Advertisement

ಯುಪಿಎಸ್‌ಸಿ ಖಾಲಿ ಹುದ್ದೆ ಹೆಚ್ಚಳ

01:51 AM Feb 20, 2022 | Team Udayavani |

ಹೊಸದಿಲ್ಲಿ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಈ ಬಾರಿ ಖಾಲಿ ಹುದ್ದೆಗಳ ಸಂಖ್ಯೆಯನ್ನು 1,011ಕ್ಕೆ ಹೆಚ್ಚಿಸಿದೆ. 6 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಸಾವಿರಕ್ಕೂ ಹೆಚ್ಚು ಖಾಲಿ ಹುದ್ದೆ ಭರ್ತಿಗೆ ಮುಂದಾಗಿದೆ. ಮೊದಲಿಗೆ 861 ಹುದ್ದೆ ತೋರಿಸಿ, ಪರೀಕ್ಷೆಗೆ ಅಧಿಸೂಚನೆ ಹೊರಡಿಸಲಾಗಿತ್ತು. ಮತ್ತೆ ತಿದ್ದುಪಡಿ ಮಾಡಿ 1 ಸಾವಿರ ದಾಟಿಸಿದೆ.

Advertisement

ಈ ಬಾರಿ ಕೇಂದ್ರ ಸರಕಾರ ಭಾರತೀಯ ರೈಲ್ವೇ ನಿರ್ವಹಣ ಸೇವೆ (ಐಆರ್‌ಎಂಎಸ್‌)ಗೆ 150 ಸಿಬಂದಿಯನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ.

ಐದು ವರ್ಷಗಳಲ್ಲಿ ಯುಪಿಎಸ್‌ಸಿ ಹೊರಡಿಸುತ್ತಿದ್ದ ಖಾಲಿ ಹುದ್ದೆಗಳ ಪಟ್ಟಿ ಸಾವಿರ ಮುಟ್ಟುತ್ತಿರಲಿಲ್ಲ. 2016ರಲ್ಲಿ ಮಾತ್ರ 1,079 ಹುದ್ದೆಗಳ ಭರ್ತಿಗಾಗಿ ಪರೀಕ್ಷೆ ನಡೆದಿತ್ತು. ಇದನ್ನು ಬಿಟ್ಟರೆ 2017ರಲ್ಲಿ 980, 2018ರಲ್ಲಿ 782, 2019ರಲ್ಲಿ 896, 2020ರಲ್ಲಿ 796 ಹುದ್ದೆಗಳನ್ನು ಭರ್ತಿ ಮಾಡಲಾಗಿತ್ತು. ಕಳೆದ ವರ್ಷ 712 ಹುದ್ದೆಗಳಿಗೆ ಮಾತ್ರ ಪರೀಕ್ಷೆ ನಡೆದಿತ್ತು. ಕಳೆದ ಐದು ವರ್ಷಗಳಲ್ಲೇ ಇದು ಅತ್ಯಂತ ಕಡಿಮೆಯಾಗಿತ್ತು.

ಪ್ರಿಲಿಮಿನರಿ ಸುತ್ತಿಗೆ ಅರ್ಜಿ ಸಲ್ಲಿಸಲು ಫೆ. 22 ಕಡೆಯ ದಿನ. ಜೂ. 5ರಂದು ಪರೀಕ್ಷೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next