಸರಿನಲ್ಲಿ ಬೇರೆ ಬೇರೆ ಜಾತಿಯವರು ಸರ್ಟಿಪಿಕೇಟ್ ಪಡೆದುಕೊಂಡು ಸರ್ಕಾರದ ಲಾಭ ಪಡೆಯುತ್ತಿದ್ದು, ನಿಜವಾದ ಎಸ್‌ಟಿ ಜನಾಂಗದವರಿಗೆ ಅನ್ಯಾಯವಾಗುತ್ತಿದೆ. ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ವಿವಿಧ ಹಂತಗಳಲ್ಲಿ ಲಾಭ ಪಡೆದಿರುವವರನ್ನು ಪತ್ತೆ ಹಚ್ಚಲು ಸತ್ಯ ಶೋಧನಾ ಸಮಿತಿ ರಚಿಸಬೇಕು. ಪ್ರತ್ಯೇಕ ಪ. ಪಂಗಡದ ಸಚಿವಾಲಯ ಮತ್ತು ಸಂವಿಧಾನಾತ್ಮಕವಾಗಿ ಎಲ್ಲ ಸೌಲಭ್ಯಗಳನ್ನು ಎಸ್‌ಟಿ ಜನಾಂಗಕ್ಕೆ ನೀಡಬೇಕು ಎಂದು ಮನವಿ ಮೂಲಕ ಆಗ್ರಹಿಸಿದರು.

ಮನವಿ ಸ್ವೀಕರಿಸಿದ ತಹಶೀಲ್ದಾರ್‌ ಭ್ರಮರಾಂಭ ಗುಬ್ಬಿಶೆಟ್ಟರ, ಜಿಲ್ಲಾಧಿಕಾರಿಗಳಿಗೆ ತಲುಪಿಸುವುದಾಗಿ ಹೇಳಿದರು. ತಾಲೂಕು ಅಧ್ಯಕ್ಷ ಚಂದ್ರಶೇಖರ ತಳವಾರ, ಪ್ರ. ಕಾರ್ಯದರ್ಶಿ ಎಚ್.ಟಿ. ಜಾಲಿಮರದ, ಎಂ.ಬಿ. ಕಗ್ಗಲಗೌಡರ, ರಾಜಶೇಖರ ಮೇಲ್ಮರಿ, ಕೆ.ಒ. ಹುಲಿಕಟ್ಟಿ, ಕೆ.ಎಚ್. ಗಂಗಣ್ಣವರ, ಮಂಜುನಾಥ ಶಿರಹಟ್ಟಿ, ಎನ್‌.ಕೆ. ಜಂತ್ಲಿ, ಯಲ್ಲಪ್ಪ ತಳವಾರ, ಭೀಮಪ್ಪ ಯಂಗಾಡಿ, ಆರ್‌.ಎಚ್. ತಳವಾರ, ಪಿ.ಎಸ್‌. ಕಗ್ಗಲಗೌಡರ, ಎಲ್.ಬಿ. ಕೋಳಿವಾಡ ಸೇರಿ ಅನೇಕರು ನಿಯೋಗದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next