Advertisement

ಲೋಕಲ್‌ ರೈಲುಗಳಲ್ಲಿ  ಪ್ರಯಾಣ ನಿರ್ಬಂಧ ಉಲ್ಲಂಘನೆ ಹೆಚ್ಚಳ

09:31 AM Jul 06, 2021 | Team Udayavani |

ಮುಂಬಯಿ: ಕಚೇರಿ ಹಾಜರಾತಿ ಹೆಚ್ಚಳ ಮತ್ತು ಲೋಕಲ್‌ ರೈಲುಗಳಲ್ಲಿ ಪ್ರಯಾಣ ಲಭ್ಯವಿಲ್ಲದ ಕಾರಣ ಅನೇಕ ಜನರು ಯಾವುದೇ ಆತಂಕವಿಲ್ಲದೆ ಉಪನಗರ ಲೋಕಲ್‌ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದು, ನಾಲ್ಕು ಸಾವಿರ ನಕಲಿ ಗುರುತಿನ ಚೀಟಿಗಳನ್ನು ವಶಪಡಿಸಿಕೊಂಡಿರುವ ರೈಲ್ವೇ ಪೊಲೀಸರು 3.31 ಲಕ್ಷ ಪ್ರಯಾಣಿಕರ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

Advertisement

ರೈಲ್ವೇ ಮೂಲಗಳ ಪ್ರಕಾರ ಸೆಂಟ್ರಲ್‌ ರೈಲ್ವೇ ಉಪನಗರ ಮಾರ್ಗದಲ್ಲಿ 1,02,342 ಪ್ರಯಾಣಿಕರು ಸಿಕ್ಕಿಬಿದ್ದರೆ, 29,555 ಮಂದಿ ಪ್ರಯಾಣಿಕರು ಪಶ್ಚಿಮ ರೈಲ್ವೇ ಉಪನಗರ ಮಾರ್ಗದಲ್ಲಿ ಸಿಕ್ಕಿಬಿದ್ದಿ¨ªಾರೆ. ಅವರಲ್ಲಿ ಹೆಚ್ಚಿನವರು ಸಾಮಾನ್ಯ ಪ್ರಯಾಣಿಕರಾಗಿದ್ದು, ಅಗತ್ಯ ಸೇವೆಗಳಲ್ಲಿ ನೌಕರರ ಸಂಖ್ಯೆ ತೀರಾ ಕಡಿಮೆ ಎಂದು ಹೇಳಲಾಗಿದೆ. ಸಾಮಾನ್ಯ ಪ್ರಯಾಣಿಕರಿಗೆ ಪ್ರಯಾಣಿ ಸಲು ಅವಕಾಶವಿಲ್ಲದ ಕಾರಣ ಅವರು ರೈಲಿನಲ್ಲಿ ಪ್ರಯಾಣಿಸಲು ಪ್ರಯತ್ನಿ ಸುತ್ತಾರೆ. ಪರಿಣಾಮವಾಗಿ ಸಿಕ್ಕಿಬಿದ್ದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.

ನಿಲ್ದಾಣಗಳಲ್ಲಿ  ಪರಿಶೀಲಿಸದ ರೈಲ್ವೇ ಪೊಲೀಸರು:

