Advertisement

ಲಾಕ್ ಡೌನ್ ನಲ್ಲಿ ಮಹಿಳೆಯರ ದೂರು ಹೆಚ್ಚಳ : ಪ್ರಮೀಳಾ ನಾಯ್ಡು

07:19 PM Mar 05, 2021 | Team Udayavani |

ಬೆಂಗಳೂರು : ಕೋವಿಡ್-19 ಸಂದರ್ಭದಲ್ಲಿ ಉಂಟಾದ ಲಾಕ್‍ಡೌನ್‍ನಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದಿಂದ ನಡೆದ ವಾಹಿನಿಗಳ ನೇರ ಪ್ರಸಾರ ಕಾರ್ಯಕ್ರಮ, ಕೌನ್ಸಲಿಂಗ್ ಹಾಗೂ ಇಮೇಲ್ ಮೂಲಕ ಮಹಿಳಾ ದೌರ್ಜನ್ಯದ ಒಟ್ಟು 425 ದೂರುಗಳು ದಾಖಲಾಗಿದ್ದವು ಎಂದು ಆಯೋಗದ ಅಧ್ಯಕ್ಷೆ ಪ್ರಮೀಳಾ ರೆಡ್ಡಿ ತಿಳಿಸಿದರು.

Advertisement

ಲಾಕ್ ಡೌನ್ ಸಮಯದಲ್ಲಿ ಅನೇಕ ಮಹಿಳೆಯರು ಕೆಲಸ ಕಳೆದುಕೊಂಡರು. ಅನೇಕರು ವರ್ಕ್ ಫ್ರಮ್ ಹೋಮ್‍ನಿಂದ ಕಚೇರಿ ಕೆಲಸ ನಿರ್ವಹಿಸಿದರು. ಇಂತಹ ಸಂದರ್ಭದಲ್ಲಿ ಅನೇಕ ಕೌಟುಂಬಿಕ ಕಲಹ ಪ್ರಕರಣಗಳು ಬೆಳಕಿಗೆ ಬಂದವು. ಇವುಗಳನ್ನು ಆಯೋಗ ಪರಿಹರಿಸುವಲ್ಲಿ ಯಶಸ್ವಿಯಾಗಿದೆ ಎಂದರು.

ಆಯೋಗವು ಮಹಿಳೆಯರ ಕ್ಲಿಷ್ಟ ಸಮಸ್ಯೆಗಳನ್ನು ಪೊಲೀಸ್ ಠಾಣೆಗೆ ದೂರು, ನೀಡಿ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತದೆ. ಇತರೆ ಇಲಾಖೆಯ ದೌರ್ಜನ್ಯ ಪ್ರಕರಣಗಳನ್ನು ಕೌನ್ಸಲಿಂಗ್ ಮೂಲಕ ಇತ್ಯರ್ಥಗೊಳಿಸಲಾಗುವುದು. ಬಹಳಷ್ಟು ಮಹಿಳೆಯರು ಪುರುಷರಿಂದ ಮೋಸ, ದೌರ್ಜನ್ಯಕ್ಕೆ ಒಳಗಾದ ಸಂದರ್ಭದಲ್ಲಿ ಅವರಿಗೆ ಆಯೋಗ ಆತ್ಮಸ್ಥೆರ್ಯ ತುಂಬುತ್ತಿದೆ ಎಂದರು.

ಲಾಕ್‍ಡೌನ್ ಸಮಯದಲ್ಲಿ ಅನಾರೋಗ್ಯಕ್ಕೆ ಒಳಗಾದ ಮಹಿಳೆಯರಿಗೆ ಔಷಧ, ಬಡ ಮಹಿಳೆಯರಿಗೆ ಸಂಸ್ಥೆಗಳ ಮೂಲಕ ಆಹಾರ ಕಿಟ್‍ಗಳನ್ನು ವಿತರಿಸಲಾಯಿತು. ಆಶಾ ಕಾರ್ಯಕರ್ತೆಯರ ಮೇಲೆ ಕಳೆದ ಏಪ್ರಿಲ್‍ನಲ್ಲಿ ನಡೆದ ಪ್ರಕರಣ ಖಂಡಿಸಿ ಘಟನೆಗೆ ಕಾರಣರಾದ ವಿರುದ್ಧ ಎಫ್‍ಐಆರ್ ದಾಖಲಿಸಿ ಕ್ರಮ ಕೈಗೊಳ್ಳಲು ಆಯುಕ್ತರಿಗೆ ನಿರ್ದೇಶಿಸಲಾಗಿದೆ.

ಲಾಕ್ ಡೌನ್ ನಂತರ  ಅಧ್ಯಕ್ಷರು 19 ಜಿಲ್ಲೆಗಳಿಗೆ ಪ್ರವಾಸ ಕೈಗೊಂಡು ಅಲ್ಲಿನ ಸ್ವಾಧಾರ, ಮಹಿಳಾ ನಿಲಯ, ಎಂಎಸ್‍ಪಿಟಿಸಿಎಲ್, ಉಜ್ವಲ, ಸಖಿ-ಒನ್ ಸ್ಟಾಪ್ ಸೆಂಟರ್‍ಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಲಾಯಿತು ಎಂದರು.

Advertisement

ಸಮಾಜದ ಕಟ್ಟಕಡೆಯ ಮಹಿಳೆಗೂ ಆಯೋಗ ಸಹಾಯ ದೊರಕಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಮಹಿಳೆಯರ ದೌರ್ಜನ್ಯಕ್ಕೆ ದೂರುಗಳನ್ನು ದಾಖಲಿಸಲು ದೂರವಾಣಿ 080-22216486 ಇಮೇಲ್ ವಿಳಾಸ kswbang123@gmail.com ಅನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next