Advertisement
ಉಡುಪಿ: ಪ್ರತಿ ಹತ್ತು ವರ್ಷಗಳಿಗೊಮ್ಮೆ ಜನಸಂಖ್ಯಾ ಗಣತಿ ನಡೆಯುತ್ತದೆ. ಪ್ರತಿವರ್ಷವೂ ಹಿಂದಿನ ಸಂಖ್ಯಾ ಹೆಚ್ಚಳವನ್ನು ಗಮನಿಸಿ ಸರಾಸರಿ ಲೆಕ್ಕವನ್ನೂ ಅಂಕಿಸಂಖ್ಯೆಗಳ ನಿರ್ದೇಶನಾಲಯ ಪ್ರಕಟಿಸುತ್ತದೆ.
Related Articles
Advertisement
2011ರಲ್ಲಿ ಉಡುಪಿ ನಗರಸಭೆ ಜನಸಂಖ್ಯೆ 1,44,960, ಕುಂದಾಪುರ ಪುರಸಭೆ ಜನಸಂಖ್ಯೆ 30,444, ಕಾರ್ಕಳ ಪುರಸಭೆ ಜನಸಂಖ್ಯೆ 6,881. ಸಾಲಿಗ್ರಾಮದ ಜನಸಂಖ್ಯೆ 7,183. ಇದರಲ್ಲಿ ಅಧಿಸೂಚಿತ ಪ್ರದೇಶಗಳನ್ನು ಸೇರಿಸಿದರೆ ಇನ್ನಷ್ಟು ಹೆಚ್ಚಿಗೆ ಇದೆ. 2001ರ ಜನಗಣತಿಯಂತೆ ಉಡುಪಿ ನಗರದ ಜನಸಂಖ್ಯೆ 1,13,039.
ಉಡುಪಿ ಜಿಲ್ಲೆಯ 1997 ರ ಅಂದಾಜು ಜನಸಂಖ್ಯೆ 11,35,888. ತಾಲೂಕುವಾರು ವಿವರ ಇಂತಿದೆ: ಕುಂದಾಪುರ ತಾಲೂಕು- 3,95,878, ಕಾರ್ಕಳ ತಾಲೂಕು – 2,06,390, ಉಡುಪಿ ತಾಲೂಕು- 5,33,742.
ಜಿಲ್ಲೆಯ 2017 ರ ಅಂದಾಜು ಜನಸಂಖ್ಯೆ 12,53,966. ಇದರಲ್ಲಿ ಕುಂದಾಪುರ ತಾಲೂಕು- 3,97,077, ಕಾರ್ಕಳ ತಾಲೂಕು- 2,19,372, ಉಡುಪಿ ತಾಲೂಕು- 6,37,517. 2021ರಲ್ಲಿ ಈ ಜನಸಂಖ್ಯೆ 13,26,053 ಕ್ಕೆ ಏರಬಹುದು.
ಕಾರ್ಕಳ ಸಣ್ಣ ತಾಲೂಕಾದರೂ ದೊಡ್ಡ ತಾಲೂಕು!ಉಡುಪಿ ಜಿಲ್ಲೆಯ ವ್ಯಾಪ್ತಿಯನ್ನು ವಿವರಿಸುವಾಗ ಕಾರ್ಕಳ ತಾಲೂಕನ್ನು ಸಣ್ಣ ತಾಲೂಕು ಎನ್ನುತ್ತೇವೆ. ಇದು ಜನಸಂಖ್ಯೆ ಆಧಾರದಲ್ಲಿ. ಆದರೆ ಭೌಗೋಳಿಕವಾಗಿ ಉಡುಪಿ ತಾಲೂಕಿಗಿಂತ ಕಾರ್ಕಳ ತಾಲೂಕು ದೊಡ್ಡದಿದೆ. ತಾಲೂಕುವಾರು ಭೌಗೋಳಿಕ ವಿಸ್ತೀರ್ಣ ಇಂತಿದೆ: ಕುಂದಾಪುರ- 1,559 ಚದರ ಕಿ.ಮೀ., ಕಾರ್ಕಳ – 1,091 ಚದರ ಕಿ.ಮೀ., ಉಡುಪಿ- 925 ಚದರ ಕಿ.ಮೀ. ಉಡುಪಿ ಜಿಲ್ಲೆ- ನಗರಸಭೆ ಅಸ್ತಿತ್ವಕ್ಕೂ ಕಾಕತಾಳೀಯ
1935ರಲ್ಲಿ ಏಳು ಗ್ರಾಮಗಳನ್ನು ಹೊಂದಿದ 3.75 ಚದರಮೈಲಿ ವಿಸ್ತೀರ್ಣದ ಉಡುಪಿ ನಗರಸಭೆ ಅಸ್ತಿತ್ವಕ್ಕೆ ಬಂತು. ಅನಂತರ ಪುರಸಭೆಯಾಯಿತು. 20-10-1995ರಲ್ಲಿ ಮಲ್ಪೆ, ಪುತ್ತೂರು, ಶಿವಳ್ಳಿ, ಹೆರ್ಗ, 76 ಬಡಗಬೆಟ್ಟು ಗ್ರಾಮಗಳನ್ನು ಒಳಗೊಂಡು 35 ವಾರ್ಡುಗಳ ನಗರಸಭೆಯಾಗಿ ಪರಿವರ್ತನೆಗೊಂಡಿತು. ವಿಸ್ತೀರ್ಣವು 9.6 ಚ.ಕಿ.ಮೀ.ನಿಂದ 68.28 ಚ.ಕಿ.ಮೀ.ಗೆ ವಿಸ್ತರಣೆಯಾಯಿತು. ಉಡುಪಿ ಜಿಲ್ಲೆ ಉದ್ಘಾಟನೆಗೊಂಡದ್ದು 1997ರಲ್ಲಿ. ಬೃಹತ್ ಉಡುಪಿಯ ನಗರಸಭೆ 1995 ರಲ್ಲಿ ಘೋಷಣೆಯಾದರೂ ನಗರಸಭೆ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದದ್ದು 1997ರಲ್ಲಿ. ಎರಡೂ ಒಂದೇ ವರ್ಷದಲ್ಲಿ ಅಸ್ತಿತ್ವಕ್ಕೆ ಬಂದುದನ್ನು ಕಾಕತಾಳೀಯ ಎನ್ನಬಹುದು. – ಮಟಪಾಡಿ ಕುಮಾರಸ್ವಾಮಿ