ಲೋಕಲ್‌ ರೈಲುಗಳು ಅಗತ್ಯ ಸೇವಾ ಸಿಬಂದಿಗೆ ಮಾತ್ರ ಓಡುವುದರಿಂದ ಸಾಮಾನ್ಯ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ನಿಲ್ದಾ ಣದ ಪ್ರವೇಶದ್ವಾರದಲ್ಲಿ  ಪೊಲೀಸರು ಗುರುತಿನ ಚೀಟಿಗಳನ್ನು ಪರಿಶೀಲಿಸು ವುದಿಲ್ಲ ಮತ್ತು ಪ್ರಯಾಣಿಕರನ್ನು ನಿಲ್ದಾಣ ದಲ್ಲಿ ಒಳ ಬಿಡುತ್ತಾರೆ. ಅಲ್ಲದೆ ಕೆಲವು ನಿಲ್ದಾಣಗಳಲ್ಲಿ ಟಿಕೆಟ್‌ ನೀಡು ವಾಗ ಗುರುತಿನ ಚೀಟಿಯನ್ನು ಪರಿಶೀಲಿ ಸಲಾಗುವುದಿಲ್ಲ. ಇನ್ನೂ ಕೆಲ ವರಿಗೆ ಟಿಕೆಟ್‌ ನೀಡಲಾಗುವುದಿಲ್ಲ, ಆದ್ದರಿಂದ ಅವರು ಟಿಕೆಟ್‌ ಇಲ್ಲದೆ ಪ್ರಯಾಣಿಸುತ್ತಾರೆ. ಪರಿಣಾಮವಾಗಿ ಲೋಕಲ್‌ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. 2021ರ ಎಪ್ರಿಲ್‌ನಿಂದ 2021ರ ಜೂನ್‌  ವರೆಗಿನ ಮೂರು ತಿಂಗಳಲ್ಲಿ 1,31,897 ಟಿಕೆಟ್‌ ರಹಿತ ಪ್ರಯಾಣಿಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಎರಡು ತಿಂಗಳಲ್ಲಿ 4,000 ಗುರು  ತಿನ ಚೀಟಿ ಗಳನ್ನು ರೈಲ್ವೇ ವಶಪಡಿಸಿಕೊಂಡಿದೆ.

ಜೂನ್‌ನಲ್ಲಿ 40,525ಕ್ಕೆ ಏರಿಕೆ:

Advertisement

ಕೋವಿಡ್ ಎರಡನೇ ಅಲೆ ಬಳಿಕ 2021ರ ಎ. 14ರಿಂದ ಲೋಕಲ್‌ ಪ್ರಯಾ ಣವನ್ನು ಮತ್ತೆ ನಿಷೇಧಿಸಲಾಗಿದೆ. ಎಪ್ರಿಲ್‌ನಲ್ಲಿ ಪಶ್ಚಿಮ ರೈಲ್ವೇ ಉಪನಗರ ಮಾರ್ಗದಲ್ಲಿ  8,228 ಪ್ರಯಾಣಿಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಈ ಸಂಖ್ಯೆ ಮೇ ತಿಂಗಳಲ್ಲಿ 9,599 ಮತ್ತು ಜೂನ್‌ನಲ್ಲಿ 11,728ಕ್ಕೆ ಏರಿಕೆಯಾಗಿದೆ. ಮಧ್ಯ ರೈಲ್ವೇಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಎಪ್ರಿಲ್‌ನಲ್ಲಿ 28,910 ಪ್ರಯಾಣಿಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಈ ಸಂಖ್ಯೆ ಮೇ ತಿಂಗಳಲ್ಲಿ 32,907 ಮತ್ತು ಜೂನ್‌ನಲ್ಲಿ 40,525ಕ್ಕೆ ಏರಿಕೆಯಾಗಿದೆ.

ಗರಿಷ್ಠ 500 ರೂ. ದಂಡ :

ಉಪನಗರ ರೈಲು ಪ್ರಯಾಣಕ್ಕೆ ಅಗತ್ಯ ಸೇವೆಗಳ ನಕಲಿ ಗುರುತಿನ ಚೀಟಿಗಳನ್ನು ಬಳಸಲಾಗುತ್ತಿದೆ. ಎಪ್ರಿಲ್‌ನಿಂದ ಜುಲೈವರೆಗೆ 3,300 ನಕಲಿ ಗುರುತಿನ ಚೀಟಿಗಳನ್ನು ಮಧ್ಯ ರೈಲ್ವೇಯಲ್ಲಿ ಮತ್ತು 740 ನಕಲಿ ಗುರುತಿನ ಚೀಟಿಗಳನ್ನು ಪಶ್ಚಿಮ ರೈಲ್ವೇಯಲ್ಲಿ  ವಶಪಡಿಸಿಕೊಳ್ಳಲಾಗಿದೆ. ನಕಲಿ ಗುರುತಿನ ಚೀಟಿಗಳನ್ನು ಹೊಂದಿರುವವರಿಗೆ ಗರಿಷ್ಠ 500 ರೂ. ಗಳವರೆಗೆ ದಂಡ ವಿಧಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next