Advertisement

ಕೃಷಿ ಪದವಿ ಕೋರ್ಸುಗಳ ಪ್ರವೇಶಾತಿಯಲ್ಲಿ ರೈತರ ಮಕ್ಕಳ ಮೀಸಲಾತಿ ಹೆಚ್ಚಳ: ಸಚಿವ ಬಿ.ಸಿ.ಪಾಟೀಲ್

05:25 PM Feb 21, 2021 | Team Udayavani |

ಕಲಬುರಗಿ: ಬಿಎಸ್ಸಿ ಕೃಷಿ ಪದವಿಗಳ ಪ್ರವೇಶಾತಿಯಲ್ಲಿ ರೈತರ ಮಕ್ಕಳಿಗೆ ನೀಡಲಾಗುವ ಮೀಸಲಾತಿ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ತಾತ್ವಿಕವಾಗಿ ಒಪ್ಪಿಗೆಯಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಪದವಿಗಳ ಪ್ರವೇಶಾತಿಯಲ್ಲಿ ಈಗ ರೈತರ ಮಕ್ಕಳಿಗಾಗಿ ಇರುವ ಶೇ. 40 ರಷ್ಟು ಮೀಸಲಾತಿ ಯನ್ನು ಶೇ. 50ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಈ ಕುರಿತು ಬಜೆಟ್ ನಲ್ಲಿ ಮುಖ್ಯಮಂತ್ರಿ ಗಳು ಅಧಿಕೃತ ವಾಗಿ ಪ್ರಕಟಿಸಲಿದ್ದಾರೆ ಎಂದರು.

ಬಿಎಸ್ಸಿ ಕೃಷಿ, ತೋಟಗಾರಿಕೆ, ಪಶು ವಿಜ್ಞಾನ ಇತರ ಕೃಷಿಗೆ ಸಂಬಂಧಿಸಿದ ಕೋರ್ಸುಗಳ ಪ್ರವೇಶಾತಿ ಶೇ. 50ರಷ್ಟು ಹೆಚ್ಚಳವಾದಲ್ಲಿ ರೈತ ಮಕ್ಕಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಇದನ್ನೂ ಓದಿ:ಬಿಸಿನೀರು ಹಾಗೂ ತಣ್ಣೀರನ್ನು ದೈನಂದಿನ ಬದುಕಿನಲ್ಲಿ ಹೇಗೆ ಬಳಸಬೇಕು?

ಹಸು ಹಾಗೂ ಎತ್ತುಗಳು ಮೃತಪಟ್ಟರೂ ಪರಿಹಾರ ನೀಡುವ, ಮೇವಿನ ಬಣಮೆ ಸುಟ್ಟರೆ 50 ಸಾವಿರ ರೂ ಪರಿಹಾರ ನೀಡುವುದು  ಇತರ ವಿಷಯಗಳು ಬಜೆಟ್ ನಲ್ಲಿ  ಘೋಷಣೆಯಾಗಲಿವೆ ಎಂದು ಕೃಷಿ ಸಚಿವರು ವಿವರಣೆ ನೀಡಿದರು.

Advertisement

ಕೃಷಿ ಸಮ್ಮಾನದಲ್ಲಿ ರಾಜ್ಯ ದೇಶದಲ್ಲೇ ನಂ. 1: ಪ್ರಧಾನಮಂತ್ರಿ ಕೃಷಿ ಸಮ್ಮಾನ ಯಶಸ್ವಿಯಾಗಿ ಶೇ. 97.07 ರಷ್ಟು ಸಾಧನೆ ಮಾಡಿದ್ದಕ್ಕಾಗಿ ದೇಶದಲ್ಲೇ ರಾಜ್ಯ ಪ್ರಥಮ  ಸ್ಥಾನ ಪಡೆದಿದ್ದು, ಫೆ. 24ರಂದು ನವದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸಲಾಗುವುದು. ಇದು ಹೆಮ್ಮೆ ಸಂಗತಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಅತಿವೃಷ್ಡಿ ಹಾನಿಗೆ ವಾರದೊಳಗೆ ಎರಡನೇ ಕಂತಿನ ಹಣ ಬಿಡುಗಡೆಯಾಗಲಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಇದೇ ಸಂದರ್ಭದಲ್ಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next